ಪುಟಾಣಿ ಮಗು ನಾಪತ್ತೆ ಪ್ರಕರಣ: ಅಪಹರಣ ಶಂಕೆ, ಸ್ಥಳದಲ್ಲಿ ಎಸ್ಪಿ ಮೊಕ್ಕಾಂ, ಡಿವೈಎಸ್ಪಿಯಿಂದ ತನಿಖೆ

ಕುಂದಾಪುರ: ಮನೆಯೊಳಗೆ ತಾಯಿಯೊಂದಿಗೆ‌ ಮಲಗಿದ್ದ ಪುಟಾಣಿ ಹೆಣ್ಣು ಮಗುವೊಂದನ್ನು ಮುಸುಕುಧಾರಿ ವ್ಯಕ್ತಿಯೋರ್ವ ಅಪಹರಣ ಮಾಡಿದ ಆತಂಕಕಾರಿ ಘಟನೆ ಸಿದ್ದಾಪುರ ಸಮೀಪದ ಯಡಮೊಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಮ್ಟಿಬೇರು ಎಂಬಲ್ಲಿ ಗುರುವಾರ ನಸುಕಿನ ಜಾವದಲ್ಲಿ ನಡೆದಿದೆ. ಮಗು ಅಪಹರಣ ಪ್ರಕರಣ ಸದ್ಯ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು ಮಗುವಿನ ತಾಯಿ ಪೊಲೀಸರಿಗೆ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ‌. ಎಡಮೊಗೆಯ ಕುಮ್ಟಿಬೇರು ನಿವಾಸಿ ಸಂತೋಷ ನಾಯ್ಕ್ ಮತ್ತು ರೇಖಾ ದಂಪತಿಗಳ ಒಂದು ವರ್ಷ ಮೂರು ತಿಂಗಳು ಪ್ರಾಯದ ಸಾನ್ವಿಕಾ […]

ಇಸ್ರೇಲ್ ನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವ್ಯಕ್ತಿ ಮುಂಬೈ ವಿಮಾನ‌ ನಿಲ್ದಾಣದಲ್ಲಿ‌ ಸಾವು

ಮಂಗಳೂರು: ಇಸ್ರೇಲ್‌ನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಆಗುತ್ತಿದ್ದ ವ್ಯಕ್ತಿ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾವನ್ನಪ್ಪಿರಿವ ಘಟನೆ ಗುರುವಾರ ಸಂಭವಿಸಿದೆ. ಮಂಗಳೂರಿನ ವಿಲಿಯಂ ಫೆರ್ನಾಂಡಿಸ್(49), ಮೃತ ಪಟ್ಟವರು. ಇವರು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಉದ್ಯೋಗದಲ್ಲಿದ್ದರು. ಚಿಕಿತ್ಸೆಗಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮುಂಬೈನ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಬರುತ್ತಿದ್ದರು. ಮಿತಿಮೀರಿದ ಬುಕ್ಕಿಂಗ್ ನಿಂದ ಟಿಕೆಟ್ ನೀಡಲು ಏರ್ ಇಂಡಿಯಾ ನಿರಾಕರಿಸಿದ್ದು, ಹೀಗಾಗಿ ಏರ್ ಇಂಡಿಯಾ ಕಂಪನಿ ಅಧಿಕಾರಿಗಳ ವಿರುದ್ಧ ಸಂಬಂಧಿಕರ ಆರೋಪಿಸಿದ್ದಾರೆ.

ಯುವತಿಗೆ ಅಶ್ಲೀಲ ವೀಡಿಯೋ ತೋರಿಸಿದ ಯುವಕನ ಬಂಧನ 

ಮಂಗಳೂರು: ಮಂಗಳೂರಿನಲ್ಲಿ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಯುವಕನನ್ನು ಬಂಧಿಸಲಾಗಿದೆ. ಬೆಂದೂರು ಮರ್ಕೆರಾ ಹಿಲ್ಸ್ ನಿವಾಸಿ ಡೇವಿನ್ ಪಿಂಟೋ (29) ಬಂಧಿತ ಅರೋಪಿ. ಈತ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಕರೆದು ಮೊಬೈಲ್ ನಿಂದ ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ಈ ವೇಳೆ ಯುವತಿಯ ಬೊಬ್ಬೆ  ಹಾಕಿದ್ದಾಳೆ.‌ ಕೂಡಲೇ ಸಾರ್ವಜನಿಕರು ಅರೋಪಿಯನ್ನು ಹಿಡಿದು ಕದ್ರಿ ಪೊಲೀಸರರಿಗೆ ಒಪ್ಪಿಸಿದ್ದಾರೆ. ಮಹಿಳಾ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯಲ್ಲಿ ‘ಕಲಾಸಿಲ್ಕ್ ಕಾಟನ್‌ ಎಕ್ಸ್‌ಪೋ- 2019’ ಮಾನ್ಸೂನ್‌ ಸ್ಪೆಷಲ್ ಆಫರ್‌ ಶೇ.65 ದರ ಕಡಿತ ಮಾರಾಟ

