ಕುಂದಾಪುರ: ಗೋಹತ್ಯೆ ಧಾರ್ಮಿಕ ನಂಬಿಕೆ ಮೇಲಿನ ಆಕ್ರಮಣ

ಕುಂದಾಪುರ: ಹಸುಗಳ ಜತೆ ಮಾನವೀಯ ಒಡನಾಟ ಹಾಗೂ ಅಟ್ಯಾಚ್ಮೆಂಟ್ ಇರುತ್ತದೆ. ಮಕ್ಕಳಂತೆ ಲಾಲನೆ ಪಾಲನೆ ಮಾಡಿ, ಇದ್ದಕ್ಕಿದ್ದಂತೆ ಹಟ್ಟಿ‌ಉಯಲ್ಲಿರುವ ಹಸು ಕಾಣೆಯಾಯ್ತು ಎಂದರೆ ಅದರ ನೋವು ಉಂಡವರಿಗೆ ಗೊತ್ತು. ಯಾರೂ ಆಹಾರಕ್ಕಾಗಿ ಹಸು ಸಾಕದೆ, ಹೈನುಗಾರಿಕೆ ಹಾಗೂ ಕೃಷಿಗಾಗಿ ಸಾಕುತ್ತಾರೆ. ಗೋಹತ್ಯ ಕ್ರೂರ ಹಾಗೂ ಘೋರ. ಇಂದು ವರ್ಗದ ಜನರ ಓಲೈಕೆಗಾಗಿ ಗೋವನ್ನು ದೇವರೆಂದು ನಂಬಿದ ಹಿಂದುಗಳ ಮೇಲೆ ಗೋಹತ್ಯೆ ಮೂಲಕ ಧಾರ್ಮಿಕ ನಂಬಿಕೆ ಮೇಲೆ ಅಕ್ರಣ ಮಾಡಲಾಗುತ್ತದೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಪ್ರೇಮಾನಂದ ಶೆಟ್ಟಿ […]

ಬೀಜಾಡಿ:ಸಾಯುವ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ರಕ್ಷಿಸಿದರು !

ಕುಂದಾಪುರ : ಬೀಜಾಡಿ ಕಡಲ ಕಿನಾರೆಯಲ್ಲಿ ಗಂಭೀರ ಗಾಯಗೊಂಡು ಅರೆಜೀವವಾಗಿ ಬಿದ್ದಿದ್ದ ಕಡಲಾಮೆಯನ್ನು ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಸದಸ್ಯರು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ಕ್ಲೀನ್ ಪೊಜೆಕ್ಟ್ ಸದಸ್ಯರು ಬೀಜಾಡಿ ಬೀಜ್ ಬಳಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವಾಗ ಗಾಯಗೊಂಡ ಆಮೆ ಕಣ್ಣಿಗೆ ಬಿದ್ದಿದೆಪ್ರೊಜೆಕ್ಟ್ ತಂಡದ ಸದಸ್ಯೆ ಡಾ.ರಶ್ಮಿ ಆಮೆಗೆ ಪ್ರಥಮ ಚಿಕಿತ್ಸೆ ನೀಡಿದ್ದು ಕೃತಕ ನೀರಿನ ತೊಟ್ಟಿ ನಿರ್ಮಿಸಿ ಆಮೆ ಅದರಲ್ಲಿ ಬಿಟ್ಟು ನಂಜು ನಾಶಕ ಔಷಧ ನೀಡಲಾಗಿದೆ. ಕುಂದಾಪುರ ಪಶು ವೈದ್ಯಾಧಿಕಾರಿ […]

ಪುತ್ತೂರು ಗ್ಯಾಂಗ್ ರೇಪ್: ಐವರು ಆರೋಪಿಗಳ‌ ಬಂಧನ

ಮಂಗಳೂರು: ಸಹಪಾಠಿ ವಿದ್ಯಾರ್ಥಿನಿಯನ್ನೇ ಗ್ಯಾಂಗ್ ರೇಪ್ ಮಾಡಿದ ಆರೋಪದಡಿ ಪುತ್ತೂರು ಖಾಸಗಿ‌ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಗುರುನಂದನ್, ಪ್ರಜ್ವಲ್, ಕಿಶನ್ ಸುನಿಲ್, ಪ್ರಖ್ಯಾತ್ ಎಂದು ಗುರುತಿಸಲಾಗಿದೆ.ಏನಿದು ಘಟನೆ?ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಹಪಾಠಿಯನ್ನೇ ಕಾಡಿನಲ್ಲಿ ಅತ್ಯಾಚಾರ ಮಾಡಿದ್ದರು. ಈ ಘಟನೆ ನಡೆದು ಕೆಲವು ಸಮಯವಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವಿದ್ಯಾರ್ಥಿಗಳು ಪ್ಲಾನ್ ಮಾಡಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದ್ದು, ಆಕೆ ಪುತ್ತೂರು ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದಾಗ […]

ಆಚಾರ್ಯಾಸ್‌ ಏಸ್‌: ರ‍್ಯಾಂಕ್‌ ವಿಜೇತರಿಗೆ ಆಚಾರ್ಯ ಪುರಸ್ಕಾರ

ಉಡುಪಿ: ಒಂಬತ್ತನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೈನ್ಸ್‌, ಕಾಮರ್ಸ್‌, ಬ್ಯಾಂಕಿಂಗ್‌ ಪ್ರವೇಶ ಪರೀಕ್ಷೆಗಳ ಉತ್ಕೃಷ್ಟ ಫ‌ಲಿತಾಂಶಕ್ಕಾಗಿ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ನಿಂದ ಎಸೆಸೆಲ್ಸಿ, ಪಿಯು ಪರೀಕ್ಷೆಯಲ್ಲಿ ರ್ಯಾಂಕ್‌ ಗಳಿಸಿದ ಆಚಾರ್ಯಾಸ್‌ ಏಸ್‌ ಸಂಸ್ಥೆಯ ವಿದ್ಯಾರ್ಥಿಗಳನ್ನು ‘ಆಚಾರ್ಯ ಪುರಸ್ಕಾರ’ ನೀಡಿ ಸಮ್ಮಾನಿಸಲಾಯಿತು. ಏಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದು ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್‌ ಪಡೆದ ಸುಮಂತ್‌ ಕಾರಂತ, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್‌ ಪಡೆದ ಆದಿತ್ಯ ಆರ್‌., ಗರಿಷ್ಠ ಅಂಕ ಗಳಿಸಿದ […]

ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್: ಮಳೆಯಲಿ ಮಕ್ಕಳ ಆಟ ಬೊಂಬಾಟ

ಉಡುಪಿ: ಇಲ್ಲಿನ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಇತ್ತೀಚೆಗೆ ಮಕ್ಕಳಿಗಾಗಿಯೇ ಮಳೆಯ ಆಟಗಳನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಆಟದ ಸೊಗಡನ್ನು ಪಸರಿಸುವ ಉದ್ದೇಶದಿಂದ ಸಂಸ್ಥೆ ಹಮ್ಮಿಕೊಂಡ ಈ ಕ್ರೀಡಾಕೂಟದಲ್ಲಿ ಮಕ್ಕಳು ಭಾಗವಹಿಸಿ ಖುಷಿಪಟ್ಟರು.