ಕುಂದಾಪುರ: ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ಯುವತಿ ಸಾವನ್ನಪ್ಪಿದ್ದು ದೃಢ

ಕುಂದಾಪುರ: ಬುಧವಾರ ಬೆಳಿಗ್ಗೆ ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ಕಾಲು ಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಿಂಜೆ ಗ್ರಾಮದ ಶಾಡಿಗುಂಡಿ ನಿವಾಸಿ ಲಕ್ಷ್ಮಣ ನಾಯ್ಕ ಎಂಬುವರ ಪುತ್ರಿ ಬಿ.ಕಾಂ. ಪದವೀಧರೆ ಅಮಿತಾ ನಾಯ್ಕ್(21) ಎಂಬಾಕೆ ಮೃತ ಯುವತಿಯಾಗಿದ್ದಾಳೆ. ಈಕೆಯ ಮೃತದೇಹ ಗುರುವಾರ ಸಂಜೆ ಅಲ್ಲೇ ಸಮೀಪದ ಹೊಂಡದಲ್ಲಿ ಪತ್ತೆಯಾಗಿದೆ.
ಅಮಿತಾ ನಾಯ್ಕ್ ಬುಧವಾರ ಬೆಳಿಗ್ಗೆ ಬಟ್ಟೆ ಒಗೆದು ಬರುತ್ತೇನೆ ಎಂದು ಹೇಳಿ ಹೊಳೆಗೆ ಹೋಗಿದ್ದಳು. ಆದರೆ ಹಲವು ಸಮಯದ ಬಳಿಕವೂ ಆಕೆ ಬಾರದೇ ಇದ್ದಾಗ ಅನುಮಾನಗೊಂಡ ಮನೆಯವರು ಹೊಳೆ ಸಮೀಪ ಹೋದಾಗ ಒಗೆಯಲು ತಂದ ಬಟ್ಟೆಗಳು ಹಾಗೂ ಆಕೆಯ ಚಪ್ಪಲಿ ಹೊಳೆಯ ಬದಿಯಲ್ಲಿ ಪತ್ತೆಯಾಗಿತ್ತು.
ಘಟನೆಯ ಸುದ್ಧಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದಿಂದ ಹುಡುಕಾಟ ಆರಂಭಿಸಿದ್ದರು. ನಿರಂತರ ಹುಡುಕಾಟದ ಬಳಿಕ ಇಂದು ಯುವತಿಯ ಮೃತದೇಹ ಪತ್ತೆಯಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಶಾಸಕ ಸುಕುಮಾರ ಶೆಟ್ಟಿ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
 
 
Attachments area