ಪುತ್ತೂರು ಗ್ಯಾಂಗ್ ರೇಪ್‌ ಪ್ರಕರಣ: ವೀಡಿಯೋ ವೈರಲ್ ‌ಮಾಡಿದ ಎಂಟು ಮಂದಿಯ ಬಂಧನ

ಮಂಗಳೂರು: ಪುತ್ತೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ‌ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಸಾರ ಮಾಡಿದ ಎಂಟು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ.
ಮುರಳೀಧರ, ಚಂದ್ರಶೇಖರ ಮಯ್ಯ, ಶ್ರೇಯಾನ್.ಎಸ್, ಪೂವಪ್ಪ ಕೆ, ಪವನ್ ಕುಮಾರ್.ಡಿ, ಮೋಹಿತ್‌ ಪಿ ಜಿ, ಧ್ಯಾನ್‌ ಎ.ಎನ್‌, ಅದ್ವಿತ್‌ ಕುಮಾರ್‌ ನಾಯ್ಕ್‌, ಬಂಧಿತರು.
ಪುತ್ತೂರು ಖಾಸಗಿ ಕಾಲೇಜಿನ‌ ವಿದ್ಯಾರ್ಥಿ ಪ್ರಖ್ಯಾತ್ ಎಂಬಾತ ಅತ್ಯಾಚಾರ ವೀಡಿಯೋವನ್ನು ಸ್ಟೇಟಸ್ ಹಾಕಿಕೊಂಡಿದ್ದ.‌ ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್‌ ಡೌನ್ ಲೋಡ್ ಮಾಡಿಕೊಂಡಿದ್ದ.


ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ವೇಳೆ ವಿದ್ಯಾರ್ಥಿಗಳ ಮಧ್ಯೆ ವೈಷಮ್ಯ ಉಂಟಾಗಿದ್ದು, ಗುಂಪು-ಗುಂಪುಗಳಾಗಿ ವೈಷಮ್ಯ ಬೆಳೆಸಿಕೊಂಡಿದ್ದರು. ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಒಂದೇ ಗುಂಪಿನಲ್ಲಿದ್ದರು.
 ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯನ್ ಎಂಬಾತ ವೀಡಿಯೋ ವೈರಲ್ ಮಾಡಿದ್ದ ಎಂದು ತಿಳಿದು ಬಂದಿದೆ.