ಹಲ್ಲೆ ಆರೋಪಿ ಯೋಗೀಶ್ ಸಾಲ್ಯಾನ್ ಬಿಜೆಪಿಯಿಂದ ಅಮಾನತು
ಉಡುಪಿ: ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಆರೋಪಿ ಬಿಜೆಪಿ ಪಕ್ಷದ, ವಡಾಭಾಂಡೇಶ್ವರ ನಗರಸಭಾ ಸದಸ್ಯ ಯೊಗೀಶ್ ಸಾಲ್ಯಾನ್ ಅವರನ್ನು ಮಂಗಳವಾರ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ. ಘಟನೆಯ ಕುರಿತು ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು, ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಕ್ರಮ ಖಂಡನೀಯ. ಬಿಜೆಪಿ ಪಕ್ಷ ಇಂಥ ವಿಚಾರ ಸಹಿಸುವುದಿಲ್ಲ. ಆರೋಪಿತರ ವಿರುದ್ದ ಪಕ್ಷದ ವತಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದರು. ಘಟನೆ ಹಿನ್ನೆಲೆ: ಮಂಗಳವಾರ ಉಡುಪಿ […]
ಗರ್ಡಾಡಿ: ಕಾಡುಪ್ರಾಣಿ ದಾಳಿಗೆ ಸಾಕುನಾಯಿ ಬಲಿ
ಬೆಳ್ತಂಗಡಿ, ಜು. 16: ಕಾಡುಪ್ರಾಣಿಯೊಂದು ಸಾಕು ನಾಯಿಯನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಗರ್ಡಾಡಿ ಗ್ರಾಮದ ಡೆಂಜೋಳಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಡೆಂಜೋಳಿಯ ರಘುರಾಮ ಶೆಟ್ಟಿ ಎಂಬವರ ಮನೆಯ ಸಾಕು ನಾಯಿ ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಮನೆಯವರು ಹುಡುಕಾಡಿದಾಗ ಗದ್ದೆಯ ಸಮೀಪ ಮೃತದೇಹ ಪತ್ತೆಯಾಗಿದೆ. ನಾಯಿಯ ಮುಖದ ಭಾಗಕ್ಕೆ ಸಂಪೂರ್ಣ ಗಾಯವಾಗಿದ್ದು, ಕಣ್ಣುಗಳು, ಮೂತಿ ಚಚ್ಚಿ ಹುಡಿಯಾದಂತಿತ್ತು. ಚಿರತೆ ಅಥವಾ ಕಾಡು ಹಂದಿ ದಾಳಿ ನಡೆಸಿ ಕೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. […]
ಬಂಟಕಲ್ಲು ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗೆ ವಿ.ವಿ. ಚಿನ್ನದ ಪದಕ
ಉಡುಪಿ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ 2014-18ನೇ ಸಾಲಿನ ವಿದ್ಯಾರ್ಥಿ ಅವಿನಾಶ್ ಎಸ್. ಶೆಟ್ಟಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಚಿನ್ನದ ಪದಕ ಗಳಿಸಿದ್ದಾರೆ. ಪ್ರಶಸ್ತಿಯನ್ನು ಎಸ್. ಎಂ. ಪಂಚಗಟ್ಟಿ ಅವರು ಸ್ಥಾಪಿಸಿದ್ದು, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಅಭ್ಯಾಸ ಮಾಡಿದ ಸರಕಾರಿ/ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ನೀಡಲಾಗುತ್ತಿದೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬಂದಿ ವರ್ಗ […]
ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ
ಮಂಗಳೂರು: ಮಂಗಳೂರಿನ ಸುರತ್ಕಲ್ ನ ಅಕ್ರಮ ಟೋಲ್‌ಗೇಟ್ ವಿರುದ್ಧ ಏಕಕಾಲದಲ್ಲಿ ಕಾಂಗ್ರೆಸ್ ಬೆಂಬಲಿತ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಂಜಾನೆಯೇ ಟೋಲ್‌ಗೇಟ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ವಸೂಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸುವ ಸನಿಹದಲ್ಲೇ ಬಿಜೆಪಿಗರೂ ಕೂಡ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಪೊಲೀಸ್ ರಕ್ಷಣೆಯಲ್ಲಿ […]
ಗಂಗೊಳ್ಳಿ:ಬೊಬ್ಬರ್ಯ ದೈವಸ್ಥಾನಕ್ಕೆ ನೂತನ ಬಾವಿ ಅರ್ಪಣೆ
ಗಂಗೊಳ್ಳಿ : ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಗಂಗೊಳ್ಳಿ ಖಾರ್ವಿಕೇರಿಯ ಮಳಿಯಾಳಿ ಬೊಬ್ಬರ್ಯ ದೈವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ತೀರ್ಥ ಬಾವಿಯನ್ನು ಮಂಗಳವಾರ ಸಮರ್ಪಿಸಲಾಯಿತು.ಮಳಿಯಾಳಿ ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ಸುಮಾರು ೨.೭೦ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತೀರ್ಥ ಬಾವಿಯನ್ನು ಸಂಘದ ಪರವಾಗಿ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ದೈವಸ್ಥಾನಕ್ಕೆ ಸಮರ್ಪಿಸಿದರು. ಇದೇ ಸಂದರ್ಭ ಮಳೆಗಾಲದ ಮೀನುಗಾರಿಕಾ ಋತುವಿನಲ್ಲಿ ಮೀನುಗಾರಿಕೆಗೆ ತೆರಳಲು ಸ್ಥಳೀಯ ದೈವಕ್ಕೆ ಪೂಜೆ ಸಲ್ಲಿಸಿ, ಪ್ರಸಾದವನ್ನು ಸಮುದ್ರಕ್ಕೆ ಅರ್ಪಿಸಲಾಯಿತು. ಸಂಘದ […]