ಕರಾವಳಿಯಾದ್ಯಂತ ಸಂಭ್ರಮದ ಈದುಲ್ ಫಿತರ್

ಮಂಗಳೂರು/ಉಡುಪಿ: ಮುಸ್ಲಿಂ ಸಮುದಾಯ ಒಂದು ತಿಂಗಳ ರಂಜಾನ್ ಉಪವಾಸ ವೃತ ಮುಗಿದು ಬುಧವಾರ ಈದುಲ್ ಫಿತರ್ ಹಬ್ಬ ಆಚರಿಸಲಾಯಿತು.
ದಕ್ಷಿಣ ಕನ್ನಡ ಹಾಗೂ‌ ಉಡುಪಿ‌ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಸಲ್ಲಿಸಲಾಯಿತು.
ಮಂಗಳೂರಿನ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ನಡೆದ ಸಾಮೂಹಿಕ ನಮಾಝ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾಧರ್ ಪಾಲ್ಗೊಂಡಿದ್ದರು. 
ಅನಂತರ ಮಾತನಾಡಿದ ಅವರು‌ ಹಬ್ಬದ ಶುಭ ಕೋರಿ, ಶಾಂತಿ ಸಹೋದರತ್ವ ಸಹಬಾಳ್ವೆ, ಸಾರುವ ಹಬ್ಬದಲ್ಲಿ ಸಹಕಾರ ಮನೋಭಾವ ಹೆಚ್ಚಾಗಲಿ ಎಂದರು. ಸಾವಿರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದರು.