ತುಳುನಾಡ ಸಂಸ್ಕೃತಿ ದೇಶದ ಬೇರೆಲ್ಲೂ ‌ಕಾಣಸಿಗದು: ತುಳಸಿ ದೇವಾಡಿಗ

ಉಡುಪಿ: ತುಳುನಾಡಿನಲ್ಲಿ ನಾವು ಆಚರಿಸುವ‌ ಸಂಸ್ಕೃತಿ, ಸಂಪ್ರದಾಯಗಳು ಬಹಳ ವೈಶಿಷ್ಟ್ಯತೆ ಹೊಂದಿವೆ. ಈ ವಿಶಿಷ್ಟ ಸಂಸ್ಕೃತಿ ದೇಶದ ಬೇರೆಲ್ಲೂ ಕಾಣಸಿಗದು. ಆದರೆ ನಮ್ಮದೇ ಕೆಲವೊಂದು ತಪ್ಪಿನಿಂದ ತುಳು ಸಂಸ್ಕೃತಿ ಅವನತಿಯ ಕಡೆಗೆ ಸಾಗುತ್ತಿದೆ ಎಂದು ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ ಕಟಪಾಡಿ ಹೇಳಿದರು. ತುಳುಕೂಟ ಉಡುಪಿ ವತಿಯಿಂದ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ಮದರೆಂಗಿದ ರಂಗ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಹಿಂದಿನ ಸಂಸ್ಕೃತಿ ಹಾಗೂ ಈಗಿನ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯಾತ್ಯಾಸಗಳಾಗಿವೆ. […]

ಮಾದಕ ದ್ರವ್ಯ‌ ವ್ಯಸನ‌ ಸಮಾಜಕ್ಕೆ ಕಳಂಕ: ಹೆಪ್ಸಿಬಾ ರಾಣಿ

ಉಡುಪಿ: ಮಾದಕ ದ್ರವ್ಯ ವ್ಯಸನ ಸಮಾಜಕ್ಕೆ ಅಂಟಿಕೊಂಡಿರುವ ಕಳಂಕ. ಈ ಕಾನೂನು ವಿರೋಧಿ ಚಟುವಟಿಕೆಗಳ ವಿರುದ್ಧ ಜಾಗೃತ ಸಮಾಜ ಧ್ವನಿ ಎತ್ತಬೇಕು. ನಮ್ಮ ಮುಂದಿನ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು. ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಶನಿವಾರ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಮಾದಕ ವ್ಯಸನ ವಿರೋಽಧಿ ಮಾಸಾಚರಣೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. […]

ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಹೊಣೆ: ಐವನ್ ಡಿಸೋಜ

ಮಂಗಳೂರು: ರಾಜ್ಯದಲ್ಲಿ ಆಗಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ನೇರ ಹೊಣೆ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೇಂದ್ರದ ನಾಯಕರು ಆಪರೇಷನ್ ಕಮಲಕ್ಕೆ ಪ್ಲಾನ್ ನಡೆಸುತ್ತಿದ್ದಾರೆ. ಸತತ ಆರು ಬಾರಿ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಹೊರಟಿದೆ. ಆದ್ರೆ ಈ ಬಾರಿಯೂ ನಮ್ಮ ಸಮ್ಮಿಶ್ರ ಸರ್ಕಾರವನ್ನ ಕೆಡವಲು ಸಾಧ್ಯವಿಲ್ಲ ಎಂದರು. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯು ಪ್ರಯತ್ನ ಮಾಡ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಳೆ ಅಂತಾ […]

ತಿರುವು ಪಡೆದುಕೊಂಡ ಯಡಮೊಗೆ ಮಗು ಅಪಹರಣ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!

ಕುಂದಾಪುರ: ಜಿಲ್ಲೆಯಲ್ಲೇ ತೀವ್ರ ಸಂಚಲನ‌‌ ಮೂಡಿಸಿದ್ದ ಯಡಮೊಗೆ ಮಗು ಅಪಹರಣ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಗುವಿನ‌ ತಾಯಿಯ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ಎಂದು ದಾಖಲಾಗಿದ್ದ ಪ್ರಕರಣ ಇದೀಗ ಕೊಲೆ ಎಂಬುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇದೀಗ 305 ಮತ್ತು 307 ಐಪಿಸಿ ಸೆಂಕ್ಷನ್ ಅಳವಡಿಸಿ ಪೊಲೀಸರು ತನಿಖೆ‌ ಮುಂದುವರಿಸಿದ್ದಾರೆ. ಯಡಮೊಗೆ ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ ಎಂಬವರ ಪತ್ನಿ ರೇಖಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದ್ದು, ತನ್ನಿಬ್ಬರು ಮಕ್ಕಳಾದ ಒಂದು ವರ್ಷ ಮೂರು ತಿಂಗಳ […]

ಡ್ರಗ್ಸ್ ಜಾಲ ಬೇಧಿಸಿದ ಪೊಲೀಸರು: ನಾಲ್ವರ ಬಂಧನ

ಮಂಗಳೂರು: ಡ್ರಗ್ಸ್ ಜಾಲವನ್ನು ಭೇದಿಸಿದ ಮಂಗಳೂರು ನಗರ ಪೊಲೀಸರು ನಾಲ್ವರು ಯುವಕರನ್ನು ಶನಿವಾರ ಬಂಧಿಸಿದ್ದಾರೆ. ಪೃಥ್ವಿ ಪಿ. ಕುಮಾರ್, ಕ್ಲೆವಿನ್ ಸಲ್ಡಾನಾ, ವಿ.ಎಸ್. ನಿಖಿಲ್  ಹಾಗೂ ಸಾಗರ್ ಅಮೀನ್, ಬಂಧಿತ ಆರೋಪಿಗಳು. ಆರೋಪಿಗಳಿಂದ 1 ಕೆ.ಜಿ.‌ 200 ಗ್ರಾಂ ಗಾಂಜಾ ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಹಾವಳಿ ವಿರುದ್ಧ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಎಸಿಪಿ ಸೆಂಟ್ರಲ್ ಮತ್ತು ತಂಡ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. ಅತ್ತಾವರ ಬಾಬುಗುಡ್ಡೆ ಒಂದನೇ ಕ್ರಾಸ್ ರಸ್ತೆಯಲ್ಲಿ […]