ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಝುಲೇಖ ಮಮ್ತಾಜ್ ಆಯ್ಕೆ

ಮಂಗಳೂರು: 2018ನೇ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ, ಬ್ಯಾರಿ ಕಲೆ ಕ್ಷೇತ್ರದಲ್ಲಿ ಖಾಲೀದ್ ತಣ್ಣೀರುವಬಾವಿ, ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಝುಲೇಖ ಮಮ್ತಾಝ್, ಬ್ಯಾರಿ ಜಾನಪದ ಕ್ಷೇತ್ರದಲ್ಲಿ ನೂರ್ ಮಹಮ್ಮದ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ತಲಾ 50,000 ನಗದು ಹಾಗೂ ಪ್ರಶಸ್ತಿ ಪ್ರತ್ರ ಒಳಗೊಂಡಿದೆ. ಅಲ್ಲದೇ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರವನ್ನು ಜೀವರಕ್ಷಕ ವಿ.ಮುಹಮ್ಮದ್, ಮತ್ತು ಸಮಾಜ ಸೇವಕ ಬಿ.ಎಮ್ ಉಮ್ಮರಬ್ಬ ಹಾಜಿ ಯವರಿಗೆ ನೀಡಿ ಗೌರವಿಸಲಾಗುವುದೆಂದು ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ, ಸದಸ್ಯರಾದ ಬಶೀರ್ ಬೈಕಂಪಾಡಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಆರೀಪ್ ಪಡುಬಿದ್ರೆ , ಹಸನಬ್ಬ ಮೂಡಬಿದ್ರೆ, ಬ್ಯಾರಿ ವ್ಯಾಕರಣ ಸಂಯೋಜಕ ಅಬ್ದುಲ್ ರಝಾಕ್ ಅನಂತಾಡಿ ಉಪಸ್ಥಿತರಿದ್ದರು.