ಉಡುಪಿಯ ವಿದ್ಯಾ ಟ್ಯುಟೋರಿಯಲ್ ಕಾಲೇಜು: ದಾಖಲಾತಿ ಶುರು

ಉಡುಪಿ : ಸಿಟಿ ಬಸ್‌ನಿಲ್ದಾಣ ಬಳಿಯ ಸಿಲ್ಕ್ಹೀನಾ ಬಿಲ್ಡಿಂಗ್‌ನಲ್ಲಿರುವ ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಎಸೆಸೆಲ್ಸಿ, ಪಿಯುಸಿ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.

ಪ್ರಥಮ ಪಿಯುಸಿ ಅನುತ್ತೀರ್ಣ ರಾದವರು ಅಥವಾ ಎಸೆಸೆಲ್ಸಿ ಉತ್ತೀರ್ಣರಾದವರು ನೇರವಾಗಿ ದ್ವಿ.ಪಿಯುಸಿ ಮಾಡಬಹುದು. ಪ್ರಥಮ ಪಿಯುಸಿಯ ಬೇಸಿಕ್‌ ಬೋಧಿಸಿದ ಅನಂತರ ದ್ವಿ.ಪಿಯುಸಿಯ ಪಾಠವನ್ನು ಆರಂಭಿಸಲಾಗುವುದು. ಅನುಭವಿ ಶಿಕ್ಷಕರನ್ನೊಳಗೊಂಡ ಸಂಸ್ಥೆ ಪ್ರತೀವರ್ಷ ಉತ್ತಮ ಫ‌ಲಿತಾಂಶ ದಾಖಲಿಸುತ್ತಿದೆ.

7, 8, 9ನೇ ತರಗತಿಯಲ್ಲಿ ಅನು ತ್ತೀರ್ಣರಾದವರು ನೇರವಾಗಿ ಎಸೆಸೆಲ್ಸಿ ಮಾಡಬಹುದು. ಟ್ಯೂಷನ್‌ ವಿಭಾಗದಲ್ಲಿ ಪ್ರಥಮ ಪಿಯುಸಿಯ ಪಿಸಿಎಂಬಿ, ಪ್ರಥಮ, ದ್ವಿ. ಪಿಯುಸಿಯ ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌, ಬೇಸಿಕ್‌ ಮ್ಯಾಥ್ಸ್, 8ರಿಂದ 10ನೇ ತರಗತಿಯ ಎಲ್ಲ ವಿಷಯಗಳಿಗೆ ತರಬೇತಿ ನೀಡಲಾಗುವುದು.

ಸಂಸ್ಥೆಯು ಈ ಬಾರಿಯ ದ್ವಿ.ಪಿಯುಸಿ ಖಾಸಗಿ ವಿಭಾಗದಲ್ಲಿ ಶೇ. 91, ಕೋಚಿಂಗ್‌ ವಿಭಾಗದಲ್ಲಿ ಶೇ. 100 ಫ‌ಲಿತಾಂಶ ದಾಖಲಿಸಿದೆ. ದ್ವಿ.ಪಿಯುಸಿಯ ಖಾಸಗಿ ವಿಭಾಗದ ರಾಜ್ಯಮಟ್ಟದ ದಾಖಲೆ ಸಂಸ್ಥೆಯ ವಿದ್ಯಾರ್ಥಿನಿ ಸುಪ್ರಿಯಾ ಅವರ ಹೆಸರಿನಲ್ಲಿದೆ. ದಾಖಲಾತಿ ಮತ್ತು ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಪ್ರಾಂಶುಪಾಲ ಸತೀಶ್‌ ಎಸ್‌. ಕಾಡೋಳಿ ತಿಳಿಸಿದ್ದಾರೆ.