ಸಚಿವನಾಗಿ ಉತ್ತಮ ‌ಕಾರ್ಯ ನಿರ್ವಹಿಸಿದ್ದೇನೆ: ಖಾದರ್

ಮಂಗಳೂರು: ವಿಶ್ವಾಸ ಮತಯಾಚನೆಯಲ್ಲಿ ನಮಗೆ ಸೋಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ. ಸಚಿವನಾಗಿ ಉತ್ತಮ ಕಾರ್ಯ ಮಾಡಿದ್ದೇನೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶೇಷ ಅನುದಾನವನ್ನು ಜಿಲ್ಲೆಗೆ ತಂದಿದ್ದೇನೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಒಂದೊಂದು ಕ್ಷೇತ್ರಕ್ಕೆ ೬ ಕೋಟಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಿ, ಲೈವ್ ಬ್ಯಾಂಡ್, ಇಸ್ವಿಟ್ ಇವುಗಳನ್ನು ಬಂದ್ ಮಾಡಿಸಿದ್ದೇನೆ. ಕಳೆದ ಒಂದು ವರ್ಷದಿಂದ ಮರಳು ಮಾಫಿಯಾದ ವಿರುದ್ಧ ಕ್ರಮಕೈಗೊಂಡಿದ್ದೇನೆ. ಸ್ಯಾಂಡ್ ಬಜಾರ್ ಆ್ಯಫ್ ಮೂಲಕ ಮರಳಿಗೆ ಸಂಬಂಧಿಸಿದಂತೆ ಸಮಸ್ಯೆ ಇಲ್ಲದಾಗಿದೆ ಎಂದು ತಿಳಿಸಿದರು.
ಸರಕಾರ ಪತನ 1000 ಕೋ.ರೂ. ಸ್ಕ್ಯಾಮ್:
ಕಾಂಗ್ರೆಸ್, ಜೆಡಿ‌ಎಸ್ ಮೈತ್ರಿ ಸರಕಾರ ಪತನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಸುಮಾರು ಒಂದು ಸಾವಿರ ಕೋಟಿ ಸ್ಕಾಮ್. ಮೂರು ತಿಂಗಳ ಬಳಿಕ ಅತೃಪ್ತರೇ ಇದನ್ನು ಹೇಳುತ್ತಾರೆ.
ಬಿಜೆಪಿಯರು ಕೊಟ್ಟಿದ್ದನ್ನು ಒಪ್ಪಿಕೊಳ್ಳಲಿ, ಯಾಕೆ ಇಲ್ಲ ಅಂತ ಹೇಳ್ತಾರೆ. ನಮಲ್ಲಿಗೆ ಬೇರೆಯವರು ಬಂದು ಹುಳಿ ಹಿಂಡಿ ಇಷ್ಟೆಲ್ಲ ಆಗಿದೆ. ಸಮ್ಮಿಶ್ರ ಸರಕಾರ ಅಂದ ಮೇಲೆ ಸಣ್ಣ ಪುಟ್ಟ ಸಮಸ್ಯೆ ಆಗುತ್ತದೆ. ನಾವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ ಎಂದ ಅವರು, ಕಳೆದ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರ ಆಡಳಿಕ್ಕೆ ಬರಬೇಕು ಅಂತ ಜನ ಬಯಸಿದ್ದರು ಎಂದರು.