ಉಡುಪಿ: ದೇಶದ ವಿವಿಧ ಭಾಗದಲ್ಲಿ ದೊರೆಯುವ ಎಲ್ಲಾ ವಸ್ತುಗಳು ಇದೀಗ ಬನ್ನಂಜೆ, ಮಲ್ಪೆ ಉಡುಪಿ ರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಮೊದಲ ಬಾರಿಗೆ ಕಲಾಸಿಲ್ಕ್ ಕಾಟನ್‌ ಎಕ್ಸ್‌ಫೋ 2019 ದಲ್ಲಿ ಹ್ಯಾಂಡ್‌ ಲೂಮ್‌ ಮತ್ತು ಹ್ಯಾಂಡಿಕ್ರಾಫ್ಟ್‌ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಈಗಾಗಲೇ ಪ್ರಾರಂಭಗೊಂಡಿದೆ. ಮಾನ್ಸೂನ್‌ ಸ್ಪೆಷಲ್ ಆಫರ್‌ ಶೇ.65 ದರ ಕಡಿತ ಮಾರಾಟ ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೆ ನಡೆಯುತ್ತಿದೆ. ಪ್ರದರ್ಶನದಲ್ಲಿ 24 ರಾಜ್ಯದ ವಸ್ತುಗಳ 100 ಕೌಂಟರ್‌ಗಳು ಇವೆ. ಇದರಲ್ಲಿ ಆಂಧ್ರ […]

ಕಾರ್ಕಳ ಪ.ಪೂ.ಕಾಲೇಜಿನಲ್ಲಿ ಲಕ್ಷಾಂತರ ಮೌಲ್ಯದ ಲ್ಯಾಬ್ ಪುಡಿ ಪುಡಿ:ಇದು ಬೆಕ್ಕಿನ ಕೆಲಸ ಎಂದು ನುಣುಚಿಕೊಂಡ ಮುಖ್ಯಸ್ಥರು !

x press ವರದಿ : ಚರಣ್‌ ಸಂಪತ್,ಕಾರ್ಕಳ ಕಾರ್ಕಳ : ಸರಕಾರಿ ‌ಪದವಿ ಪೂರ್ವ ಕಾಲೇಜಿನಲ್ಲಿ ಕಳ್ಳ ಬೆಕ್ಕಿನ ಉಪಟಳಕ್ಕೆ ಲಕ್ಷಾಂತರ ‌ಬೆಲೆ‌ಬಾಳುವ ಬಯೋಲಜಿ ಪರಿಕರಗಳನ್ನು ಹುಡಿಹುಡಿಗೈದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 130 ವರ್ಷಗಳ ಇತಿಹಾಸ ಹೊಂದಿದ ಸರಕಾರಿ‌ ಪದವಿಪೂರ್ವ‌ ಕಾಲೇಜಿನಲ್ಲಿ ಉಪನ್ಯಾಸಕರ ಅಂತಃಕಲಹದಿಂದ ಇದೀಗ ಅಕ್ಷರಶ ರಣಾಂಗಣವಾಗಿದೆ. ಬಯೊಲಜಿ ಶಿಕ್ಷಕಿ ಜಯಶ್ರೀ ಹೆಗ್ಡೆಯ ವರ್ಗಾವಣೆಗೊಳಿಸಲು‌ ಹಾಗೂ ಅವರ ಮೇಲಿನ ದ್ವೇಷ ಸಾಧನೆಗಾಗಿ ಇಂತಹ ಕೃತ್ಯ ‌ಎಸಗಿದ್ದಾರೆ ಎನ್ನುವುದು ಅವರ ವಾದವಾಗಿದೆ. ಅದರೆ ಪ್ರಾಶುಂಪಾಲ ಮಾಧವ್ […]