ಬಾಲಾಕೋಟ್ ದಾಳಿ ನಂತರ ಜೈಷ್ ಕ್ಯಾಂಪ್ ಅಫ್ಘಾನಿಸ್ತಾನಕ್ಕೆ ಸ್ಥಳಾಂತರ

ನವದೆಹಲಿ, ಜು. 8: ಭಾರತ ವಾಯು ಸೇನೆಯಿಂದ ಬಾಲಾಕೋಟ್ ನಲ್ಲಿ ಜೈಷ್ ಇ ಮೊಹ್ಮದ್ ನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಉಗ್ರರ ಮುಖ್ಯ ತರಬೇತಿ ಶಿಬಿರಗಳನ್ನು ಸ್ಥಳಾಂತರಿಸಲಾಗಿದೆ. ಮೂಲಗಳ ಪ್ರಕಾರ, ಜೈಷೆ ತರಬೇತಿ ಶಿಬಿರಗಳನ್ನು ಅಫ್ಘಾನಿಸ್ತಾನಕ್ಕೆ ಸ್ಥಳಾಂತರ ಮಾಡಲಾಗಿದ್ದು. ಇದರಿಂದ ಹೊಸ ಚಿಂತೆ ಶುರುವಾಗಿದೆ. ಅಫ್ಘಾನಿಸ್ತಾನಕ್ಕೆ ತರಬೇತಿ ಶಿಬಿರಗಳು ಸ್ಥಳಾಂತರ ಆದ ಮೇಲೆ, ಭಾರತಕ್ಕೆ ಸಂಬಂಧಿಸಿದ ಅಲ್ಲಿನ ಯೋಜನೆ, ಸಂಸ್ಥೆ, ಕಟ್ಟಡಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಗುಪ್ತಚರ ಇಲಾಖೆಯು […]

ಸಿಎಂ’ಯಿಂದ 30 ಕೋಟಿ ರೂ. ಬೇಡಿಕೆ: ಬಿಜೆಪಿ ನಾಯಕ ಸ್ಫೋಟಕ ಹೇಳಿಕೆ

ವಿಜಯಪುರ ಜು.09 : ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು. ದೋಸ್ತಿ ಸರ್ಕಾರ ಪತನಗೊಳ್ಳುವ ಹಂತದಲ್ಲಿದೆ. ರಾಜೀನಾಮೆ ನೀಡಿದ ಶಾಸಕರಿಗೆ ಬಿಜೆಪಿಯಿಂದ ಹಣದ ಆಫರ್ ನೀಡಲಾಗಿದೆ ಎನ್ನುವ ಆರೋಪಕ್ಕೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಹಣದ ಆಮಿಷ ಒಡ್ಡಿದ್ದಾರೆ ಎನ್ನುವ ಸಿಎಂ ಆರೋಪದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ವಿಜುಗೌಡ ಪಾಟೀಲ್, ನಾನೂ ಜೆಡಿಎಸ್ ನಲ್ಲಿ ಇದ್ದಾಗ  ಕುಮಾರಸ್ವಾಮಿ ನನಗೂ 30 ಕೋಟಿ ರೂ. ಬೇಡಿಕೆ ಇಟ್ಟಿದ್ದರು. MLC ಮಾಡಲು ನನ್ನ ಕಾರ್ಯಕರ್ತರ ಬಳಿ ಹಣ ನೀಡಬೇಕಾಗುತ್ತದೆ ಎಂದು ಕೇಳಿದ್ದರು. […]

ಉಡುಪಿ ಎಲ್ಲೈಸಿ ವಿಭಾಗದಲ್ಲಿ ಕೋಟಿ ಕೋಟಿ ಹಗರಣ ! ಅಧಿಕಾರಿ, ಮಧ್ಯವರ್ತಿಗಳಿಂದಲೇ ಗೋಲ್ ಮಾಲ್ !

ಉಡುಪಿ: ಭಾರತೀಯ ಜೀವ ವಿಮಾನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಹೆಚ್ಚಿನ ಮೈಕ್ರೋ ಇನ್ಶೂರೆನ್ಸ್ ಪಾಲಿಸಿದಾರರು ಕಟ್ಟಿದ್ದ ಕೋಟ್ಯಾಂತರ ರೂಪಾಯಿಗಳನ್ನು ಎಲೈಸಿಯೇ ನೇಮಿಸಿದ್ದ ಮಧ್ಯವರ್ತಿಗಳು ಕಬಳಿಸಿದ ಹಗರಣವನ್ನು ಇದೀಗ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ ಎಂದು  ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಬಾಗ್ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಈ ಪ್ರಕರಣದ ಕೂಲಂಕುಶ ತನಿಖೆ ನಡೆಸಿದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ […]

ಶ್ರೀಕೃಷ್ಣ ಮಠಕ್ಕೆ  ಚಿತ್ರದುರ್ಗದ ಶ್ರೀಗಳು ಭೇಟಿ

ಉಡುಪಿ: ಶ್ರೀಕೃಷ್ಣ ಮಠಕ್ಕೆ  ಚಿತ್ರದುರ್ಗದ ಹಿರಿಯೂರಿನ ಶ್ರೀಚಿಟುಗು ಮಲ್ಲೇಶ್ವರ ಮಹಾಸಂಸ್ಥಾನದ ಶ್ರೀಜ್ಞಾನಭಾಸ್ಕರ ಸ್ವಾಮಿಗಳು ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು.  

ಸಂಗೀತ ನೃತ್ಯ ತರಬೇತಿ: ಅರ್ಜಿ ಆಹ್ವಾನ

ಉಡುಪಿ, ಜುಲೈ 9: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2019-20 ನೇ ಸಾಲಿಗೆ ಶಿಷ್ಯವೇತನದ ಬದಲಾಗಿ, ಅಕಾಡೆಮಿ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ (ಅರ್ಜಿಗಳನ್ನಾಧರಿಸಿ) ಗುರುಗಳ ಮುಖಾಂತರ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ, ಗಮಕ ಕಲಾ ಪ್ರಕಾರಗಳಲ್ಲಿ ಕಲಿಯಲು ಆಸಕ್ತಿಯುಳ್ಳ /ಅಭ್ಯಾಸ ಮಾಡುತ್ತಿರುವ/ ಹೆಚ್ಚಿನ ಅಭ್ಯಾಸ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ 5 ತಿಂಗಳವರೆಗೆ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 14 ರಿಂದ 26 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಅರ್ಜಿಯನ್ನು […]