ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೃದಯಾಘಾತದಿಂದ ನಿಧನ
ಕಾರ್ಕಳ: ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ (65) ಅವರು ಗುರುವಾರ ನಿಧನ ಹೊಂದಿದ್ದಾರೆ. ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದಾಗ ಹೃದಯಾಘಾತವಾಗಿದ್ದು, ಬಸ್ ಮಂಗಳೂರಿನ ನಿಲ್ದಾಣಕ್ಕೆ ತಲುಪಿದಾಗ ನಿಧನರಾಗಿದ್ದರು. ನಿದ್ದೆ ಮಾಡಿದ್ದಾರೆಂದು ಬಸ್ ಕಂಡಕ್ಟರ್ ಕರೆಯುವ ವೇಳೆ ಅವರು ಮೃತಪಟ್ಟಿದ್ದರು. ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದ ಭಂಡಾರಿ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು.
ಗೋಹತ್ಯೆ ನಿಷೇಧ ಜಾರಿಗೆ ಪೇಜಾವರ ಶ್ರೀಗಳ ಆಗ್ರಹ
ಮಂಗಳೂರು: ಶುಕ್ರವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ಗೋಹತ್ಯೆ ನಿಷೇಧ ಜಾರಿ ಮಾಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ದೇಶದಲ್ಲಿ ಗೋಹತ್ಯೆ ನಿಷೇಧ ಅಗತ್ಯ ವಾಗಿದೆ ಎಂದರು. ಜತೆಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮೋದಿಯವರು ಕಾರ್ಯಕ್ರಮ ತರಬೇಕು. ಹಾಗೆಯೇ ಕೃಷಿ ಮತ್ತು ವೈದ್ಯಕೀಯಕ್ಕೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಬೇಕೆಂದು ಶ್ರೀಗಳಿ ಮನವಿ ಮಾಡಿದರು.
ಪುತ್ತೂರು: ಸಾಮೂಹಿಕ ಅತ್ಯಾಚಾರ ಪ್ರಕರಣ; ಆರೋಪಿ ವಿದ್ಯಾರ್ಥಿಗಳ ಪರ ವಕಾಲತ್ತು ಮಾಡಬಾರದು: ಶ್ರೀರಾಮ ಸೇನೆ
ಉಡುಪಿ: ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿದ್ಯಾರ್ಥಿಗಳ ಪರವಾಗಿ ಯಾವ ವಕೀಲರು ವಕಾಲತ್ತು ಮಾಡಬಾರದು. ಇದೊಂದು ಹೇಯ, ಸಮಾಜ ತಲೆತಗ್ಗಿಸುವ ಕೃತ್ಯ ಎಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.ಆರೋಪಿಗಳ ಪರವಾಗಿ ಯಾರು ವಕಾಲತ್ತು ಮಾಡದೆ, ಸಂಸ್ರತ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು. ಶಿವು ಸಾವು: ಸತ್ಯ ಮರೆಮಾಚಲು ಯತ್ನಬೆಳಗಾವಿ ಜಿಲ್ಲೆಯ ಹಿರೇ ಬಾಗೇವಾಡಿಯಲ್ಲಿ ಕೆಲ ದಿನಗಳ ಹಿಂದೆ […]
ಕುಂದಾಪುರ: ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಯುವತಿ ಸಾವನ್ನಪ್ಪಿದ್ದು ದೃಢ
ಕುಂದಾಪುರ: ಬುಧವಾರ ಬೆಳಿಗ್ಗೆ ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ಕಾಲು ಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಿಂಜೆ ಗ್ರಾಮದ ಶಾಡಿಗುಂಡಿ ನಿವಾಸಿ ಲಕ್ಷ್ಮಣ ನಾಯ್ಕ ಎಂಬುವರ ಪುತ್ರಿ ಬಿ.ಕಾಂ. ಪದವೀಧರೆ ಅಮಿತಾ ನಾಯ್ಕ್(21) ಎಂಬಾಕೆ ಮೃತ ಯುವತಿಯಾಗಿದ್ದಾಳೆ. ಈಕೆಯ ಮೃತದೇಹ ಗುರುವಾರ ಸಂಜೆ ಅಲ್ಲೇ ಸಮೀಪದ ಹೊಂಡದಲ್ಲಿ ಪತ್ತೆಯಾಗಿದೆ. ಅಮಿತಾ ನಾಯ್ಕ್ ಬುಧವಾರ ಬೆಳಿಗ್ಗೆ ಬಟ್ಟೆ ಒಗೆದು ಬರುತ್ತೇನೆ ಎಂದು […]
ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ: ವೀಡಿಯೋ ವೈರಲ್ ಮಾಡಿದ ಎಂಟು ಮಂದಿಯ ಬಂಧನ
ಮಂಗಳೂರು: ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಸಾರ ಮಾಡಿದ ಎಂಟು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ.ಮುರಳೀಧರ, ಚಂದ್ರಶೇಖರ ಮಯ್ಯ, ಶ್ರೇಯಾನ್.ಎಸ್, ಪೂವಪ್ಪ ಕೆ, ಪವನ್ ಕುಮಾರ್.ಡಿ, ಮೋಹಿತ್ ಪಿ ಜಿ, ಧ್ಯಾನ್ ಎ.ಎನ್, ಅದ್ವಿತ್ ಕುಮಾರ್ ನಾಯ್ಕ್, ಬಂಧಿತರು.ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಪ್ರಖ್ಯಾತ್ ಎಂಬಾತ ಅತ್ಯಾಚಾರ ವೀಡಿಯೋವನ್ನು ಸ್ಟೇಟಸ್ ಹಾಕಿಕೊಂಡಿದ್ದ. ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್ ಡೌನ್ ಲೋಡ್ ಮಾಡಿಕೊಂಡಿದ್ದ. ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ […]