12 ಲ.ರೂ. ಕೂಪನ್ಕಾರ್ಡ್ ವಿಜೇತರೆಂದು ನಂಬಿಸಿ; ಮಹಿಳೆಗೆ 3.55 ಲಕ್ಷ ರೂ. ವಂಚನೆ
ಉಡುಪಿ: ಕೂಪನ್ಕಾರ್ಡ್ ನಲ್ಲಿ 12 ಲಕ್ಷ ವಿಜೇತರಾಗಿದ್ದಾರೆಂದು ಮಹಿಳೆಯೊಬ್ಬರನ್ನು ನಂಬಿಸಿ 3.55 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ರಹ್ಮಾವರ ಸಮೀಪದ ನೀಲಾವರ ಗ್ರಾಮದ ಕೆಮ್ಮಣ್ಣುಕಡು ನಿವಾಸಿ ಪಲ್ಲವಿ ವಂಚನೆಗೊಳಗಾದ ಮಹಿಳೆ. ಪಲ್ಲವಿ ಅವರಿಗೆ ಪೋಸ್ಟ್ ಮೂಲಕ ನಾಪ್ಟಾಲ್ ಎಂಬ ಸಂಸ್ಥೆ ಹೆಸರಿನಲ್ಲಿ 12 ಲಕ್ಷ ರೂ. ವಿಜೇತರಾಗಿದ್ದೀರಿ ಎನ್ನುವ ಕೂಪನ್ ಬಂದಿದೆ. ಹೀಗಾಗಿ ಅವರು ಅದರಲ್ಲಿದ್ದ ಮೊಬೈಲ್ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಅಶ್ವಿನ್ ಕುಮಾರ್ ಮತ್ತು ಅಜಯ್ಕುಮಾರ್ ಎಂಬಿಬ್ಬರು 12 ಲಕ್ಷ ರೂ., […]
‘ಕಿಟ್ ಕ್ಯಾಟ್’ ರ್ಯಾಪರ್ ನಲ್ಲಿ ಮರವಂತೆ ಮಿಂಚಿಂಗ್: ನಮ್ಮ ಕರಾವಳಿಯ ಕಡಲ ಕಿನಾರೆಗೆ ಸಿಕ್ತು ಜಾಗತಿಕ ಮನ್ನಣೆ
ಉಡುಪಿ:ನಮ್ಮ ರಾಜ್ಯದ ಚಂದದ ಕಡಲ ಕಿನಾರೆಗಳ ಪೈಕಿ ಮರವಂತೆಗೆ ಅದರದ್ದೇ ಆದ ಸೌಂದರ್ಯವಿದೆ. ಪ್ರವಾಸಿಗರ ಮೈ ಮನಗಳಲ್ಲಿ ಮರವಂತೆ ಯಾವಾಗಲೂ ಮೈ ನವಿರೇಳಿಸುವಂತಹ ಅನುಭವವನ್ನೇ ಕೊಡುತ್ತಿರೋದು ನಿಮಗೆಲ್ಲಾ ಗೊತ್ತು. ಈಗ ಇದೇ ಮರವಂತೆಯ ಕಡಲು ಕಿಟ್ ಕ್ಯಾಟ್ ಚಾಕಲೇಟ್ ನ ರ್ಯಾಪರ್ ನಲ್ಲಿ ಮಿಂಚಿ ಜಗತ್ತಿನಲ್ಲೆಲ್ಲಾ ಓಡಾಡುತ್ತಿದೆ. ಹೌದು ಮರವಂತೆ ಬೀಚ್ ಚಿತ್ರವನ್ನು ಜಾಗತಿಕ ಮಟ್ಟದ ಪ್ರತಿಷ್ಠಿತ ಆಹಾರ ಪದಾರ್ಥಗಳ ಉತ್ಪಾದನೆ, ಮಾರಾಟದ ನೆಸ್ಲೆ ಸಂಸ್ಥೆ ‘ಕಿಟ್ಕ್ಯಾಟ್’ ಚಾಕಲೆಟ್ ತನ್ನ ರ್ಯಾಪರ್ ನಲ್ಲಿ ಬಳಸಿದೆ. ಆ ಮೂಲಕ ಮರವಂತೆ ಬೀಚ್ […]
ಉಡುಪಿ: ಸಿಎಂ ಹೇಳಿಕೆಗೆ ನಯನಾ ಗಣೇಶ್ ಖಂಡನೆ
ಉಡುಪಿ: ರಾಯಚೂರಿನಲ್ಲಿ ಕಾರ್ಮಿಕರ ಪ್ರತಿಭಟನೆಯ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗೆ ಎಚ್.ಡಿ.