ಮರವಂತೆಯಲ್ಲಿ ರಂಗೇರಿದ ಜನಸಾಗರ: ಕಡಲ ಸ್ನಾನ ಮಾಡಿದ್ರು,ದೇವರ ದರ್ಶನ ಪಡೆದ್ರು

ಕುಂದಾಪುರ: ನದಿ-ಕಡಲು ನಡುವಿನ ಅಪೂರ್ವ ಮರವಂತೆಯ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಅಂಗವಾಗಿ ಗುರುವಾರ ಜನಜಾತ್ರೆ ಮೇಳೈಸಿತು. ಬೆಳಗ್ಗಿನ ಜಾವ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸಮುದ್ರ ಹಾಗೂ ನದಿಯಲ್ಲಿ ಸ್ನಾನ ಮಾಡಿದ ಬಳಿಕ ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ದೇವಸ್ಥಾನ ಪ್ರವೇಶಿಸಲು ಕಾದಿದ್ದವರ ಸರತಿಯ ಸಾಲು ಬಹುದೂರದವರೆಗೂ ವ್ಯಾಪಿಸಿತು. ನವವಿವಾಹಿತ ಜೋಡಿಗಳು, ಕೃಷಿಕರು, ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು. ಮರವಂತೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಮಚಂದ್ರ […]

ಉಡುಪಿ ಶ್ರೀಕೃಷ್ಣ ಮಠ: ಆ. 23: ಶ್ರೀಕೃಷ್ಣಜನ್ಮಾಷ್ಟಮಿ, ಆ. 24: ವಿಟ್ಲಪಿಂಡಿ

ಉಡುಪಿ: ಕೃಷ್ಣನ ನಾಡಿನಲ್ಲಿರುವ  ಶ್ರೀಕೃಷ್ಣ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂಭ್ರಮ ಆ. 23ರಂದು ಮತ್ತು ವಿಟ್ಲಪಿಂಡಿ (ಮೊಸರುಕುಡಿಕೆ) ಉತ್ಸವ ಆ. 24ರಂದು ಜರುಗಲಿದೆ.ಎರಡೂ ದಿನವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆಯಲಿದೆ.ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು  ತಿಳಿಸಿದ್ದಾರೆ. ಏನೇನು ಸಾಂಸ್ಕೃತಿಕ ಕಾರ್ಯಕ್ರಮ? ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ  ಆ. 18ರ ರಾತ್ರಿ ಶಮಾ ಕೃಷ್ಣ ಮತ್ತು ಶ್ರದ್ಧಾನೃತ್ಯ ತಂಡದಿಂದ ಸರ್ವಂ ಕೃಷ್ಣಮಯಂ ನೃತ್ಯರೂಪಕ, ಆ. 19ರಂದು ಫ‌ಯಾಜ್‌ ಖಾನ್‌ ಅವರಿಂದ ಭಕ್ತಿ […]

ನವದೆಹಲಿ: ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ ₹62.5 ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಪ್ರತಿ ಸಿಲಿಂಡರ್ ಗೆ 62.5 ರೂಪಾಯಿಯನ್ನು ಇಳಿಸಿದೆ. ಆ ಮೂಲಕ ಗ್ರಾಹಕರ ಹೊರೆ ತಗ್ಗಿಸಿದ್ದು, ದರ ಇಳಿಕೆಯಿಂದ ಪ್ರತಿ ಸಿಲಿಂಡರ್ ನ ಬೆಲೆಯು 574.50 ರೂಪಾಯಿಗೆ ಇಳಿದಿದೆ. ಗುರುವಾರದಿಂದಲೇ ನೂತನ ದರವು ಜಾರಿಗೆ ಬಂದಿದ್ದು, ಸಬ್ಸಿಡಿ ರಹಿತ ಗ್ರಾಹಕರು 14.2 ಕಿಲೋಗ್ರಾಂನ ಗರಿಷ್ಠ 12 ಗ್ಯಾಸ್ ಸಿಲಿಂಡರ್ ಪಡೆಯುವ ಸೌಲಭ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನದ ಬೆಲೆಯು ಕುಸಿದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ […]

ಪ್ರೈಮ್‌ ಉಡುಪಿ: ಬ್ಯಾಂಕಿಂಗ್‌ ಪರೀಕ್ಷಾ ತರಬೇತಿ ಆರಂಭ

ಉಡುಪಿ: ಉಡುಪಿಯ ಪ್ರೈಮ್‌ ಸಂಸ್ಥೆಯಿಂದ ನಡೆಯಲಿರುವ ಐಬಿಪಿಎಸ್‌, ಎಸ್‌ಬಿಐ, ಕರ್ಣಾಟಕ ಬ್ಯಾಂಕ್‌ ಕ್ಲರಿಕಲ್/ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಆ. 3ರಿಂದ ನೂತನ ವೀಕೆಂಡ್‌ ಬ್ಯಾಚ್ ತರಬೇತಿ ತರಗತಿಗಳು ಆರಂಭಗೊಳ್ಳಲಿದೆ. ಕರಾವಳಿ ಬೈಪಾಸ್‌ ಬಳಿಯ ಪ್ರೈಮ್‌ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಪೂರ್ವಭಾವಿಯಾಗಿ ಕಳೆದ ಶನಿವಾರ ಬ್ಯಾಂಕಿಂಗ್‌ ಪರೀಕ್ಷಾ ತರಬೇತಿ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಶೈಲೇಶ್‌ ಅವರು, ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಬರುವ […]

ನವದೆಹಲಿ: ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ಅಂಕಿತ, ತಲಾಖ್ ನೀಡಿದರೆ ಜೈಲ್ ಪಾಲು ಖಚಿತ

ನವದೆಹಲಿ: ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ನೀಡುವ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರು ತನ್ನ ಪತ್ನಿಯರಿಗೆ ತ್ರಿವಳಿ ತಲಾಖ್ ನೀಡಿದರೆ ಜೈಲು ಪಾಲಾಗುವುದು ಖಚಿತವಾಗಿದೆ. ಈ ಕಾಯ್ದೆಯು ಶೀಘ್ರವೇ ದೇಶದಲ್ಲಿ ಜಾರಿಯಾಗಲಿದೆ. ಈಗಾಗಲೇ ಈ ಮಸೂದೆಗೆ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಸದ್ಯ ರಾಷ್ಟ್ರಪತಿ ಅವರೂ ಅನುಮೋದನೆ ನೀಡಿದ್ದಾರೆ. ತ್ರಿವಳಿ ತಲಾಖ್ ನಿಂದಾಗಿ ದೇಶದಲ್ಲಿ ಲಕ್ಷಾಂತರ ಮುಸ್ಲಿಂ ಮಹಿಳೆಯರು […]