ಶ್ರೀ ಕೃಷ್ಣ ಮಠದಲ್ಲಿ ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕವನ್ನು ಪರ್ಯಾಯ  ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.       

ಬೈಂದೂರು ದನಗಳ್ಳತನ ಪ್ರಕರಣ – ಓರ್ವ ಆರೋಪಿಯ ಬಂಧನ

ಬೈಂದೂರು: ಬೈಂದೂರಿನ ಎಳಜಿತ್ ಎಂಬಲ್ಲಿ ಎರಡು ಹಟ್ಟಿಯಿಂದ ದನಗಳನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧೀತನನ್ನು ಗೋಳಿಯಂಗಡಿ ಹೈಕಾಡಿ ನಿವಾಸಿ ಮೊಹಮ್ಮದ್ ಅಝೀಮ್ ಎಂದು ಗುರುತಿಸಲಾಗಿದೆ. ಬೈಂದೂರು ಠಾಣಾ ವ್ಯಾಪ್ತಿಯ ಎಳಜಿತ್ನಲ್ಲಿ ನ ಸದೆಯಮ್ಮ ಗೌಡ್ತಿ ಅವರ ಮನೆಯಿಂದ 2 ದನ ಹಾಗೂ ಪಕ್ಕದ ಮನೆಯ ಕೊಟ್ಟಿಗೆಯಲ್ಲಿದ್ದ 3 ದನಕರುಗಳನ್ನು ಕದ್ದೊಯ್ಯಲಾಗಿತ್ತು. ಜಾನುವಾರು ಕಳವು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಈ ನಡುವೆ […]

ಜು.13: ಐವನ್ ಡಿಸೋಜರಿಂದ ಕ್ರೈಸ್ತ ಬಾಂಧವರಿಗೆ ಜನಸ್ಪಂದನ ಕಾರ್ಯಕ್ರಮ

ಉಡುಪಿ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕ್ರೈಸ್ತ ಸಮಾಜ ಬಾಂಧವರಿಗಾಗಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಅವರು ಜು. 13ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿ ಮಿಷನ್‌ ಕಂಪೌಂಡ್‌ನ ಸಿಎಸ್‌ಐ ಬಾಯ್ಸ್‌ ಬೋರ್ಡಿಂಗ್‌ ಹೋಮ್‌ (ಸ್ನೇಹಾಲಯ)ನಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ ಒಕ್ಕೂಟದ ಜಂಟಿ ಕಾರ್ಯದರ್ಶಿ ಸ್ಟೀವನ್‌ ಕುಲಾಸೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಆಯಾ ಇಲಾಖೆಯ ಯೋಜನೆಗಳ ಮಾಹಿತಿ ನೀಡುವರು. ಐವನ್‌ ಡಿಸೋಜ ಅವರಿಂದ ಸಾರ್ವಜನಿಕರ ಅಹವಾಲು […]

ಜುಲೈ 15 ರಂದು ಉದ್ಯೋಗ ಮೇಳ

ಉಡುಪಿ, ಜುಲೈ 11: ಕೌಶಲ್ಯಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ ಉದ್ಯೋಗಮೇಳ ಕಾರ್ಯಕ್ರಮವು ಜುಲೈ 15 ರಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ನಡೆಯಲಿದೆ. ಉದ್ಯೋಗಮೇಳದ ಅಂಗವಾಗಿ ವೃತ್ತಿ ಮಾರ್ಗದರ್ಶನ ತರಬೇತಿ ಮತ್ತು ಸಂದರ್ಶನ ಪೂರ್ವ ತಯಾರಿಯ ಬಗ್ಗೆ ಕಾರ್ಯಾಗಾರವು ಜುಲೈ 12 ರಂದು ಬೆಳಗ್ಗೆ 10 […]

ಜನ ಸಂಖ್ಯಾ ನಿಯಂತ್ರಣದಲ್ಲಿ ಕೈಜೋಡಿಸಿ: ದಿನಕರ ಬಾಬು

ಉಡುಪಿ, ಜುಲೈ 11: ಮಹಿಳೆಯರು ಜನ ಜನಸಂಖ್ಯಾ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಿದರೆ ಕಾರ್ಯಕ್ರಮದ ಉದ್ದೇಶ ಉತ್ತಮ ಫಲಿತಾಂಶ ಪಡೆಯಬಹುದು. ಆರೋಗ್ಯ ಇಲಾಖೆಯಿಂದ ನಡೆಯುವ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಎಲ್ಲರೂ ತೊಡಗಿಸಿಕೊಂಡು ಜನ ಸಂಖ್ಯಾ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕರೆ ನೀಡಿದ್ದಾರೆ. ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಎನ್‍ಎಸ್‍ಎಸ್ ಘಟಕ ಡಾ. ಜಿ ಶಂಕರ್ ಸರಕಾರಿ ಮಹಿಳಾ […]