ಉಡುಪಿ:ಈದ್‌ ಉಲ್‌ ಫಿತರ್‌ ಹಬ್ಬದ ಸಂಭ್ರಮ

ಉಡುಪಿ: ಈದ್‌ ಉಲ್‌ ಫಿತರ್‌ ಹಬ್ಬದ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್‌ಸಭಾ ಪದಾಧಿಕಾರಿಗಳು ಬುಧವಾರ ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರೊಂದಿಗೆಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ಪದಾಧಿಕಾರಿಗಳು ಉಡುಪಿಯ ಜಾಮೀಯಾ ಮಸೀದಿಗೆ ತೆರಳಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಹಾಗೂ ಮುಸ್ಲಿಂ ಬಾಂಧವರೊಂದಿಗೆ ಹಸಿರು ಗಿಡ ನೀಡುವ ಮೂಲಕ ಈದ್‌ ಹಬ್ಬದ ಶುಭಾಶಯಗಳನ್ನು ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ನ ಆಧ್ಯಾತ್ಮಿಕನಿರ್ದೇಶಕ ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಸೌಹಾರ್ದತೆಯನ್ನು ಕಾಯ್ದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.ಈ ವೇಳೆ ಕೆಥೊಲಿಕ್ […]

ಕರಾವಳಿಯಾದ್ಯಂತ ಸಂಭ್ರಮದ ಈದುಲ್ ಫಿತರ್

ಮಂಗಳೂರು/ಉಡುಪಿ: ಮುಸ್ಲಿಂ ಸಮುದಾಯ ಒಂದು ತಿಂಗಳ ರಂಜಾನ್ ಉಪವಾಸ ವೃತ ಮುಗಿದು ಬುಧವಾರ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು. ದಕ್ಷಿಣ ಕನ್ನಡ ಹಾಗೂ‌ ಉಡುಪಿ‌ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಸಲ್ಲಿಸಲಾಯಿತು. ಮಂಗಳೂರಿನ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ನಡೆದ ಸಾಮೂಹಿಕ ನಮಾಝ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾಧರ್ ಪಾಲ್ಗೊಂಡಿದ್ದರು.  ಅನಂತರ ಮಾತನಾಡಿದ ಅವರು‌ ಹಬ್ಬದ ಶುಭ ಕೋರಿ, ಶಾಂತಿ ಸಹೋದರತ್ವ […]

ಉಡುಪಿಯ ವಿದ್ಯಾ ಟ್ಯುಟೋರಿಯಲ್ ಕಾಲೇಜು: ದಾಖಲಾತಿ ಶುರು

ಉಡುಪಿ : ಸಿಟಿ ಬಸ್‌ನಿಲ್ದಾಣ ಬಳಿಯ ಸಿಲ್ಕ್ಹೀನಾ ಬಿಲ್ಡಿಂಗ್‌ನಲ್ಲಿರುವ ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಎಸೆಸೆಲ್ಸಿ, ಪಿಯುಸಿ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಪ್ರಥಮ ಪಿಯುಸಿ ಅನುತ್ತೀರ್ಣ ರಾದವರು ಅಥವಾ ಎಸೆಸೆಲ್ಸಿ ಉತ್ತೀರ್ಣರಾದವರು ನೇರವಾಗಿ ದ್ವಿ.ಪಿಯುಸಿ ಮಾಡಬಹುದು. ಪ್ರಥಮ ಪಿಯುಸಿಯ ಬೇಸಿಕ್‌ ಬೋಧಿಸಿದ ಅನಂತರ ದ್ವಿ.ಪಿಯುಸಿಯ ಪಾಠವನ್ನು ಆರಂಭಿಸಲಾಗುವುದು. ಅನುಭವಿ ಶಿಕ್ಷಕರನ್ನೊಳಗೊಂಡ ಸಂಸ್ಥೆ ಪ್ರತೀವರ್ಷ ಉತ್ತಮ ಫ‌ಲಿತಾಂಶ ದಾಖಲಿಸುತ್ತಿದೆ. 7, 8, 9ನೇ ತರಗತಿಯಲ್ಲಿ ಅನು ತ್ತೀರ್ಣರಾದವರು ನೇರವಾಗಿ ಎಸೆಸೆಲ್ಸಿ ಮಾಡಬಹುದು. ಟ್ಯೂಷನ್‌ ವಿಭಾಗದಲ್ಲಿ ಪ್ರಥಮ ಪಿಯುಸಿಯ ಪಿಸಿಎಂಬಿ, ಪ್ರಥಮ, […]

ಸಂಪನ್ಮೂಲಗಳ ಮಿತ ಬಳಕೆಯಿಂದ ಪರಿಸರ ರಕ್ಷಣೆ ಸಾಧ್ಯ- ನ್ಯಾ.ಜೋಷಿ

ಉಡುಪಿ : ಪ್ರಕೃತಿಯಲ್ಲಿರುವ  ಎಲ್ಲಾ ಬಗೆಯ ಸಂಪನ್ಮೂಲಗಳನ್ನು , ಮಿತವಾಗಿ ಬಳಸುವುದರ ಮೂಲಕ, ಮಾನವರು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಂಡರೆ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ತಿಳಿಸಿದ್ದಾರೆ. ಅವರು ಬುಧವಾರ, ಪಡುಬಿದ್ರೆಯ, ರಮೇಶ್ ಮಹಾಬಲ ಶೆಟ್ಟಿ ಸಭಾ ಭವನದಲ್ಲಿ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ , ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಖೆ, […]

ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಅರ್ಚಕರಿಗೆ ಹಲ್ಲೆ,  ತನಿಖೆಗೆ ವಿಹಿಂಪ ಆಗ್ರಹ 

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಠದ ಅರ್ಚಕರಿಗೆ ಹಲ್ಲೆ‌ ಪ್ರಕರಣ ಇಡೀ ಹಿಂದೂ ಸಮಾಜಕ್ಕೆ ನೋವು ತಂದಿದೆ. ಈ ಘಟನೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದ್ದು, ಘಟನೆಯನ್ನು ಜಿಲ್ಲಾಧಿಕಾರಿ ಅವರು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು‌ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಅರ್ಚಕ‌ ಶ್ರೀ ಕುಮಾರ್ ಬನ್ನಿಂತಾಯ ಅವರ ಹಲ್ಲೆಗೆ ಸಂಬಂಧಿಸಿದಂತೆ ಅಲ್ಲಿ ಕೆಲವು ರಾಜಕೀಯ ನಡೆಯುತ್ತಿದೆ. ಇಂತಹ ಕೃತ್ಯ ದೇವಸ್ಥಾನದಲ್ಲಿ ನಡೆಯಬಾರದು. ದೇವಸ್ಥಾನದ ಕಚೇರಿಯಲ್ಲಿ […]