ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭ
ಮಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಗುರುವಾರದಿಂದ ಮತ್ತೆ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಲಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್ ನಿಂದ ಜುಲೈ 31 ರವರೆಗೆ ಮೀನುಗಳ ಸಂತಾನೋತ್ಪತ್ತಿ ಕಾಲವಾದ ಹಿನ್ನಲೆಯಲ್ಲಿ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುತ್ತದೆ. ಹೀಗಾಗಿ ಎರಡು ತಿಂಗಳ ರಜೆ ಮುಗಿದ ಮೀನುಗಾರು ಮತ್ತೆ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾವಿರಾರು ಬೋಟ್ಗಳು ಗುರುವಾರದಿಂದ ಕಾರ್ಯನಿರ್ವಹಿಸಲಿವೆ. ಕರಾವಳಿಯಲ್ಲಿ ಇಷ್ಟು ದಿನ ಅಧಿಕ ಬೆಲೆಗೆ ಸಿಗುತ್ತಿದ್ದ ಮೀನುಗಳು, ಇನ್ನು ಕೊಂಚ […]
ನಿಟ್ಟೂರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಗ್ಯಾಸ್ ಸೌಲಭ್ಯ ವಿತರಣೆ
ಉಡುಪಿ: ನಗರದ ನಿಟ್ಟೂರು ಪ್ರೌಢಶಾಲೆಯಲ್ಲಿ ಎಲ್.ಪಿ.ಜಿ. ಗ್ಯಾಸ್ ಸೌಲಭ್ಯವಿಲ್ಲದ ವಿದ್ಯಾರ್ಥಿಗಳಿಗೆ ಉಚಿತವಾಗಿ ಗ್ಯಾಸ್ ಸೌಲಭ್ಯ ಒದಗಿಸುವ ವಿಶಿಷ್ಟ ಕಾರ್ಯಕ್ರಮ ಗುರುವಾರ ಶಾಸಕ ಕೆ. ರಘುಪತಿ ಭಟ್ ಅವರ ಆಧ್ಯಕ್ಷತೆಯಲ್ಲಿ ಜರಗಿತು. ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಗ್ಯಾಸ್ ಸಂಪರ್ಕ ಸೌಲಭ್ಯವನ್ನು ವಿತರಿಸಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುತ್ತಿರುವ ಶಾಲಾ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದರು. ಈ ವರ್ಷ ಒಟ್ಟು 20 ವಿದ್ಯಾರ್ಥಿಗಳಿಗೆ ಗ್ಯಾಸ್ ಸೌಲಭ್ಯ ಒದಗಿಸಲಾಗಿದೆ. 10 ವಿದ್ಯಾರ್ಥಿಗಳ ಮನೆಗೆ ಪ್ರಧಾನ […]
ಮಂಗಳೂರು: ಡೆಂಗ್ಯೂಗೆ ಮತ್ತೊಂದು ಬಲಿ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಡೆಂಗ್ಯು ಜ್ವರ ಅಟ್ಟಹಾಸ ಮೆರೆಯುತ್ತಿದ್ದು, ಗುರುವಾರ ಮಂಗಳೂರಿನಲ್ಲಿ ಮತ್ತೊಬ್ಬನನ್ನು ಬಲಿ ಪಡೆದಿದೆ. ಮಂಗಳೂರಿನ ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್ ಶೆಟ್ಟಿ (22) ಮೃತರು. ಎಂಟು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ತಿಕ್ ಗುರುವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಸಂಭ್ರಮದ ಆಟಿ ಅಮವಾಸ್ಯೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಗುರುವಾರ ಆಟಿ ಅಮಾವಾಸ್ಯೆ ಸಂಭ್ರಮದಿಂದ ನಡೆಯಿತು. ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ಹಾಗೂ ಕಾರಿಂಜ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನಕ್ಕೆ ಮುಂಜಾನೆಯೇ ಸಾವಿರಾರು ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡಿದರು. ಮುಂಜಾನೆ 4 ಗಂಟೆಯಿಂದಲೇ ಭಕ್ತರ ದಂಡು ಕ್ಷೇತ್ರದತ್ತ ಆಗಮಿಸತೊಡಗಿತು. ಶ್ರೀ ನರಹರಿ ಕ್ಷೇತ್ರದಲ್ಲಿ ಪರ್ವತ ಹತ್ತಿದ ಬಳಿಕವೇ ತೀರ್ಥಸ್ನಾನ ಮಾಡುವ ಅವಕಾಶವಿದ್ದು, ಕಾರಿಂಜ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಿದ […]
ಕುಂದಾಪುರ ಕನ್ನಡ ಜನಮಾನಸದಲ್ಲಿ ಬೆಸೆತಿರುವ ಸಮೃಧ್ಥ ಭಾಷೆ: ಸುರೇಂದ್ರನಾಥ ಶೆಟ್ಟಿ
ಉಡುಪಿ: ಕುಂದಾಪುರ ಕನ್ನಡ ಉದ್ಯಮದ ಭಾಷೆಯಲ್ಲ. ಇದು ಬದುಕಿನ ಭಾಷೆಯಾಗಿದೆ. ಹೀಗಾಗಿ ಈ ಭಾಷೆ ಇಂದಿಗೂ ಜೀವಂತವಾಗಿದೆ. ಕುಂದಾಪುರ ಕನ್ನಡ ಭಾಷೆಯ ಬೆಳವಣಿಗೆಗೆ ಅಕಾಡೆಮಿಯ ಅಗತ್ಯವಿಲ್ಲ. ಇದು ಜನಮಾನಸದಲ್ಲಿ ಬೆರೆತಿರುವ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಆಯೋಜಿಸಿದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡದ ಕಂಪನ್ನು ಪಸರಿಸುವ ಕುಂದಾಪುರ ಕನ್ನಡ […]