ಗಾಂಜ ಹೊಂದಿದ್ದ ಓರ್ವನ ಬಂಧನ; 1 ಕೆ.ಜಿ. ಗಾಂಜ ವಶ

ಬಂಟ್ವಾಳ: ಗಾಂಜಾ ಹೊಂದಿದ್ದ ಓರ್ವ ವ್ಯಕ್ತಿಯನ್ನು ಶನಿವಾರ ಬಂಟ್ವಾಳದಲ್ಲಿ  ಬಂಧಿಸಲಾಗಿದೆ.. ಅಮೀರ್ ಹುಸೈನ್ (45) ಬಂಧಿತ‌ ಆರೋಪಿ. ಈತನನ್ನು ಬಂಟ್ವಾಳದ ತುಂಬೆ ಎಂಬಲ್ಲಿ ಬಂಧಿಸಲಾಗಿದ್ದು, 39,000 ಮೌಲ್ಯದ 1 ಕೆಜಿ 330 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತ ಮಂಗಳೂರಿನ ಮೂಡುಶೆಡ್ಡೆಯ ಓರ್ವ ವ್ಯಕ್ತಿಯಿಂದ ಗಾಂಜಾ ಪಡೆದಿದ್ದ ಎಂದು‌ ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ‌ ಮರಳು ಸಾಗಾಟ: ಲಾರಿ ವಶ

ಮಂಗಳೂರು: ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಮರಳು ಲಾರಿಯನ್ನು ಮಂಗಳೂರಿನ ಪಡೀಲ್ ಜಂಕ್ಷನ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. KA-46-3202 ಲಾರಿಯನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ. ಲಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಸುಮಾರು 10  ಲಕ್ಷ ರೂ.‌ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ 8ನೇ  ಪರಿಸರ ಸ್ನೇಹಿ ಅಭಿಯಾನ

ಉಡುಪಿ: ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ 8ನೇ ವಾರದ ಪರಿಸರ ಸ್ನೇಹಿ ಅಭಿಯಾನವು ಶನಿವಾರ ಸಂಜೆ ಅಜ್ಜರಕಾಡು ಉದ್ಯಾನವನದಲ್ಲಿ ನಡೆಯಿತು. ವೆಸ್ಟ್‌ ಇಂಡೀಸ್‌ನಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಶಿವಾನಂದ ನಾಯಕ್ ಅವರು ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನವನ್ನು ಮಾಡಿದರೆ ಜಾಗತಿಕ ತಾಪಮಾನ ಏರಿಕೆ ಪ್ರಕ್ರಿಯೆಗೆ ಕಡಿವಾಣ ಹಾಕಬಹುದು. ಗಿಡಗಳನ್ನು ನೆಡುವ ಬಗ್ಗೆ ಮಾತ್ರ ಗಮನಹರಿಸದೇ, ಅದನ್ನು ಪೋಷಿಸಿ ಹೆಮ್ಮರವಾಗಿ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು. ನಗರಸಭಾ ಸದಸ್ಯೆ ರಶ್ಮಿ […]

ಉಡುಪಿಯಲ್ಲಿ ಹಲಸಿನ ಮೇಳ: ಎಂಥಾ ಸೊಗಸು ಹಲಸಿನ ತಿನಿಸು ಎಂದ ಹಲಸು ಪ್ರಿಯರು

ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ವತಿಯಿಂದ ನಡೆದ ಹಲಸು ಮೇಳಕ್ಕೆ ಭರ್ಜರಿ ಓಪನಿಂಗ್ ದೊರೆತಿದೆ.ಹಲಸಿನ್ ವಿವಿಧ ಖಾದ್ಯಗಳಾದ ಹಲಸಿನ ಪಾಯಸ, ಕಬಾಬ್, ಮುಳ್ಳ, ಚಟ್ಟಂಬಡೆ, ಮಾಂಬಳ, ಹಪ್ಪಳ, ಸಂಡಿಗೆ, ಬಿಸಿ ಬಿಸಿಯಾಗಿ ಅಲ್ಲೇ ತಟ್ಟಿ ಕಾಯಿಸಿಕೊಡುವ ಹಲಸಿನ ಹೋಳಿಗೆ, ಹೀಗೆ ಬಾಯಿ ಚಪ್ಪರಿಸುವಂತಹ ವೈವಿಧ್ಯಮಯ ಹಲಸಿನ ಖಾದ್ಯಗಳು ಅಲ್ಲಿತ್ತು. ಸುಮಾರು 24ಕ್ಕೂ ಅಧಿಕ ಮಳಿಗೆಗಳು ತೆರೆದುಕೊಳ್ಳುತ್ತಿತ್ತು. ಪ್ರತಿಯೊಂದು ಮಳಿಗೆಗಳಲ್ಲೂ ಭಿನ್ನವಾದ ವಸ್ತುಗಳು. ಹಲಸಿನ ಖಾದ್ಯಗಳು […]

ಸವಲತ್ತು ಜನರಿಗೆ ತಲುಪಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ‌ ವಿರುದ್ಧ ಕ್ರಮ: ಐವನ್ ಡಿಸೋಜ

ಉಡುಪಿ: ನಮ್ಮದು ನೈಜ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹೊಂದಿರುವ ದೇಶ ಆಗಬೇಕಾದರೆ, ಸರ್ಕಾರದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಹೀಗಾಗಿ‌ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಐವನ್‌ ಡಿಸೋಜ ಹೇಳಿದರು.ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ ಒಕ್ಕೂಟದ ವತಿಯಿಂದ ನಗರದ ಮಿಷನ್‌ ಕಂಪೌಂಡ್‌ನ ಸಿಎಸ್‌ಐ ಬಾಯ್ಸ್‌ ಬೋರ್ಡಿಂಗ್‌ ಹೋಮ್‌ (ಸ್ನೇಹಾಲಯ)ದಲ್ಲಿ ಶನಿವಾರ ನಡೆದ ಸಾರ್ವಜನಿಕ ಜನ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಜನರ ಮನೆ ಬಾಗಿಲಿಗೆ […]