ಇಸ್ರೇಲ್ ನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವ್ಯಕ್ತಿ ಮುಂಬೈ ವಿಮಾನ‌ ನಿಲ್ದಾಣದಲ್ಲಿ‌ ಸಾವು

ಮಂಗಳೂರು: ಇಸ್ರೇಲ್‌ನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಆಗುತ್ತಿದ್ದ ವ್ಯಕ್ತಿ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾವನ್ನಪ್ಪಿರಿವ ಘಟನೆ ಗುರುವಾರ ಸಂಭವಿಸಿದೆ.
ಮಂಗಳೂರಿನ ವಿಲಿಯಂ ಫೆರ್ನಾಂಡಿಸ್(49), ಮೃತ ಪಟ್ಟವರು.
ಇವರು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಉದ್ಯೋಗದಲ್ಲಿದ್ದರು. ಚಿಕಿತ್ಸೆಗಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮುಂಬೈನ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಬರುತ್ತಿದ್ದರು. ಮಿತಿಮೀರಿದ ಬುಕ್ಕಿಂಗ್ ನಿಂದ ಟಿಕೆಟ್ ನೀಡಲು ಏರ್ ಇಂಡಿಯಾ ನಿರಾಕರಿಸಿದ್ದು, ಹೀಗಾಗಿ ಏರ್ ಇಂಡಿಯಾ ಕಂಪನಿ ಅಧಿಕಾರಿಗಳ ವಿರುದ್ಧ ಸಂಬಂಧಿಕರ ಆರೋಪಿಸಿದ್ದಾರೆ.