ಕುಮಾರಸ್ವಾಮಿ ಅವರು, “ನರೇಂದ್ರ ಮೋದಿಗೆ ವೋಟ್ ಹಾಕಿದ್ದಿರಾ, ಸಮಸ್ಯೆ ಬಗ್ಗೆ ನಮ್ಮ ಜೊತೆ ಹೇಳ್ತಿರಾ, ಅವರನ್ನೇ ಕೇಳಿ” ಎಂಬ ಉದ್ದಟತನದ ಹೇಳಿಕೆ ಹೇಳಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಗಣೇಶ್ ಹೇಳಿದ್ದಾರೆ. ಕುಮಾರಸ್ವಾಮಿ ಅವರು ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಸಮಸ್ಯೆಗೆ ಸ್ಪಂದಿಸುವುದು ಅವರ ಕರ್ತವ್ಯ. ಅದಲ್ಲದೇ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹತಾಶೆಯಿಂದ ರಾಜ್ಯದ ಜನರನ್ನು ಅವಮಾನಿಸುವ ಕೆಲಸ […]
ನವಸುಮ ರಂಗಮಂಚ ಕೊಡವೂರು ತಂಡ ಪ್ರದರ್ಶಿಸಿದ ‘ಅಂಜಲಿ ಭರ್ ಪಾನಿ’ ನಾಟಕಕ್ಕೆ ಪ್ರಥಮ ಪ್ರಶಸ್ತಿ
ಉಡುಪಿ: ನವಸುಮ ರಂಗಮಂಚ ಕೊಡವೂರು ರಂಗ ತಂಡವು ಹಿಮಾಚಲ ಪ್ರದೇಶದ ಶಿಮ್ಲಾದ ಗಯ್ಟಿ ಥಿಯೇಟರ್ನಲ್ಲಿ ನಡೆದ 64ನೇ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ‘ಅಂಜಲಿ ಭರ್ ಪಾನೀ’ ಹಿಂದಿ ನಾಟಕಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದ್ದು, ಆ ಮೂಲಕ ರಾಷ್ಟ್ರಮಟ್ಟದ ಹಿಂದಿ ಭಾಷೆಯ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಮೊದಲ ತಂಡ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದು ನವಸುಮ ರಂಗಮಂಚದ ಅಧ್ಯಕ್ಷ ಬಾಲಕೃಷ್ಣ ಕೊಡವೂರು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುಮಾರು 64 ವರ್ಷಗಳಿಂದ ಎಎಐಎ ಸಂಸ್ಥೆಯು […]
ಹಿರಿಯಡ್ಕ: ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಹಿರಿಯಡಕ: ತುಳು ಜಾನಪದ ಕಲಾವಿದ ರವೀಂದ್ರ ಪಾಣರವರು ಕಾಜಾರಗುತ್ತುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.ಈ ಸಂದರ್ಭ ಶ್ರೀಮತಿ ಪ್ರಪುಲ್ಲ ರವೀಂದ್ರ ಪಾಣರ, ಬೇಬಿ ಶ್ರೀನಿಧಿ, ರವೀಂದ್ರ ಪಾಣರ, ಉದ್ಯಮಿ ಅನಿಲ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಗೌರಿ ಕೆ., ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ಶಿಕ್ಷಕರು, ಶಾಲಾ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.