ಸುರತ್ಕಲ್ ‌ಟೋಲ್ ಗೇಟ್ ವಿರೋಧಿ ಸಮಿತಿಯಿಂದ ಜಿಲ್ಲಾಧಿಕಾರಿ ಭೇಟಿ

ಮಂಗಳೂರು: ಮಂಗಳೂರಿನ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಜುಲೈ 16 ರಿಂದ ಸುಂಕ ವಿಧಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ದಕ್ಷಿಣ ಜಿಲ್ಲಾಧಿಕಾರಿಯನ್ನು ಸೋಮವಾರ ಭೇಟಿ ಮಾಡಿತು. ಟೋಲ್ ಗೇಟನ್ನು ಶಾಶ್ವತವಾಗಿ ಮುಚ್ವುವ ತೀರ್ಮಾನ ಜಾರಿಯಾಗಬೇಕು. ಯಾವುದೇ ಕಾರಣಕ್ಕೂ ನಾಳೆಯಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಬೇಕು, ಅಲ್ಲಿಯವರಗೆ ಯಥಾಸ್ಥಿತಿ ಮುಂದುವರಿಸಬೇಕು […]

ಗಾಂಜಾ ಸಾಗಾಟ: ಇಬ್ಬರ ಬಂಧನ

ಮಂಗಳೂರು: ದ್ವಿಚಕ್ರ ವಾಹನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.. ನಿಹಾಲ್ ಎಡ್ವಿನ್ ಹಾಗೂ ತ್ರಿಶೂಲ್ ಬಂಧಿತ ಆರೋಪಿಗಳು. ಮಂಗಳೂರಿನ ಹೊರ ವಲಯ ತಣ್ಣೀರು ಬಾವಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ವಾಹನ ಬಿಟ್ಟು ಓಡಲು ಪ್ರಯತ್ನಿಸಿದ್ದಾಗ ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿದು ಬಂಧಿಸಿದ್ದಾರೆ.. ಆರೋಪಿಗಳಿಂದ ಒಟ್ಟು 5,17,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಜು.16: ಚಂದ್ರಗ್ರಹಣ ಹಿನ್ನಲೆ ದೇವಸ್ಥಾನಗಳಲ್ಲಿ ದಿನನಿತ್ಯದ ಪೂಜೆಯಲ್ಲಿ ವ್ಯತ್ಯಾಸ 

ಮಂಗಳೂರು: ಜು.16ರಂದು‌ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕರಾವಳಿಯ ಪುಣ್ಯ ಕ್ಷೇತ್ರದಲ್ಲಿ ದಿನನಿತ್ಯದ ‌ಪೂಜೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ರಾತ್ರಿ 7ಕ್ಕೆ ನಡೆಯುವ ಮಹಾಪೂಜೆ, ಸಂಜೆ 6.30ಕ್ಕೆ ನಡೆಯಲಿದೆ. ಸಂಜೆ ಆಶ್ಲೇಷಾ ಬಲಿ ಸೇವೆ, ರಾತ್ರಿಯ ಭೋಜನ ವ್ಯವಸ್ಥೆ ಇರುವುದಿಲ್ಲ. ಅಲ್ಲದೇ 7 ಗಂಟೆಯ ಅನಂತರ ದೇವಸ್ಥಾನ ಪ್ರವೇಶಿವಿಲ್ಲ. ಆದರೆ ಬೆಳಗ್ಗಿನಿಂದ ಮಧ್ಯಾಹದ ವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾತ್ರಿ ಹೂವಿನ ಪೂಜೆ, ರಂಗಪೂಜೆ ಹಾಗೂ […]

ನಾಯಕತ್ವ‌ ಹಿಂಬಾಲಕರಿಂದ ಅವಲಂಬಿತ ಆಗದು: ಡಾ.ಅಲ್ವಿನ್ ಡೇಸಾ

ಉಡುಪಿ: ನಾಯಕತ್ವ ಎಂಬುದು ಎಷ್ಟು ಸಂಖ್ಯೆಯ ಹಿಂಬಾಲಕರಿದ್ದಾರೆ ಎನ್ನುವುದರ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ ಎಷ್ಟು ಸಂಖ್ಯೆಯ ನಾಯಕರನ್ನು ಓರ್ವ ನಾಯಕ ಬೆಳೆಸಿದ್ದಾನೆ ಎನ್ನುವುದರ ಮೇಲೆ ನಿಂತಿದೆ ಎಂದು ಮಂಗಳೂರು ಸಂತ ಅಲೋಶಿಯಸ್‌ ಕಾಲೇಜಿನ ಆಂಗ್ಲಭಾಷಾ ವಿಭಾಗದ ಸಹಪ್ರಾಧ್ಯಾಪಕ ಡಾ. ಆಲ್ವಿನ್‌ ಡೇಸಾ ಹೇಳಿದರು. ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ 2019–20ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಡಾ. ವಿನ್ಸೆಂಟ್‌ ಆಳ್ವ ವಿದ್ಯಾರ್ಥಿ ಸಂಘದ ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಮ್ಯಾಗಜಿನ್‌ ಅನ್ನು […]

ವಿಶ್ವಾಸದ ಮನೆಯಲ್ಲಿ ಶುಶ್ರೂಷೆ ಪಡೆದ ಆರು ಮಂದಿ ಜು. 16ರಂದು ತವರಿಗೆ 

ಉಡುಪಿ: ರಸ್ತೆ ಬದಿ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದ ಹೊರ ರಾಜ್ಯ ಮತ್ತು ಜಿಲ್ಲೆಯ ಆರು ಮಂದಿ ಶಂಕರಪುರದ ವಿಶ್ವಾಸದ ಮನೆಯ ಆರೈಕೆ ಹಾಗೂ ಶುಶ್ರೂಷೆಯಿಂದ ಗುಣಮುಖರಾಗಿದ್ದು, ಜು.16ರಂದು ಇವರೆಲ್ಲರನ್ನು ಅವರ ಕುಟುಂಬಗಳಿಗೆ ಒಪ್ಪಿಸಲಾಗುತ್ತಿದೆ. 2015ರ ಡಿ.31ರಂದು ಉಡುಪಿ ಶ್ರೀಕೃಷ್ಣ ಮಠದ ಬಳಿ ತುಮಕೂರು ಕುಣಿಗಲ್ ನಿವಾಸಿ ಶೋಭಾ, 2016ರ ಮೇ 4ರಂದು ಕುಂದಾಪುರ ಶಾಸ್ತ್ರ ಸರ್ಕಲ್ ಬಳಿ ಬೆಂಗಳೂರಿನ ಸುರೇಶ್(40), ಮೇ 11ರಂದು ಕೊಲ್ಲೂರು ಕ್ರಾಸ್ ಬಳಿ ತೆಲಂಗಾಣದ ನಂಬಯ್ಯ(50), ನ.22ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ […]