ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕನ ಬಾಳಿಗೆ ದಾರಿಯಾಗಿ: ಕನಸುಕಂಗಳ ಯುವಕನಿಗೆ ಬೇಕಿದೆ ನಿಮ್ಮ ನೆರವು
ಉಡುಪಿ: ಎಲ್ಲಾ ಯುವಕರಂತೆ ಆತನಿಗೂ ಬದುಕಿನಲ್ಲಿ ನೂರಾರು ಕನಸುಗಳಿತ್ತು. ಅದನ್ನು ಸಕಾರಗೊಳಿಸುವ ಸಲುವಾಗಿ ರಾತ್ರಿ-ಹಗಲಿನ ಪರಿವಿಲ್ಲದೆ ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೆ ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಶಾಮಿಯಾನ, ಲೈಟಿಂಗ್ ಹೀಗೆ ಹಲವಾರು ಕೆಲಸಗಳಲ್ಲಿ ಮೈಮುರಿದು ದುಡಿಯುತ್ತಿದ್ದ. ರಜೆ ಎಂದು ಒಂದು ದಿನ ಕೂಡ ಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನ ಆತನದ್ದಾಗಿರಲಿಲ್ಲ. ಆದರೆ ಈಗ ವಿಧಿಯಾಟವೇ ಬೇರೆಯಾಗಿದೆ. ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಓಡಾಡುತ್ತಿದ್ದ ಯುವಕನ ಒಂದು ಕಾಲು ಅಪಘಾತದಿಂದಾಗಿ ಕತ್ತರಿಸಲ್ಪಟ್ಟಿದೆ. ಬದುಕಿನ ಬಗ್ಗೆ ನೂರು ಕನಸುಗಳನ್ನು ಹೊಂದಿದವನು ಮುಂದೇನು ಎನ್ನುವ ಚಿಂತೆಯಲ್ಲಿ ಆಸ್ಪತ್ರೆಯ […]
ಮೊಗವೀರ ಸಮುದಾಯ ಬಿಜೆಪಿ ಕೈ ಹಿಡಿದಿದ್ದರಿಂದ ನನಗೆ ಗೆಲುವು ಸಿಕ್ತು:ಕರಂದ್ಲಾಜೆ
ಕುಂದಾಪುರ: ಎಲ್ಲಾ ಒತ್ತಡ, ಆಮಿಷಗಳ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಮೊಗವೀರ ಸಮುದಾಯ ಬಿಜೆಪಿ ಕೈ ಹಿಡಿದಿದ್ದರಿಂದ ನನಗೆ ದೊಡ್ಡಮಟ್ಟದ ಅಂತರದಲ್ಲಿ ಗೆಲುವು ಸಾಧ್ಯವಾಯಿತು. ಮೊಗವೀರ ಸಮುದಾಯ ಭಾರತೀಯ ಜನತಾ ಪಕ್ಷದ ಪರ ನಿಂತಿದೆ. ನಮಗೆ ಬರುವ ಮತಗಳಲ್ಲಿ ಈ ಭಾರಿ ಒಂದು ಹುಲ್ಲುಕಡ್ಡಿಯಷ್ಟು ವ್ಯತ್ಯಾಸವಾಗಿಲ್ಲ. ಜಿ.ಶಂಕರ್ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಜಿ. ಶಂಕರ್ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಕುಂದಾಪುರ ಬಿಜೆಪಿ ಕಚೇರಿಗೆ ಶನಿವಾರ ಮಧ್ಯಾಹ್ನ […]
ಇಲ್ಲಿದೆ ಬಾಯಾರಿದಾಗ ದಾಹ ನೀಗಿಸೋ 2 ಸ್ಪೆಷಲ್ ಜ್ಯೂಸ್
ಕ್ಯಾರೆಟ್ ಮಿಲ್ಕ್ ಶೇಕ್ ಬೇಕಾಗುವ ಸಾಮಗ್ರಿಗಳು: 1 ಕ್ಯಾರೆಟ್, 4 ಗೋಡಂಬಿ, 2 ಕಾರ್ಜುರ, ಎರಡು ಕಪ್ ಹಾಲು, 2 ಸ್ಪೂನ್ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ ಮಾಡುವ ವಿಧಾನ: ಕ್ಯಾರೆಟ್, ಗೋಡಂಬಿ, ಖರ್ಜೂರವನ್ನು ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ, ಮಿಕ್ಸಿ ಜಾರ್ಗಿ ಹಾಲು ಸಕ್ಕರೆ ಏಲಕ್ಕಿ ಪುಡಿ ಹಾಗೂ ಬೇಯಿಸಿದ ಕ್ಯಾರೆಟ್ ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಮಿಕ್ಸಿ ಜಾರ್ ಗೆ ಹಾಲು, ಸಕ್ಕರೆ, ಏಲಕ್ಕಿ ಪುಡಿ, ಹಾಗೂ ಬೇಯಿಸಿದ ಕ್ಯಾರೆಟ್ ಹಾಕಿ ಗ್ರೈಂಡ್ […]
ಅರೆಬರೆ ಚತುಷ್ಪತ ಹೆದ್ದಾರಿ ಕಾಮಗಾರಿ: ಸಂಗಮ್ ಜಂಕ್ಷನ್‌ಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪೆನಿ ಇಲ್ಲಿನ ಸಂಗಮ್ ಜಂಕ್ಷನ್‌ನಲ್ಲಿ ಅರೆಬರೆ ಕಾಮಗಾರಿ ನಡೆಸಿದ್ದರಿಂದ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪರಿಶೀಲನೆ ನಡೆಸಿ ಗುತ್ತಿಗೆ ಕಂಪೆನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಳೆಗಾಲಕ್ಕೆ ಯಾವುದೇ ತಯಾರಿ ಮಾಡಿಕೊಳ್ಳದೆ ಅರೆಬರೆ ಹೆದ್ದಾರಿ ಕಾಮಗಾರಿ ನಡೆಸಲಾಗಿದ್ದು ಮತ್ತು ಸೂಕ್ತ ಚರಂಡಿ ವ್ಯವಸ್ಥೆ ಮಾಡದೆ ಇರುವುದರಿಂದ ಸ್ಥಳೀಯ ಕುಟುಂಬಗಳಿಗೆ ತೊಂದರೆಗಳಾಗುವ ಸಾಧ್ಯತೆ ಇರುವುದುರಿಂದ ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಆಗಮಿಸಿದ ಸಂಸದೆ ಶೋಭಾ ಕರಂದ್ಲಾಜೆ ಶೀಘ್ರವೇ […]
ಕುಂದಾಪುರ:ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಕುಂದಾಪುರ : ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿಯವರ ಆದೇಶದಂತೆ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತಂತೆ ಶನಿವಾರ ಸಂಜೆ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್. ಮಧುಕೇಶ್ವರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಎಸಿ ಡಾ| ಎಸ್. ಮಧುಕೇಶ್ವರ್, ಈ ವರ್ಷ ಬರದ ವಸ್ತುಸ್ಥಿತಿ ಉಡುಪಿ ಜಿಲ್ಲೆಗೂ ತಟ್ಟಿದ್ದು, ಇದರಿಂದ ನಾವು ಎಚ್ಚೆತ್ತುಕೊಳ್ಳುವ ಸಲುವಾಗಿ ಕನಿಷ್ಠ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸುವ ಮತ್ತು […]