ಸಂಗೀತ ನೃತ್ಯ ತರಬೇತಿ: ಅರ್ಜಿ ಆಹ್ವಾನ

ಉಡುಪಿ, ಜುಲೈ 9: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2019-20 ನೇ ಸಾಲಿಗೆ ಶಿಷ್ಯವೇತನದ ಬದಲಾಗಿ, ಅಕಾಡೆಮಿ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ (ಅರ್ಜಿಗಳನ್ನಾಧರಿಸಿ) ಗುರುಗಳ ಮುಖಾಂತರ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ, ಗಮಕ ಕಲಾ ಪ್ರಕಾರಗಳಲ್ಲಿ ಕಲಿಯಲು ಆಸಕ್ತಿಯುಳ್ಳ /ಅಭ್ಯಾಸ ಮಾಡುತ್ತಿರುವ/ ಹೆಚ್ಚಿನ ಅಭ್ಯಾಸ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ 5 ತಿಂಗಳವರೆಗೆ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
14 ರಿಂದ 26 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ ಹಾಗೂ ಅಕಾಡೆಮಿ ಅಂತರ್ಜಾಲ ತಾಣ www.karnatakasangeetanrityaacademy.com ಮೂಲಕ ಪಡೆದು ಸಲ್ಲಿಸಬಹುದಾಗಿದೆ. ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದಾಗಿದೆ.
ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ಬೆಂಗಳೂರು, ಇಲ್ಲಿಗೆ ಜುಲೈ 20 ರ ಒಳಗೆ ಕಳುಹಿಸುವಂತೆ ರಿಜಿಸ್ಟ್ರಾರ್ ಅಶೋಕ್ ಎನ್. ಚಲವಾದಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.