ಮಾಜಿ ಸಚಿವ ಜನಾರ್ದನ ಪೂಜಾರಿ ಕುದ್ರೋಳಿ ಕ್ಷೇತ್ರಕ್ಕೆ‌ ಭೇಟಿ…! ದೇವರಲ್ಲಿ ಕ್ಷಮೆ ಯಾಚಿಸಿದ ಪೂಜಾರಿ

ಮಂಗಳೂರು: ಕಳೆದ ಲೋಕಸಭಾ ಚುನಾವಣಾ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ‌ಅಭ್ಯರ್ಥಿ ಮಿಥುನ್ ರೈ ಗೆಲ್ಲದಿದ್ದರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಭಾನುವಾರ ಕ್ಷೇತ್ರಕ್ಕೆ ಭೇಟಿ‌ ನೀಡಿ ಅಚ್ಚರಿ ಮೂಡಿಸಿದ್ದಾರೆ. ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ಮುಂದೆ ಕೈಮುಗಿದು, ಕ್ಷೇತ್ರಕ್ಕೆ ಭೇಟಿ ನೀಡುವುದಿಲ್ಲ ಅಂತ ಹೇಳಿ ದೊಡ್ಡ ತಪ್ಪು ಮಾಡಿದ್ದೇನೆ. ಹಾಗಾಗಿ ದೇವರ ಬಳಿ ಬಂದು ತಪ್ಪಿಗೆ ಕ್ಷಮೆ ಯಾಚಿಸಿದ್ದೇನೆ ತಪ್ಪನ್ನು ಸರಿ ಮಾಡದೆ ಸತ್ತರೆ ದೇವರು […]

ಬಂಟಕಲ್ಲು ಕೆಸರುಗದ್ದೆ ಕ್ರೀಡೋತ್ಸವ ಉದ್ಘಾಟನೆ, ನಮ್ಮ ದೇಶದಲ್ಲಿ‌ ಕೃಷಿ ಸಂಸ್ಕೃತಿಯೇ ಪ್ರಧಾನ: ಗಣಪತಿ ನಾಯಕ್

ಉಡುಪಿ: ನಮ್ಮ ಪೂರ್ವಿಕರ ಶ್ರಮದಾಯಕ ಜೀವನದಲ್ಲಿ ಕೃಷಿ ಸಂಸ್ಕ್ರತಿಯೇ ಪ್ರಧಾನವಾಗಿದ್ದು, ಈ ತಳಹದಿಯಲ್ಲಿ ಧಾರ್ಮಿಕ ವೈದಿಕ ಪರಂಪರೆ ಬೆಳೆದು ಬಂದಿದೆ. ಅವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ನೋಡಿಕಲಿಯುವ ಅವಕಾಶವಿತ್ತು. ಈಗಿನ ಮಕ್ಕಳಿಗೆ ಈ ಅವಕಾಶವಿಲ್ಲ. ನವಪೀಳಿಗೆಯಲ್ಲಿ ಕೃಷಿ ಪರಂಪರೆಯನ್ನು ಪರಿಚಯಿಸುವಲ್ಲಿ ಕೆಸರುಗದ್ದೆ ಕ್ರೀಡೋತ್ಸವಗಳು ಪ್ರೇರಕ ಎಂದು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಲಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ಹೇಳಿದರು. ಅವರು ಭಾನುವಾರ ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದ, ಶ್ರೀದುರ್ಗಾ ಮಹಿಳಾ ವೃಂದದ ಜಂಟಿ ಆಶ್ರಯದಲ್ಲಿ ಸಡಂಬೈಲು ಅನಂತರಾಮ […]

ಆಯುಷ್ಮಾನ್ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಗೆ ವಿಲೀನ, ಬಡವರಿಗೆ ತೊಂದರೆ: ರಘಪತಿ ಭಟ್

ಉಡುಪಿ: ಕೇಂದ್ರ ಸರಕಾರದ‌ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ರೋಗಿ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ರಾಜ್ಯ ಸರಕಾರ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಳಿಸಿ, ಬಡವರನ್ನು ವೈದ್ಯಕೀಯ ಸೇವೆ ವಂಚಿತರನ್ನಾಗಿ ಮಾಡಿದೆ. ಇದರಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಯೋಜನೆ ಪ್ರತ್ಯೇಕವಾಗಿಸುವ ಜತೆಗೆ ಜಿಲ್ಲಾಸ್ಪತ್ರೆಗಳ ಶಿಫಾರಸ್ಸು ಪತ್ರ ಪಡೆಯುವ ಪದ್ಧತಿ ಕೈಬಿಡಲು ಮಳೆಗಾಲದ ಅಧಿವೇಶನದಲ್ಲಿ ಆಗ್ರಹಿಸಲಾಗುವುದು ಎಂದು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು. ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ […]

ಡ್ರೀಮ್ ಕ್ಯಾಚರ್ಸ್ ಈವೆಂಟ್ಸ್ ಮ್ಯಾನೇಜ್‌ಮೆಂಟ್:  ಟ್ಯಾಲೆಂಟ್ ಹಂಟ್ ಮತ್ತು ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಸ್ಪರ್ಧೆ

ಮಂಗಳೂರು: ಮಂಗಳೂರಿನ ಹೆಸರಾಂತ ಇವೆಂಟ್ ಮ್ಯಾನೇಜ್‌ಮಂಟ್ ಸಂಸ್ಥೆ ಡ್ರೀಮ್ ಕ್ಯಾಚರ್ಸ್ ವತಿಯಿಂದ ಟ್ಯಾಲೆಂಟ್ ಹಂಟ್ ಮತ್ತು ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಸ್ಪರ್ಧೆ ಮಂಗಳೂರಿನ ಫಾರಂ ಫೀಝಾ ಮಾಲ್‌ನಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಶಿವಪ್ರೀಯಾ ಸಿಲ್ಕ್ಸ್‌ನ ಮಾಲಕರಾದ ರೇಷ್ಮಾ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.    ಅನಂತರ ಡ್ರೀಮ್ ಕ್ಯಾಚರ್ಸ್ನ ಆಡಳಿತ ನಿರ್ದೇಶಕರಾದ ಪೃಥ್ವೀ ಗಣೇಶ್ ಕಾಮತ್ ಮಾತನಾಡಿ, ಕಾರ್ಯಕ್ರಮ ನಡೆಸುವ ಉದ್ದೇಶ ಹಾಗೂ ಬಗ್ಗೆ ಮಾಹಿತಿ ನೀಡಿದರು. ಸ್ಪರ್ಧೆಯಲ್ಲಿ ೨೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಟ್ಯಾಲೆಂಟ್ ಹಂಟ್ […]

ಮಂಗಳೂರು‌ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ..! 

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಹೊರಜಾರಿದ್ದು, ಭಾರೀ ದುರಂತವೊಂದು ತಪ್ಪಿದಂತಾಗಿದೆ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ – 380 ವಿಮಾನ ಪೈಲಟ್ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ. ದುಬೈನಿಂದ 181 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ವಿಮಾನ ಸಂಜೆ 5.20ಕ್ಕೆ ಮಂಗಳೂರು ಬಜಪೆಯ ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ. ಪೈಲೆಟ್ ಸಮಯಪ್ರಜ್ಞೆಯಿಂದ ಯಾವುದೇ ತೊಂದರೆ ಉಂಟಾಗಿಲ್ಲ.