ಸಚಿವನಾಗಿ ಉತ್ತಮ ‌ಕಾರ್ಯ ನಿರ್ವಹಿಸಿದ್ದೇನೆ: ಖಾದರ್

ಮಂಗಳೂರು: ವಿಶ್ವಾಸ ಮತಯಾಚನೆಯಲ್ಲಿ ನಮಗೆ ಸೋಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ. ಸಚಿವನಾಗಿ ಉತ್ತಮ ಕಾರ್ಯ ಮಾಡಿದ್ದೇನೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶೇಷ ಅನುದಾನವನ್ನು ಜಿಲ್ಲೆಗೆ ತಂದಿದ್ದೇನೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಒಂದೊಂದು ಕ್ಷೇತ್ರಕ್ಕೆ ೬ ಕೋಟಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಿ, ಲೈವ್ ಬ್ಯಾಂಡ್, ಇಸ್ವಿಟ್ ಇವುಗಳನ್ನು ಬಂದ್ ಮಾಡಿಸಿದ್ದೇನೆ. ಕಳೆದ ಒಂದು ವರ್ಷದಿಂದ ಮರಳು ಮಾಫಿಯಾದ ವಿರುದ್ಧ ಕ್ರಮಕೈಗೊಂಡಿದ್ದೇನೆ. […]

ಪೆರ್ಡೂರು: ಬಸ್ ನಿರ್ವಾಹಕ ಕೊಲೆ ಪ್ರಕರಣ, ಮತ್ತೋರ್ವ ಆರೋಪಿ ಬಂಧನ

ಉಡುಪಿ: ಪೆರ್ಡೂರು ಸಮೀಪದ ಬೈರಂಪಳ್ಳಿ ದೂಪದಕಟ್ಟೆ ಹುಣ್ಸೆ ಬಾಕೇರ್ ನಿವಾಸಿ, ಬಸ್‌ ಕಂಡಕ್ಟರ್ ಪ್ರಶಾಂತ್ ಪೂಜಾರಿ (38) ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅಲಂಗಾರು ಗರಡಿ ಸಮೀಪದ ನಿವಾಸಿ ಸಚಿನ್ ನಾಯ್ಕ (24) ಎಂಬಾತನನ್ನು ಹಿರಿಯಡಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆ ಕ್ರಾಸ್‌ನಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿದೆ. ಜುಲೈ.11ರಂದು ಮಧ್ಯರಾತ್ರಿ ಮನೆಯ ಆವರಣದಲ್ಲಿ ಕತ್ತಿಯಿಂದ ಕಡಿದು ಪ್ರಶಾಂತ್ ಪೂಜಾರಿ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ಬಂಧಿತ ಆರೋಪಿ ಕುಕ್ಕೆಹಳ್ಳಿ ಬುಕ್ಕಿಗುಡ್ಡೆ ನಿವಾಸಿ […]

ಮಂಗಳೂರು: ವಿಮಾನ ರನ್ ವೇಯಿಂದ ಜಾರಿದ ಪ್ರಕರಣ; ಪೈಲೆಟ್ ಲೈಸೆನ್ಸ್ ರದ್ದು

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ‌ ನಡೆದಿದ್ದ ವಿಮಾನ ರನ್ ವೇಯಿಂದ ಜಾರಿದ ಪ್ರಕರಣ ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿಮಾನದ ಪೈಲಟ್‌ ಕ್ಯಾಪ್ಟನ್ ಪ್ರವೀಣ್ ಲೈಸೆನ್ಸ್ ರದ್ದುಗೊಂಡಿದೆ. ಕಳೆದ ಕೆಲ ದಿನಗಳ‌ ಹಿಂದೆ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ವಿಮಾನ ಜಾರಿತ್ತು. ಹೀಗಾಗಿ ಲೈಸನ್ಸ್ ರದ್ದು ಮಾಡುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಆದೇಶ ನೀಡಿದೆ. ನಿರ್ಲಕ್ಷ ಎಸಗಿದ ಹಿನ್ನೆಲೆಯಲ್ಲಿ ವಿಮಾನದ ಪೈಲೆಟ್ ಲೈಸೆನ್ಸ್ ರದ್ದಾಗಿದೆ. ಘಟನೆಯ ಹಿನ್ನೆಲೆ: ಜೂನ್‌ 30ರಂದು ಸಂಜೆ ದುಬೈಯಿಂದ […]

ಉಡುಪಿ: ಅಗಲಿದ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಶೃದ್ಧಾಂಜಲಿ

ಉಡುಪಿ: ಡೆಂಗ್ಯು ಜ್ವರದಿಂದ ಭಾನುವಾರ ರಾತ್ರಿ‌ ಮೃತರಾದ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತ ಶಶಿಧರ್ ಮಾಸ್ತಿಬೈಲು ಮಾತನಾಡಿ, ಪತ್ರಕರ್ತರು ತಮ್ಮ ಕೆಲಸದ ಜತೆಗೆ ಆರೋಗ್ಯದ ಬಗ್ಗೆಯು ಹೆಚ್ಚಿನ ಕಾಳಜಿ ವಹಿಸಬೇಕು. ಲವಲವಿಕೆಯ ವ್ಯಕ್ತಿತ್ವ, ಉತ್ತಮ ವಿಡಿಯೋ ಜರ್ನಲಿಸ್ಟ್ ಆಗಿದ್ದ ನಾಗೇಶ್ ಪಡು ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಆಶಿಸಿದರು. ನಾಗೇಶ್ ಅವರ ಭಾವಚಿತ್ರಕ್ಕೆ ಪತ್ರಕರ್ತರು ಪುಷ್ಪ ನಮನ ಸಲ್ಲಿಸಿ […]

ಮೂಡಬಿದಿರೆ: ಆಳ್ವಾಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 8ನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಬಿದಿರೆ ಮಿಜಾರ್‌ನ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸಿಎಸ್‌ಇ. ವಿಭಾಗದಲ್ಲಿ ಶೇ. 99 ಫಲಿತಾಂಶ ದಾಖಲಾಗಿದ್ದು, 90ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಜಸ್ಮಿನೆ ಪ್ರಿನ್ಸಿಲೋಬೊ ಶೇ.88.71 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಐಎಸ್‌ಸಿ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. 29 ಮಂದಿ ವಿಶಿಷ್ಟ ಶ್ರೇಣಿ ಗಳಿಸಿದ್ದು, ಹರ್ಷಿತಾ (ಶೇ.88.57 ಅಂಕ) ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇ […]