ಉಡುಪಿ ಎಪಿಎಂಸಿಯಿಂದ ಆರ್ಥಿಕ ಪ್ರಗತಿ: ವಾರ್ಷಿಕ ಸರಾಸರಿ 2.5ಕೋಟಿ ರೂ. ಸಂಗ್ರಹ

* ಉಡುಪಿ Xpress ವಿಶೇಷ ಉಡುಪಿ, ಜೂ. 30: 2015ರವರೆಗೆ ಒಂದು ಕೋಟಿ ರೂ.ಗೆ ಮೀರದ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ವಾರ್ಷಿಕ ಆದಾಯ ಇದೀಗ ಕಳೆದ ಮೂರು ವರ್ಷಗಳಿಂದ 2.5ಕೋಟಿ ರೂ.ಗೆ ಏರಿಕೆಯಾಗಿದೆ. ಈ ಮೂಲಕ ಎಪಿಎಂಸಿ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಆದಿಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ವಾರ ನಡೆಯುವ ವಾರದ ಸಂತೆಯ ವ್ಯಾಪರಸ್ಥರಿಗೆ ವಿಧಿಸುವ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇದರಿಂದ ಸಂಗ್ರಹವಾದ ಶುಲ್ಕ ಮತ್ತು ಅಂಗಡಿಗಳ ಪರವಾನಿಗೆ, ನವೀಕರಣ, ಗ್ರಾಮೀಣ ಪ್ರದೇಶಗಳಲ್ಲಿರುವ ದಿನಸಿ […]

ಅಕ್ರಮ‌ ಗೋ ಸಾಗಾಟಕ್ಕೆ ಖಾದರ್ ಅಭಯಹಸ್ತ: ಶೋಭಾ ಆರೋಪ

ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಟಕ್ಕೆ ಸಚಿವ ಯುಟಿ ಖಾದರ್ ಅಭಯ ಹಸ್ತ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.ಮಂಗಳೂರಿನಲ್ಲಿ ಶನಿವಾರ ಮಾಧ್ಯಮದ‌ ಜತೆ ಮಾತನಾಡಿದ ಅವರು‌ ಉಸ್ತುವಾರಿ ಸಚಿವರ ಅಭಯ ಹಸ್ತ ಇಲ್ಲದೇ ಅಕ್ರಮ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.ಜಿಲ್ಲೆಯ ಅಕ್ರಮ ಗೋಸಾಗಾಟ ತಡೆಯಲು ವಿಶೇಷ ತಂಡ ರಚಿಸಬೇಕು. ಅಕ್ರಮ ಗೋಸಾಗಾಟಕ್ಕೆ ಜಿಲ್ಲಾಡಳಿತ, ಸರ್ಕಾರದ ವೈಫಲ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.ಸಿಎಂ ಗ್ರಾಮ ವಾಸ್ತವ್ಯ ಒಂದು ನಾಟಕವಾಗಿದೆ. ಬೇಡಿಕೆ ಈಡೇರಿಸಿ ಅಂದರೆ ಲಾಠಿಚಾರ್ಜ್ ಮಾಡುತ್ತೇನೆ […]

ಮೂಡುಶೆಡ್ಡೆ: ಈಜುಕೊಳದಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಮಂಗಳೂರು: ಮೂಡುಶೆಡ್ಡೆ ಸಮೀಪದ ರೆಸಾರ್ಟ್‌ನ ಈಜುಕೊಳ್ಳದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವ ಬಿದ್ದು ಮೃತಪಟ್ಟಿರುವ ಘಟನೆ ಜೂ. 29ರಂದು ಸಂಭವಿಸಿದೆ. ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಎಲ್ಡನ್‌ಪರೀಶ್ (21) ಮೃತ ವಿದ್ಯಾರ್ಥಿ. ಸಂಜೆ ರೆಸಾರ್ಟ್‌ನ ಈಜುಕೊಳದಲ್ಲಿ ಜಲಕ್ರೀಡೆಯಲ್ಲಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು: ಕಡಲ ಕಿನಾರೆಯಲ್ಲಿ ಶಾರ್ಕ್ ಮೀನು ಪತ್ತೆ

ಮಂಗಳೂರು: ಮಂಗಳೂರಿನ ಮುಕ್ಕ ಕಡಲ ಕಿನಾರೆಯಲ್ಲಿ ಸತ್ತ ಶಾರ್ಕ್‌‌ ಮೀನು ಪತ್ತೆಯಾಗಿದೆ. ಸುರತ್ಕಲ್ ಸಮೀಪದ ಮುಕ್ಕ ಕಡಲ ಕಿನಾರೆಯಲ್ಲಿ ಬೃಹದಾಕಾರದ ಶಾರ್ಕ್ ಮೀನು ದಡ ಸೇರಿದೆ.ಮೀನುಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮೀನುಗಾರಿಕಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.