ಸಿದ್ಧಕಟ್ಟೆ:ರೋಟರಿ ಸಮುದಾಯ ದಳ ಪದಗ್ರಹಣ

ಸಿದ್ಧಕಟ್ಟೆ: ಮೂಡುಬಿದಿರೆಯ ರೋಟರಿ ಕ್ಲಬ್ ಪ್ರವರ್ತಿತ
ಸಿದ್ಧಕಟ್ಟೆಯ ರೋಟರಿ ಸಮುದಾಯ ದಳ ಶನಿವಾರ ಸಂಜೆ ಏರ್ಪಡಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭ ದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್.ಅಬ್ದುಲ್ ಗಫೂರ್ , ರೋಟರಿ ಸಮುದಾಯ ದಳ ನೂತನ ಅಧ್ಯಕ್ಷ ಮಧ್ವರಾಜ್ ಜೈನ್, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ,ಆರ್ ಸಿ ಸಿ ಚೇರ್ಮನ್ ಜೆರಾಲ್ಡ್ ಡಿಸೋಜ ಶುಭ ಹಾರೈಸಿದರು. ಪ್ರಮುಖರಾದ ಎಸ್.ವಾಸುದೇವ ಆಚಾರ್ಯ, ಮೈಕಲ್ ಡಿಕೋಸ್ತ, ಎಚ್.ಎ.ರಹಿಮಾನ್, ದಾಮೋದರ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಕಾರ್ಯದರ್ಶಿ ಎಚ್.ಎ.ರಹಿಮಾನ್, ಆರ್ ಸಿ ಸಿ ಚೇರ್ಮನ್ ದಾಮೋದರ ಶೆಟ್ಟಿಗಾರ್ ಮತ್ತಿತರರು ಇದ್ದರು.
ಮಾಜಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ, ಉಪನ್ಯಾಸಕ ವಿನಯಚಂದ್ರ, ಪಿಡಿಒ ಗಣೇಶ ಶೆಟ್ಟಿ, ಮಾಜಿ ಕಾರ್ಯದರ್ಶಿ ಬೋಜ ಮತ್ತಿತರರು ಅತಿಥಿಗಳನ್ನು ಪರಿಚಯಿಸಿದರು.
ನಿಕಟಪೂರ್ವ ಅಧ್ಯಕ್ಷ ಎಸ್.ವಾಸುದೇವ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನೂತನ ಕಾರ್ಯದರ್ಶಿ ಭರತ್ ಕುಮಾರ್ ಜೈನ್ ವಂದಿಸಿದರು. ಉಪನ್ಯಾಸಕ ಡಾ.ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ನೆಲ್ಯಾಡಿ ಮತ್ತು ಮಂದಾರತಿ ಶೆಟ್ಟಿ ಸಹಕರಿಸಿದರು.