ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಬೇಕು: ಡಾ. ನಿಕೇತನ

ಉಡುಪಿ: ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಯಲ್ಲಿ‌ ತೊಡಗುವ ಜತೆಗೆ, ಮಹಿಳೆಯರನ್ನು ಸಶಕ್ತಗೊಳಿಸಬೇಕು. ಮಹಿಳೆಯರು ಸ್ವಾವಲಂಬಿಗಳಾಗುವುದರ ಜತೆಗೆ ಇತರರಿಗೆ ಸಹಾಯ ಹಸ್ತ ಚಾಚುವ ಕೈಗಳಾಗಬೇಕು ಎಂದು ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಹೇಳಿದರು.ಉಡುಪಿಯ ಅಜ್ಜರಕಾಡು ಮಹಿಳಾ ಸಮಾಜದಲ್ಲಿ ಭಾನುವಾರ ಸಾ-ಫಲ್ಯ ಟ್ರಸ್ಟ್‌ ಉದ್ಘಾಟಿಸಿ ಮಾತನಾಡಿದರು.ದುಡಿಯುವ ಕೈಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಸೊರಗುತ್ತಿರುವ ಮನಸ್ಸಿಗಳಿಗೆ ಒಳ್ಳೆಯ ವಿಚಾರಗಳನ್ನು ನೀಡಬೇಕು ಎಂದರು.ಸಾಫಲ್ಯ ಟ್ರಸ್ಟ್‌ ಅಧ್ಯಕ್ಷೆ ನಿರುಪಮಾ ಪ್ರಸಾದ್‌ ಶೆಟ್ಟಿ ಮಾತನಾಡಿ, ಸಾಮಾಜಿಕ ಕಾರ್ಯ, ಬಡವರಿಗೆ ನೆರವು […]

ನಮ್ಮೂರಿನ ಶಾಲೆ ಮುಚ್ಚಲು ಬಿಡುವುದಿಲ್ಲ: ಆಡಳಿತ ಸಮಿತಿ, ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ಉಡುಪಿ: ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ಎಲ್ಲ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿಯನ್ನು ಶಿಕ್ಷಣ ಸಂಸ್ಥೆಯ ಅನುಮತಿಯಿಲ್ಲದೆ ಕೌನ್ಸೆಲಿಂಗ್ ಮೂಲಕ ಶಿಕ್ಷಕ ವರ್ಗ ಹಾಗೂ ಶಿಕ್ಷಕೇತರ ಸಿಬಂದಿಯನ್ನು ವರ್ಗಾಯಿಸಲಾಗಿದೆ. ಇದನ್ನೂ ಖಂಡಿಸಿ ಡಿಡಿಪಿಐ ಕಚೇರಿ ಆವರಣದಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಆಡಳಿತ ಸಮಿತಿ, ಹಳೆ ವಿದ್ಯಾರ್ಥಿಗಳು, ಸಮಸ್ಥ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತೇವೆ ಎಂದು ಪಂಚನಬೆಟ್ಟು ವಿದ್ಯಾವರ್ಧಕ ಆಡಳಿತ ಸಮಿತಿ ಅಧ್ಯಕ್ಷ ಎ.ನರಸಿಂಹ ಎಚ್ಚರಿಕೆ  ನೀಡಿದ್ದಾರೆ. ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 29 ವರ್ಷದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ […]

ಜು.15: ವಿಶ್ವಕರ್ಮ ಜಗದ್ಗುರು ಪೀಠ ಕಜ್ಕೆ ಶಾಖಾ ಮಠ ಉದ್ಘಾಟನೆ, ಜು.16: ರಿಂದ ಶ್ರೀ ಶಿವಸುಜ್ಞಾನತೀಥ ಶ್ರೀಪಾದರ 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ 

ಉಡುಪಿ: ಕೊಕ್ಕರ್ಣೆ ಕಜ್ಕೆಯಲ್ಲಿ ನೂತನವಾಗಿ ನಿರ್ಮಾಣವಾದ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ನೂತನ ಶಾಖಾ ಮಠ ಜು.15ರಂದು ಸಾಯಂಕಾಲ 5.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ನೂತನ ಶಾಖಾ ಮಠದ ನಿರ್ಮಾಣ ಸಮಿತಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಜ್ಕೆ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಹಬ್ಬಳ್ಳಿ ಸಾಹಿತಿ ಭೀಮ ಸೇನ ಬಡಿಗೇರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ವಿಧಾನ […]

ಶಿರ್ವ: ಬಂಟಕಲ್ಲು ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ಹಲ್ಲಿನ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದ್ದು ವಿಶೇಷವಾಗಿ ದವಡೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗ ಶಸ್ತ್ರಚಿಕಿತ್ಸೆ ನಡೆಸಬೇಕಾದ ಸಂದರ್ಭದಲ್ಲಿ ದಂತ ವೈದ್ಯರು ಸಾಮಾನ್ಯವಾಗಿ ದೋಷಪೂರಿತ ದವಡೆಯ ಸಿ.ಟಿ. ಸ್ಕ್ಯಾನ್‌ ಅಥವಾ ಸಿ.ಬಿ. ಸ್ಕ್ಯಾನ್‌ ಮೂಲಕ ದವಡೆಯ ಚಿತ್ರಣವನ್ನು ಪಡೆಯುತ್ತಿದ್ದರು. ಇದರ ಆಧಾರದಲ್ಲಿ ರೋಗಗ್ರಸ್ತ ಭಾಗಗಳನ್ನು ನಿರ್ಧರಿಸಿ, ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕಾದುದರಿಂದ ದವಡೆಯ ಸರ್ಜರಿ ಪೂರ್ಣಗೊಳಿಸಲು ಅಧಿಕ ಸಮಯ ಬೇಕಾಗುತ್ತಿತ್ತು. ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಚೈತ್ರಾ ಪೈ, ಮಹಿಮಾ […]

ಜು.16: ಮುನಿಯಾಲು ಆಯುರ್ವೇದ ಸಂಸ್ಥೆ ವತಿಯಿಂದ ಔಷಧೀಯ ಸಸ್ಯಗಳ ಉಚಿತ ವಿತರಣೆ

ಉಡುಪಿ: ಮುನಿಯಾಲು ಆಯುರ್ವೇದ ಸಂಸ್ಥೆ ವತಿಯಿಂದ ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಸಂಸ್ಥೆಯ ಆವರಣದಲ್ಲಿ ಜು. 16ರಂದು ಆಸಕ್ತ ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಜಾತಿಯ ಔಷಧೀಯ ಗುಣಗಳುಳ್ಳ ಮರ, ಗಿಡ, ಬಳ್ಳಿಗಳ ಸಸಿಗಳ ವಿತರಣೆ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4ರ ತನಕ ಉಚಿತವಾಗಿ ಮರಗಳಾದ ವಾಟೆಹುಳಿ, ರಾಮಪತ್ರೆ, ಬಿಲ್ವಪತ್ರೆ, ನೆಲ್ಲಿ, ಕಾಡು ಬಾದಾಮಿ, ಪುನರ್ಪುಳಿ, ಹೊಂಗೆ, ಗಾರ್ಡನ್‌ ಅಶೋಕ, ತೇಗ, ನೇರಳೆ, ತಾರೆಕಾಯಿ, ನೊರೆಕಾಯಿ, ಅತ್ತಿಮರ, ರಂಜೆ, ಬಳ್ಳಿ ಮತ್ತು […]