ಬೆಳ್ಮಣ್: ಜೂನ್‌ 17ರಿಂದ ಅಂತರ್ಜಲ ಹೆಚ್ಚಳ, ನಮ್ಮ ಛಲ- ರೈತರೊಂದಿಗೆ ಸಂವಾದ

ಕಾರ್ಕಳ: ಭಾರತೀಯ ಕಿಸಾನ್‌ ಸಂಘ ಕಾರ್ಕಳ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಗ್ರಾ.ಪಂ.ಗಳ ಸಹಭಾಗಿತ್ವದಲ್ಲಿ ಬೆಳ್ಮಣ್‌ ಜಿ.ಪಂ. ವ್ಯಾಪ್ತಿಯ ಏಳು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಡಿಲು ಗದ್ದೆಗಳಲ್ಲಿ ಮುಂಗಾರು ಭತ್ತದ ಬೆಳೆ, ಕೃಷಿ ಹೊಂಡ, ಇಂಗು ಗುಂಡಿ, ಮಳೆ ಕೊಯ್ಲು, ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸ್ವೀಕಾರ ವಿವಿಧ ಕಡೆಗಳಲ್ಲಿ ಜೂ.17 ರಿಂದ 21ರ ವರೆಗೆ ನಡೆಯಲಿದೆ ಎಂದು ಬೆಳ್ಮಣ್‌ ಜಿ.ಪಂ. ಸದಸ್ಯೆ ರೇಷ್ಮಾ ಉದಯ್‌ ಶೆಟ್ಟಿ […]

ಶ್ರೀ ಕೃಷ್ಣ ಮಠ: ರಥಬೀದಿಯಲ್ಲಿ ಮೆರವಣಿಗೆ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ವಿರಾಟಪರ್ವಪ್ರವಚನಮಂಗಲ ಮತ್ತು ಷಷ್ಠಿಪೂರ್ತಿ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ “ವಿಶ್ವಾರ್ಪಣಂ” ಅನ್ನು  ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಯೋಜಿಸಿದ್ದು,  ನಾಳೆ ನಡೆಯಲಿರುವ ದಶ ಕುಂಡಗಳಲ್ಲಿ 108 ಋತ್ವಿಜರಿಂದ ಧನ್ವಂತರಿ ಯಾಗ ಹಾಗೂ ಪುಣ್ಯ ಕ್ಷೇತ್ರ ಹಾಗೂ ಪುಣ್ಯ ನದಿಗಳ ಜಲದಿಂದ ಶ್ರೀಪಾದರಿಗೆ ಅಭಿಷೇಕ ನಡೆಯಲಿದೆ.ಇದರ ಪೂರ್ವಭಾವಿಯಾಗಿ ಎಲ್ಲ ಕ್ಷೇತ್ರಗಳ ಪುಣ್ಯ ಜಲವನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ಕೃಷ್ಣ […]

ಶ್ರೀ ಕೃಷ್ಣ ಮಠದಲ್ಲಿ ಭರಟನಾಟ್ಯ ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಕುಮಾರಿ. ಸೃಷ್ಟಿ ಪಂಢರಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಆಳ್ವಾಸ್‌ ಕಾಲೇಜಿಗೆ ನ್ಯಾಕ್‌ ‘ಎ’ ಗ್ರೇಡ್‌ ಮಾನ್ಯತೆ; ಸಂಶೋಧನಾ ಕಾರ್ಯಗಳಿಗೆ ಸಹಕಾರಿ: ಮೋಹನ್ ಆಳ್ವ

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್‌ ಕಾಲೇಜಿಗೆ ಯುಜಿಸಿ ‘ನ್ಯಾಕ್‌’ ಸಂಸ್ಥೆಯು ‘ಎ’ ಗ್ರೇಡ್‌ ಮಾನ್ಯತೆ ನೀಡಿದ್ದು, ಹೊಸ ಮಾನ್ಯತಾ ಕ್ರಮ ದಲ್ಲಿ ಸಿಜಿಪಿಎ 3.23 ಪಡೆದಿದೆ.‌ ಈ ಮಾನ್ಯತೆ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ‘ಎ’ ಗ್ರೇಡ್‌ ಮಾನ್ಯತೆಯಿಂದ ಸಂಶೋಧನಾ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ 21 ವರ್ಷಗಳ ಹಿಂದೆ 28 ವಿದ್ಯಾರ್ಥಿ ಗಳು, 2 ಕೋರ್ಸ್ನಿಂದ ಪ್ರಾರಂಭವಾದ ಆಳ್ವಾಸ್‌ ಸಂಸ್ಥೆ ಈಗ 18 […]

ಬಂಟ್ವಾಳ: ವಿಟ್ಲಾದಲ್ಲಿ ನಿರಂತರ ಖೋಟ ನೋಟು ಚಲಾವಣೆ; ಪತ್ತೆಗಾಗಿ‌ ಜನರ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ 500 ರೂಪಾಯಿಯ ಖೋಟಾ ನೋಟು ನಿರಂತರವಾಗಿ ಚಲಾವಣೆಯಾಗಿರೋದು ಪತ್ತೆಯಾಗಿದೆ. ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಗಳು 500 ರೂಪಾಯಿಯ ಖೋಟಾ ನೋಟು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇಲ್ಲಿ ಎರಡು ಖೋಟಾ ನೋಟು ಪತ್ತೆಯಾಗಿದೆ. ಕೆಲ ಭಾಗಗಳಲ್ಲಿ ಅಂಗಡಿ ಮಾಲಕರು ಇಲ್ಲದ ಬಗ್ಗೆ ಮಾಹಿತಿ ಪಡೆದು ಖೋಟಾ ನೋಟು ಚಲಾವಣೆಗಾರರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇದೇ ರೀತಿ ಹಲವು ಅಂಗಡಿಗಳಲ್ಲಿ 500 ರೂಪಾಯಿಯ […]