ಮಂಗಳೂರು: ಮನೆಗೆ ಬೆಂಕಿ ಅಪಾರ ಹಾನಿ

ಮಂಗಳೂರು: ಮಂಗಳೂರಿನ ಪಂಪ್ ವೆಲ್ ನಂತೂರು ಸಮೀಪದ ಮನೆಯೊಂದಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಮಂಗಳವಾರ ರಾತ್ರಿ 12 ಗಂಟೆ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ. ನವೀನ್ ತಾರೆತೋಟ ಎಂಬವರ ಮನೆ ಇದಾಗಿದ್ದು, ಮನೆ ಸುಟ್ಟು ಅಪಾರ ಹಾನಿ ಸಂಭವಿಸಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ. ಕದ್ರಿ ಅಗ್ನಿಶಾಮಕ ದಳದಿಂದ ಕಾರ್ಯಚರಣೆ ನಡೆದಿದೆ.

ಕರಾವಳಿಯಲ್ಲಿ ಅಬ್ಬರದ ಮಳೆ: ವಿವಿಧೆಡೆ ಹಾನಿ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಮಂಗಳವಾರದಿಂದ ಕರಾವಳಿಯಾದ್ಯಂತ ಧಾರಕಾರ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಬಿರುಸಾದ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಪುತ್ತೂರು ಹಾಗೂ ಮೂಡಬಿದಿರೆ ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮಂಗಳೂರಿನ ಹೊರವಲಯ ಆಕಾಶಭವನದಲ್ಲಿ ಭೂಕುಸಿತ ಉಂಟಾಗಿ ಮನೆಗೆ ಹಾನಿಯಾಗಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಶಾಲಾ ಶೌಚಾಲಯ ಕಟ್ಟಡದ ಮೇಲೆ ಮರಬಿದ್ದು, […]

ಉದ್ಯೋಗ ಮಾಡಲು ಸಾಮರ್ಥ್ಯ ಇಲ್ಲದ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ:ಕೇಂದ್ರದ ನಿಯಮ

ನವದೆಹಲಿ: ತಮ್ಮ ಉದ್ಯೋಗವನ್ನು ಮಾಡಲು ಸಾಮರ್ಥ್ಯ ಇಲ್ಲದ ಸರಕಾರಿ ಉದ್ಯೋಗಿಗಳ ಸೇವೆ ಕೊನೆಗೊಳಿಸಲು ಕೇಂದ್ರ ಸರಕಾರ  ಹೊಸ ನಿಯಮ ತರಲು ಸಿದ್ದತೆ ನಡೆಸಿದೆ . ಕಳೆದ ತಿಂಗಳು ತೆರಿಗೆ ಇಲಾಖೆಯ ಪ್ರಿನ್ಸಿಪಾಲ್ ಹಾಗೂ ಚೀಫ್ ಕಮಿಷನರ್ ಗಳನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಮಾಡಲಾಯಿತು. ಆದರಲ್ಲಿ ಹಲವರ ವಿರುದ್ಧ ದೂರುಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಬಾಕಿ ಇವೆ. ಒಂದು ಪ್ರಕರಣದಲ್ಲಿ ಸೇವೆಯಿಂದ ನಿವೃತ್ತರಾದ ತೆರಿಗೆ ಅಧಿಕಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ವರದಿ ಸಲ್ಲಿಸಲು ಆದೇಶ: 12 ಐಟಿ […]

ಕಟ್ ಬೆಳ್ತೂರ್: ಮತಾಂತರದ ವಿರುದ್ದ ದೂರು

ಉಡುಪಿ: ಕಟ್ ಬೆಳ್ತೂರ್ ನಲ್ಲಿ  ಸ್ವ- ಸಮಾಜದವರನ್ನು ಮತಾಂತರ ಮಾಡುತ್ತಿದ್ದು ,ಅದರ ವಿರುದ್ದ ಉಡುಪಿಯ ಎಸ್.ಪಿ. ನಿಶಾ ಜೇಮ್ಸ್ ಅವರಿಗೆ ವಿಶ್ವಕರ್ಮ ಒಕ್ಕೂಟದ ವತಿಯಿಂದ ದೂರು ಸಲ್ಲಿಸಲಾಯಿತು. ಅಧ್ಯಕ್ಷರಾದ ಮಧು ಆಚಾರ್ಯ, ಗೌರವ ಅಧ್ಯಕ್ಷ ಸೀತಾರಾಮ ಆಚಾರ್ಯ,ಕಾರ್ಯದರ್ಶಿ ಮುರುಳಿದರ್ ಕೆ, ಹಾಗೂ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಕಿಶೋರ್ ಆರ್ ಆಚಾರ್ಯ,ಕಾರ್ಪೆಂಟರ್ ಅಧ್ಯಕ್ಷರಾದ ಗೋಕುಲ ಆಚಾರ್ಯ, ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

ವಿಧಾನಸೌಧದಲ್ಲಿ ರಾಜೀನಾಮೆ ಕೊಟ್ಟ ಸುಧಾಕರ್‌ಗೆ ದಿಗ್ಬಂಧನ

ಬೆಂಗಳೂರು : ವಿಧಾನದೌಧದಲ್ಲಿ ರಜೀನಾಮೆ ಪರ್ವ ಮುಂದುವರಿಯುತ್ತಲೇ ಇದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಕಚೇರಿಯಿಂದ ಹೊರಬಂದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ ಸುಧಾಕರ್ ಅವರನ್ನು  ದಿಗ್ಬಂಧನಗೈದ ಪ್ರಸಂಗ ಬುಧವಾರ ನಡೆದಿದೆ. ಈ  ಘಟನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಎದುರಿಗೇ ನಡೆದದ್ದು ವಿಶೇಷ. ಈ ಪ್ರಸಂಗದ ಬಳಿಕ ಸಿದ್ದರಾಮಯ್ಯ ಸುಧಾಕರ್ ಜೊತೆ ಮಾತುಕತೆ ನಡೆಸಿದ್ದಾರೆ.