ತಾಂತ್ರಿಕ ದೋಷ: ಚಂದ್ರಯಾನ-2 ರಾಕೆಟ್ ಉಡಾವಣೆ ರದ್ದು
ಶ್ರೀಹರಿಕೋಟ: ತಾಂತ್ರಿಕ ಕಾರಣಗಳಿಂದ ಚಂದ್ರಯಾನ-2 ಉಡಾವಣೆ ತಾತ್ಕಾಲಿಕ ರದ್ದು ಮಾಡಲಾಗಿದೆ. ಉಡಾವಣೆಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಸ್ರೋ ಈ ನಿರ್ಧಾರ ಪ್ರಕಟಿಸಿದ್ದು ಸದ್ಯದಲ್ಲೇ ಉಡಾವಣೆಯ ಮುಂದಿನ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್ ಎಲ್ ವಿ ಮಾಕ್-3 ಬಾಹುಬಲಿ ಉಢಾವಣಾ ವಾಹನದಲ್ಲಿ ಗಗನನೌಕೆ ಸಾಗಬೇಕಾಗಿತ್ತು. ಚಂದ್ರನೆಡೆಗೆ ವಿಶೇಷತೆ ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ. ಚಲನೆಗೆ ನೆರವಾಗಲು ವಿಶೇಷ ಮೋಷನ್ ಪ್ಲ್ಯಾನಿಂಗ್ […]
ಯಡಿಯೂರಪ್ಪಗೆ ಸಿಎಂ ಗಿರಿ : ಸ್ವಗ್ರಾಮದಲ್ಲಿ ವಿಶೇಷ ಪೂಜೆ, ಪುನಸ್ಕಾರ
ಮಂಡ್ಯ : ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಅವರ ಸ್ವಗ್ರಾಮದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಹೋಮ, ಹವನ, ವಿಶೇಷ ಪೂಜೆ ನಡೆಯಲಿದೆ. ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎನ್ನುವ ಉದ್ದೇಶದಿಂದ ಅವರ ಸಂಬಂಧಿಗಳ ನೇತೃತ್ವದಲ್ಲಿ ಮನೆ ದೇವರಾದ ಗವಿಮಠದ ಸ್ವಾತಂತ್ರ್ಯ ಸಿದ್ದಲಿಂಗೇಶ್ವರನಿಗೂ ವಿಶೇಷ ಪೂಜೆ ಮಾಡಲಾಗುತ್ತದೆ. ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಹಾಗೂ ಅಧಿಕಾರಕ್ಕೇರುವ ಸಂದರ್ಭದಲ್ಲಿ […]
ಬಾಲಶಕ್ತಿ, ಬಾಲ ಕಲ್ಯಾಣ ಪುರಸ್ಕಾರ – ಪ್ರಸ್ತಾವನೆಗಳ ಆಹ್ವಾನ
ಉಡುಪಿ: 2019-20 ನೇ ಸಾಲಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡಲಾಗುವ ಬಾಲ ಶಕ್ತಿ ಪುರಸ್ಕಾರ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುವ ಬಾಲ ಕಲ್ಯಾಣ ಪುರಸ್ಕಾರ ಪ್ರಶಸ್ತಿಗಳನ್ನು ನೀಡಲು ಭಾರತ ಸರ್ಕಾರವು ಮಾರ್ಗಸೂಚಿಗಳನ್ವಯ ಸೂಕ್ತ ಪ್ರಸ್ತಾವನೆಗಳನ್ನು ಅರ್ಹ ಮಕ್ಕಳ/ ವ್ಯಕ್ತಿ/ ಸಂಸ್ಥೆಗಳಿಂದ ಮುಕ್ತ ನಾಮಪತ್ರಗಳನ್ನು ಆಗಸ್ಟ್ 31 ರ ಒಳಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಯರೋಗ ನಿಯಂತ್ರಣಕ್ಕೆ ಟಾರ್ಗೆಟ್ ರೂಪಿಸಿ:ಉಡುಪಿ ಜಿಲ್ಲಾಧಿಕಾರಿ
ಉಡುಪಿ: ಜಿಲ್ಲೆಯಲ್ಲಿ ಜುಲೈ 15 ರಿಂದ 27 ವರೆಗೆ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ನಡೆಯುವ ಕ್ಷಯರೋಗದ ಪತ್ತೆ ಹಚ್ಚುವಿಕೆಯ ಚಟುವಟಿಕೆಗಳಲ್ಲಿ ನಿರ್ದಿಷ್ಟವಾದ ಟಾರ್ಗೆಟ್‍ನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮ ರೂಪಿಸಿ, ದಿನ ನಿತ್ಯ ನಡೆಯುವ ಚಟುವಟಿಕೆಗಳ ವರದಿ ತಯಾರಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಕುರಿತು ಮಾಹಿತಿ […]
ಸಿದ್ಧಕಟ್ಟೆ:ರೋಟರಿ ಸಮುದಾಯ ದಳ ಪದಗ್ರಹಣ
ಸಿದ್ಧಕಟ್ಟೆ: ಮೂಡುಬಿದಿರೆಯ ರೋಟರಿ ಕ್ಲಬ್ ಪ್ರವರ್ತಿತ ಸಿದ್ಧಕಟ್ಟೆಯ ರೋಟರಿ ಸಮುದಾಯ ದಳ ಶನಿವಾರ ಸಂಜೆ ಏರ್ಪಡಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಈ ಸಂದರ್ಭ ದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್.ಅಬ್ದುಲ್ ಗಫೂರ್ , ರೋಟರಿ ಸಮುದಾಯ ದಳ ನೂತನ ಅಧ್ಯಕ್ಷ ಮಧ್ವರಾಜ್ ಜೈನ್, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ,ಆರ್ ಸಿ ಸಿ ಚೇರ್ಮನ್ ಜೆರಾಲ್ಡ್ ಡಿಸೋಜ ಶುಭ ಹಾರೈಸಿದರು. ಪ್ರಮುಖರಾದ ಎಸ್.ವಾಸುದೇವ ಆಚಾರ್ಯ, ಮೈಕಲ್ ಡಿಕೋಸ್ತ, […]