ದೇವಸ್ಥಾನದಲ್ಲಿ ರೇವಣ್ಣ ಅಸಭ್ಯ ವರ್ತನೆ; ಮಾಧ್ಯಮದ ವಿರುದ್ದ ಕಿಡಿ
ಮಂಗಳೂರು: ಕರಾವಳಿಯ ಧಾರ್ಮಿಕ ಸ್ಥಳಗಳ ಪ್ರವಾಸದಲ್ಲಿರುವ ಸಚಿವ ಎಚ್.ಡಿ. ರೇವಣ್ಣ ಕಟೀಲು ದೇವಸ್ಥಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಫೋಟೊ, ವಿಡಿಯೋ ತೆಗೆದ ವೇಳೆ ದಬಾಯಿಸಿದ ರೇವಣ್ಣ ದೇವಸ್ಥಾನದೊಳಗೆ ಅವಾಚ್ಯ ಶಬ್ದ ಬಳಸಿ ಮಾಧ್ಯಮದವರ ಮೇಲೆ ಕಿಡಿ ಕಾರಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾಗ ಪತ್ರಕರ್ತರು ಫೋಟೋ ಹಾಗೂ ವಿಡಿಯೋ ಮಾಡುತ್ತಿದ್ದರು. ಈ ವೇಳೆ ರೇಗಾಡಿದ ರೇವಣ್ಷ ಪೊಲೀಸರಿಂದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಸದ್ಯ ಈ ವೀಡಿಯೋ ತುಣುಕು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.
ಅನೈತಿಕ ಚಟುವಟಿಕೆ ಹಿನ್ನೆಲೆ; ಇಲಾಖೆಯಿಂದ ಅನುಮತಿ ಪಡೆಯಲು ಪಿಜಿ, ಹಾಸ್ಟೇಲ್ಗಳಿಗೆ ಪೊಲೀಸ್ ಇಲಾಖೆ ಸೂಚನೆ
ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ನಗರದಲ್ಲಿ ಪಿಜಿ, ಹಾಸ್ಟೆಲ್ ಗಳು ಹಾಗೂ ಇತರ ಸರ್ವೀಸ್ ಅಪಾರ್ಟ್ ಮೆಂಟ್ಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಹಾಸ್ಟೆಲ್, ಪಿಜಿ, ಸರ್ವೀಸ್ ಅಪಾರ್ಟ್ ಮೆಂಟ್ಗಳು ಹಾಗೂ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳ ಮಾಲೀಕರು, ಪಾಲುದಾರರು, ಆಡಳಿತ ಮಂಡಳಿ ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಬೇಕೆಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಆದೇಶ ಮಾಡಿದ್ದಾರೆ.
ಹೆದ್ದಾರಿ ಸಮೀಪದ ಕಟ್ಟಡ ಕುಸಿತ: ಅವಶೇಷದಡಿ 35 ಮಂದಿ ಯೋಧರು !
ದೇಶ: ಕುಮಾರ್ ಹಟ್ಟಿ-ನಹಾನ್ ಹೆದ್ದಾರಿಯ ಸಮೀಪವಿರುವ ಬಹುಮಹಡಿ ಕಟ್ಟಡವೊಂದು ಭಾರಿ ಮಳೆಗೆ ಸಿಲುಕಿ ಭಾನುವಾರದಂದು ಕುಸಿತ ಕಂಡಿದೆ. 35 ಮಂದಿ ಯೋಧರು ಸೇರಿದಂತೆ ಅನೇಕ ಮಂದಿ ಸಿಲುಕಿರುವ ಗುಮಾನಿ ವ್ಯಕ್ತವಾಗಿದೆ. ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲಾನ್ ನಲ್ಲಿ ಕುಸಿದಿರುವ ಈ ಕಟ್ಟಡದಲ್ಲಿ ಸಿಲುಕಿದ್ದ 15 ಮಂದಿ ಯೋಧರನ್ನು ಸದ್ಯ ಬಚಾವ್ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿಯಂತ್ರಣ ತಂಡ(ಎನ್ ಡಿ ಆರ್ ಎಫ್) ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ವಿಪತ್ತು ನಿರ್ವಹಣಾ ಕಾರ್ಯ ಮುಂದುವರೆಸಿದ್ದರು. ಚಂಡೀಗಢ -ಶಿಮ್ಲಾ ರಾಷ್ಟ್ರೀಯ […]
ಸುರತ್ಕಲ್: ಸಂಸದ-ಶಾಸಕರ ನೇತೃತ್ವದಲ್ಲಿ ಟೋಲ್ ವಿರೋಧಿ ಹೋರಾಟ ಖಾಸಗಿ ಕಾರುಗಳಿಗೂ ಟೋಲ್ ಪಡೆದರೆ ಎಚ್ಚರಿಕೆ- ಬಿಜೆಪಿ ವಾರ್ನಿಂಗ್
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ನಲ್ಲಿ ಸ್ಥಳೀಯ ಖಾಸಗೀ ವಾಹನಗಳಿಗೂ ಟೋಲ್ ಪಡೆಯುವುದನ್ನು ಬಿಜೆಪಿ ವಿರೋಧಿಸುತ್ತದೆ. ಮಾತ್ರವಲ್ಲ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಾ.ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಗುತ್ತಿಗೆ ವಹಿಸಿಕೊಂಡ ಕಂಪನಿ ನಷ್ಟವಾಗುತ್ತಿದೆ ಎನ್ನುವುದು ಸಾರ್ವಜನಿಕರನ್ನು, ಅಧಿಕಾರಿಗಳನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಗುತ್ತಿಗೆ ಹಾಕುವ ಸಂದರ್ಭ ಕಂಪನಿ ಸ್ಥಳೀಯ ಖಾಸಗೀ ವಾಹನವನ್ನು ಬಿಟ್ಟು […]
ಪೆರ್ಡೂರು ಕೊಲೆ ಪ್ರಕರಣ: ಆರೋಪಿಯ ಪತ್ತೆಗೆ ನಮ ಬಿರುವೆರ್ ಹಿರಿಯಡಕ ಆಗ್ರಹ
ಹಿರಿಯಡ್ಕ: ನಮ ಬಿರುವೆರ್ ಹಿರಿಯಡಕ ಇದರ ಪದಾಧಿಕಾರಿಗಳುವೈಯಕ್ತಿಕ ಕಲಹದಿಂದ ಹತ್ಯೆಗೀಡಾಗಿರುವ ಪೆರ್ಡೂರು ಬೈರಂಪಳ್ಳಿ ನಿವಾಸಿ ಪ್ರಶಾಂತ್ ಪೂಜಾರಿಯವರ ಪತ್ನಿಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪೋಲೀಸ್ ಇಲಾಖೆ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ರೀತಿಯ ಶಿಕ್ಷೆಗೆ ಗುರಿಪಡಿಸುವಂತೆ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷ ಶೇಖರ ಪೂಜಾರಿ, ಸಂಘಟನೆಯ ಗೌರವ ಅಧ್ಯಕ್ಷರಾದ ಸುಂದರ […]