ಅಂಗನವಾಡಿ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗೆ ಮನವಿ

ಉಡುಪಿ, ಜೂನ್ 1: ಕಾರ್ಕಳ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ನೀರೆ, ಕುಕ್ಕುಜೆ, ದೋಣಿಪಲ್ಕೆ, ಕೋಡಂಗೈ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ನಿಟ್ಟೆ ಪರಪ್ಪಾಡಿ, ಬೆಳ್ಮಣ್ ಪುನಾರ್, ರಾಗಿಹಕ್ಲು, ಪತ್ತೊಂಜಿಕಟ್ಟೆ, ಬಿ.ಇ.ಎಂ ಶಾಲೆ ಅಂಗನವಾಡಿ ಕೇಂದ್ರದ ಸಹಾಯಕಿಯರನ್ನು ಗುರುತಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಆಯ್ಕೆ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಜೂನ್ 6 ರ ಒಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ,  ತಾಲೂಕು ಪಂಚಾಯತ್ ಕಚೇರಿ, ಕಾರ್ಕಳ ಇಲ್ಲಿಗೆ ಲಿಖಿತವಾಗಿ […]

ಶ್ರೀಕೃಷ್ಣಮಠದಲ್ಲಿ ಕಲಾವಿದರ ಸಮಾವೇಶ

ಉಡುಪಿ: ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ವತಿಯಿಂದ ಯಕ್ಷಗಾನ ಕಲಾವಿದರ ಸಮಾವೇಶ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಸಂಪನ್ನಗೊಂಡಿತು. ಶ್ರೀಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮ ‘ಯಕ್ಷಗೋಪುರ’ವಾಗಿ ದಿನಪೂರ್ತಿ ನಡೆಯಿತು. ಬೆಳಗ್ಗೆ ಪೂಜ್ಯ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿದರು. […]

ಪ್ರತ್ಯೇಕ ಮೀನುಗಾರಿಕೆ ಖಾತೆ ಸೇರ್ಪಡೆ ಸ್ವಾಗತಾರ್ಹ: ನಯನ ಗಣೇಶ್

ಉಡುಪಿ: ಕೇಂದ್ರ ಸಚಿವ  ಸಂಪುಟದಲ್ಲಿ ಮೀನುಗಾರಿಕೆ ಖಾತೆ ಸೇರ್ಪಡೆ ಮಾಡಿ ಗಿರಿರಾಜ್ ಸಿಂಗ್ ಅವರನ್ನು ಮೊದಲ ಸಚಿವರನ್ನಾಗಿ ನೇಮಕ ಮಾಡಿದ ಪ್ರಧಾನಿ ನರೇಂದ್ರ ಮೋದಿ ಯವರ  ನಿರ್ಧಾರ ವನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ನಯನ ಗಣೇಶ್ ಸ್ವಾಗತಿಸಿದ್ದರೆ. ಚುನಾವಣಾ ಪೂರ್ವ ದಲ್ಲಿ ನೀಡಿದ ಅಶ್ವಾಸನೆಯಂತೆ ಪ್ರಧಾನಿ ಯವರು ಮೊದಲ ಕ್ಯಾಬಿನೆಟ್ ಲ್ಲಿ ಹೊಸ ಇಲಾಖೆಯನ್ನು ಸೇರ್ಪಡೆ ಮಾಡಿ ಕರಾವಳಿಯಾ ಮೀನುಗಾರ ಹಿತವನ್ನು ಕಾಪಾಡಿಕೊಳ್ಳುವ ಕಾರ್ಯ ಮಾಡಿದ್ದು ಮುಂದಿನ ದಿನಗಳಲ್ಲಿ ಈ ಇಲಾಖೆ ಮೀನುಗಾರ ಸಮಸ್ಯೆ ಗಳಿಗೆ ಪ್ರಾಮಾಣಿಕವಾಗಿ […]

ಶ್ರೀ ಕೃಷ್ಣ ಮಠದಲ್ಲಿ ಯಕ್ಷಾಗೋಪುರಮ್ ಕಾರ್ಯಕ್ರಮ

ಉಡುಪಿ :ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ,ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ ಯೋಜನೆಯಾದ   ಸುವರ್ಣಗೋಪುರ ಶಿಖರ ಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಯಕ್ಷಾಗೋಪುರಮ್ ಕಾರ್ಯಕ್ರಮ ಶನಿವಾರ ನಡೆಯಿತು.  

ಶ್ರೀ ಕೃಷ್ಣ ಮಠ:ಗರ್ಭಗುಡಿಯ ಶಿಖರಗಳ,ಕಲಶಾಭಿಷೇಕದ ರಜತಕಲಶಗಳ ಶೋಭಾಯಾತ್ರೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ ಯೋಜನೆಯಾದ ಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಗರ್ಭಗುಡಿಯ ಶಿಖರಗಳ,ಕಲಶಾಭಿಷೇಕದ ರಜತಕಲಶಗಳ ಶೋಭಾಯಾತ್ರೆಯು ಜೋಡುಕಟ್ಟೆಯಿಂದ ಕೃಷ್ಣಮಠದ ತನಕ ನಡೆಯಿತು. ಶೋಭಾಯಾತ್ರೆಯನ್ನು  ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಉದ್ಘಾಟಿಸಿದರು.