ಬಿ.ಎಸ್. ಯಡಿಯೂರಪ್ಪ ಇಂದೇ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಹಲವು ದಿನಗಳ ರಾಜಕೀಯ ಕೋಲಹಲಗಳ ಅನಂತರ ಬಿಜೆಪಿಗೆ ಆಡಳಿತ ನಡೆಸುವ ಅವಕಾಶ ದೊರೆತಿದ್ದು, ಹೀಗಾಗಿ  ಬಿ.ಎಸ್.ಯಡಿಯೂರಪ್ಪ ಶುಕ್ರವಾರವೇ ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಲು ಮನವಿ ಮಾಡಿದ್ದಾರೆ. ತಮ್ಮದು ಸಿಂಗಲ್ ಲಾರ್ಜೆಸ್ಟ್ ಪಕ್ಷ ಎಂದು ಹಕ್ಕು ಮಂಡಿಸಿದ್ದಾರೆ. ಕೇಂದ್ರಕ್ಕೆ ತೆರಳಿದ್ದ BJP ನಿಯೋಗಕ್ಕೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಂಜೆ 6.15ರ ಒಳಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ […]

ಕೊಲ್ಲೂರಿಗೆ ಆಗಮಿಸಿದ ಶ್ರೀಲಂಕಾ ಪ್ರಧಾನಿ: ಫೋಟೋ ವಿಡಿಯೋ ತೆಗೆಯದಂತೆ ಪತ್ರಕರ್ತರಿಗೆ ತಾಕೀತು

ಕುಂದಾಪುರ: ಶ್ರೀಲಂಕಾ‌ ಪ್ರಧಾನಿ‌ ರೆನಿಲ್ ವಿಕ್ರಮ್ ಸಿಂಘೆ ಇಂದು ಬೆಳಿಗ್ಗೆ 11.30 ಕ್ಕೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಆಗಮಿಸಿದರು. ಮಂಗಳೂರು ವಿಮಾನ‌ನಿಲ್ದಾಣದಿಂದ‌ ರಸ್ತೆ ಮಾರ್ಗದ ಮೂಲಕ ನೇರವಾಗಿ ಕೊಲ್ಲೂರಿಗೆ ಆಗಮಿಸಿದ ಅವರು ವಸತಿಗೃಹಕ್ಕೆ ತೆರಳಿ ಐದು ನಿಮಿಷ ವಿಶ್ರಾಂತಿ ಪಡೆದು ಬಳಿಕ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ದೇವರ ದರ್ಶನ ಪಡೆದ ಅವರು ಈಗಾಗಲೇ ಯಜ್ಞಶಾಲೆಯಲ್ಲಿ ನಡೆಯುತ್ತಿರುವ ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತರಿಗೆ ನಿರಾಕರಣೆ:ಹೆಚ್ಚುವರಿ ಭದ್ರತೆ ಹಿನ್ನೆಲೆಯಲ್ಲಿ ಮೊದಲು ಪತ್ರಕರ್ತರಿಗೆ ದೇವಸ್ಥಾನದ ಪ್ರವೇಶಾತಿಗೆ ನಿರಾಕರಿಸಿದ ಜಿಲ್ಲಾಡಳಿತ ಬಳಿಕ ಪತ್ರಕರ್ತರ ಮನವಿಗೆ […]

ಪಾರಂಪರಿಕವಾದ ಸಂಪ್ರದಾಯಿಕ ಪದ್ದತಿ ಮೀನುಗಾರಿಕೆ: ಎಂ.ಜೆ. ರೂಪ

ಮಂಗಳೂರು: ಮೀನುಗಾರಿಕೆ ಎನ್ನುವುದು ಪಾರಂಪರಿಕವಾದ ಒಂದು ಸಂಪ್ರದಾಯಿಕ ಪದ್ದತಿ. ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಆಹಾರ ಮೂಲ. ಬಡ ಜನರಿಗೆ ಇದು ಶ್ರೀಮಂತ ಆಹಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಹೇಳಿದರು. ನಗರದ ಓಷಿಯನ್ ಪರ್ಲ್ ಹೊಟೇಲಿನ ಪೆಸಿಫಿಕ್-5ರ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆ, ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ನಡೆದ ‘ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ’ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತಾನಾಡಿದರು. ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ ಎಂಬ ಕೈಪಿಡಿಯನ್ನು ಬಿಡುಗಡೆ […]

ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಝುಲೇಖ ಮಮ್ತಾಜ್ ಆಯ್ಕೆ

ಮಂಗಳೂರು: 2018ನೇ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ, ಬ್ಯಾರಿ ಕಲೆ ಕ್ಷೇತ್ರದಲ್ಲಿ ಖಾಲೀದ್ ತಣ್ಣೀರುವಬಾವಿ, ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಝುಲೇಖ ಮಮ್ತಾಝ್, ಬ್ಯಾರಿ ಜಾನಪದ ಕ್ಷೇತ್ರದಲ್ಲಿ ನೂರ್ ಮಹಮ್ಮದ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 50,000 ನಗದು ಹಾಗೂ ಪ್ರಶಸ್ತಿ ಪ್ರತ್ರ ಒಳಗೊಂಡಿದೆ. ಅಲ್ಲದೇ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರವನ್ನು ಜೀವರಕ್ಷಕ ವಿ.ಮುಹಮ್ಮದ್, ಮತ್ತು ಸಮಾಜ ಸೇವಕ ಬಿ.ಎಮ್ ಉಮ್ಮರಬ್ಬ ಹಾಜಿ ಯವರಿಗೆ ನೀಡಿ ಗೌರವಿಸಲಾಗುವುದೆಂದು ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅವರು ಸುದ್ದಿಗೋಷ್ಠಿಯಲ್ಲಿ […]

ಶ್ರೀಲಂಕಾ ಪ್ರಧಾನಿ ಭೇಟಿ ಹಿನ್ನೆಲೆ: ಕೊಲ್ಲೂರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್

ಕುಂದಾಪುರ: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಕೊಲ್ಲೂರು ಮೂಕಾಂಬಿಕ ದೇವಸ್ಥಾನ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ದೇವಸ್ಥಾ‌ನದ ವಠಾರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಅವರು, ದೇವರ ದರ್ಶನದ ಬಳಿಕ ನವಚಂಡಿಯಾಗದಲ್ಲಿ ಪಾಲ್ಗೊಂಡು ಬಳಿಕ ಮಂಗಳೂರಿಗೆ ತೆರಳಲಿದ್ದಾರೆ. ಕಳೆದ ಎರಡು ತಿಂಗಳ‌ ಹಿಂದಷ್ಟೆ ಈಸ್ಟರ್ ದಿನದಂದು ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರಧಾನಿಯವರಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲು ಉಡುಪಿ ಜಿಲ್ಲಾಡಳಿತ ಮುಂದಾಗಿದ್ದು, […]