ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನುದಾನ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಉಡುಪಿ: ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2.25 ಕೋಟಿ ಅನುದಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಕೊರಗರ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೊರಗ ಸಮುದಾಯದವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ‌ ಆರಂಭಿಸಿದರು. ಕೊರಗ ಸಮುದಾಯದ ಸಂಘಟನೆ ತಯಾರಿಸಿದ ಜನ ಯೋಜನೆಯನ್ನು ಕೈಬಿಟ್ಟು, ಅಧಿಕಾರಿಗಳು ತಯಾರಿಸಿದ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಲು ನಿಗಮ ಹೊರಟಿದೆ. ಇದರಿಂದ ಆದಿವಾಸಿ ಜನಾಂಗದವರಿಗೆ ಸರಿಯಾದ ಅನುದಾನ ಹಂಚಿಕೆ ಆಗಲ್ಲ. ಅಲ್ಲದೆ, […]

ಮಣಿಪಾಲ: ರಾಜಾಪುರ ಸಾರಸ್ವತ ಮಹಿಳೆಯರಿಂದ ‘ಯವಾ ನೇಜಿ ಲಾವ್ಯ’

ಉಡುಪಿ: ಮಣಿಪಾಲದ ರಾಜಾಪುರ ಸಾರಸ್ವತ ಮಹಿಳಾ ವೇದಿಕೆಯ ವತಿಯಿಂದ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ಯವಾ ನೇಜಿ ಲಾವ್ಯ (ಬನ್ನಿ ನೇಜಿ ನಡೋಣ)‌ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್.ನಾಯಕ್ ಅವರ ನೇತೃತ್ವದಲ್ಲಿ ವೇದಿಕೆಯ ಸದಸ್ಯರೆಲ್ಲರೂ ಸೇರಿ ಸುರಿಯುವ ಮಳೆಯಲ್ಲಿಯೇ ಪಾಡ್ದನ ಹಾಡಿ, ಗದ್ದೆಯಲ್ಲಿ ನೇಜಿ (ಬತ್ತದ ಸಸಿ)ಗಳನ್ನು ನೆಟ್ಟು ತಮ್ಮ ಹಿರಿಯರ ಶ್ರಮ ಸಂಸ್ಕೃತಿಯನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಕಲಾಯಿಗುತ್ತಿನ ಮನೆಯವರಿಂದ ಗ್ರಾಮೀಣ […]

ವಿದ್ಯಾರ್ಥಿಗಳು ಸೇವಾ ಮನೋಭಾವ ನಾಯಕತ್ವ ಬೆಳೆಸಿಕೊಳ್ಳಿ: ಅನಂತ ಪದ್ಮನಾಭ

ಉಡುಪಿ: ವಿದ್ಯಾರ್ಥಿಗಳು ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಪೊಲೀಸ್‌ ಉಪನಿರೀಕ್ಷಕ ಅನಂತ ಪದ್ಮನಾಭ ಹೇಳಿದರು. ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಇಂಟರ್ಯಕ್ಟ್ ಕ್ಲಬ್‌ ಉದ್ಘಾಟನಾ ಸಮಾರಂಭದಲ್ಲಿ ‘ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ’ ವಿಷಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ತಿಳಿದುಕೊಂಡು ಅದನ್ನು ಇತರರಿಗೂ ತಿಳಿಸಬೇಕು. ಇದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದರ ಜತೆಗೆ ರಸ್ತೆ ಅಪಘಾತಗಳನ್ನು […]

‘ಇಂಗ್ಲೆಂಡ್ ಮುಡಿಗೆ 2019ರ ವಿಶ್ವಕಪ್’  ಸೂಪರ್ ಓವರ್ನ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ಗೆ ಗೆಲುವು

ಇಂಗ್ಲೆಂಡ್: 2019ರ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಸೂಪರ್ ಒವರ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ‌ ವಿಶ್ವಕಪ್ ಕಪ್ ತನ್ನ ಮುಡಿಗೇರಿಸಿಕೊಂಡಿದೆ. ಆ ಮೂಲಕ 44 ವರ್ಷಗಳ ಅನಂತರ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಒಲಿದಂತಾಗಿದೆ. ಸೂಪರ್ ಒವರ್ನ ಕೊನೆಯ ಎಸೆತದ ವರೆಗೂ ಕುತೂಹಲವಾಗಿಯೇ ಇದ್ದ ಪಂದ್ಯ ಮಾರ್ಟಿನ್ ಗಪ್ಟಿಲ್ ರನೌಟ್ ಆಗುವುದರೊಂದಿಗೆ ಆಂಗ್ಲರ ವಿಶ್ವಕಪ್ ಕನಸು ನನಸಾಯಿತು. ಇದಕ್ಕೂ‌ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ 50 ಓವರ್ನಲ್ಲಿ 8 ವಿಕೆಟ್ […]

‘ವಿವಿದ್’ ಹೋಲ್ಸೇಲ್ ಪಾರ್ಲರ್ ಆ್ಯಂಡ್ ಕಾಸ್ಮೇಟಿಕ್ ಪ್ರೋಡಕ್ಸ್ ಮಳಿಗೆ ಶುಭಾರಂಭ

ಉಡುಪಿ: ನಗರದ ಡಯಾನ ಸರ್ಕಲ್, ಪಾಂಡುರಂಗ ಟವರ್, ಎಚ್ಡಿಎಫ್ಸಿ ಬ್ಯಾಂಕ್ ನ ಸಮೀಪ ವಿವಿಧ ಹೋಲ್ಸೇಲ್ ಪಾರ್ನರ್ ಅಂಡ್ ಕಾಸ್ಮೇಟಿಕ್ ಪ್ರೋಡಕ್ಟ್ ಮಳಿಗೆಯು ಜುಲೈ 11ರಂದು ಶುಭಾರಂಭಗೊಂಡಿದೆ. ಮಳಿಗೆಯಲ್ಲಿ ಪಾರ್ಲರ್ ಅಂಡ್ ಕಾಸ್ಮೇಟಿಕ್ ಫ್ಯಾನ್ಸಿ ಉತ್ಪನ್ನಗಳು ಹೋಲ್ಸೇಲ್ ಹಾಗೂ ರೀಟೇಲ್ ದರದಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಕಲ್ಪಿಸಿದೆ.   ಮಳಿಗೆಯಲ್ಲಿ ಕಂಪನಿ ಬ್ರಾಂಡ್ ಗಳಾದ ಮೇಬಿಲ್ಯಾನ್ ನ್ಯೂಯಾರ್ಕ್, ಗಾರ್ನಿಯರ್, ಲೋರಿಯಲ್, ಸ್ಟಾಕ್ಸ್, ಮ್ಯಾಟ್ರಿಕ್ಸ್, ಮ್ಯಾಕ್, ಟಿಬಿಸಿ, ಲ್ಯಾಕ್ಮೆ, ಹೂಡ್ ಬ್ಯೂಟಿ, ಹಿಲಾರಿ ರೋಡ, ಮಿ-ಯಾನ್ […]