ಜೂನ್ 21-22: 11ನೇ ಆಳ್ವಾಸ್‌ ಪ್ರಗತಿ- ಬೃಹತ್‌ ಉದ್ಯೋಗ ಮೇಳ,  ದೇಶದ ವಿವಿಧ ಪ್ರತಿಷ್ಟಿತ ಕಂಪೆನಿಗಳು ಭಾಗಿ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ’11ನೇ ಆಳ್ವಾಸ್‌ ಪ್ರಗತಿ-ಬೃಹತ್‌ ಉದ್ಯೋಗ ಮೇಳ’ ಜೂನ್. 21 ಮತ್ತು 22ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಈ ಸಂಬಂಧ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿ ನಡೆಸಿ‌ ಮಾಹಿತಿ ನೀಡಿದರು. ಆಳ್ವಾಸ್‌ ಪ್ರಗತಿ-2019ರ ಆವೃತ್ತಿಯಲ್ಲಿ ಹಲವು‌ ರೀತಿಯಲ್ಲಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಪದವಿ ಮತ್ತು ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್‌, ಆರ್ಟ್ಸ್, ಕಾಮರ್ಸ್‌ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್‌ ಸೈನ್ಸ್‌, ನರ್ಸಿಂಗ್‌, […]

ಕುಂದಾಪುರದಲ್ಲಿ ಪ್ರಕಾಶ್ ಎಲೆಕ್ಟ್ರಿಕಲ್ಸ್ ಬೃಹತ್ ಶೋರೂಂ ಉದ್ಘಾಟನೆ

ಕುಂದಾಪುರ :ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್‌ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್‌ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ  ಶೋ ರೂಂ ಶುಕ್ರವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಕಾಂಚನ್‌ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಂಡಿದೆ. ಸಂಸ್ಥೆಯ ಪಾಲುದಾರ, ಸರ್‌.ಎಂ. ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಕಾಶ್‌ ಕೆ.ಆನಗಳ್ಳಿ ಅವರ ತಾಯಿ ಲಕ್ಷ್ಮೀ ಅವರು ರಿಬ್ಬನ್‌ ಕತ್ತರಿಸಿದರು. ಪ್ರಕಾಶ್‌ ಅವರ ಪುತ್ರಿ ಕಿರಣ್ಯ  ಕಾರ್ಯಕ್ರಮದ ಉದ್ಘಾಟಿಸಿದರು. ಮಣಿಪಾಲದ ಮಾತೃಶ್ರೀ ವುಡ್‌ವರ್ಕ್ಸ್ನ […]

ಕುಂದಾಪುರ :ಗಾಯಾಳು ಬಾಷಾಗೆ ಧನ ಸಹಾಯ

ಕುಂದಾಪುರ : ಇತ್ತೀಚೆಗೆ ಎಡಕಾಲಿನ ಪಾದದ ಮೇಲೆ ಬಸ್ಸಿನ ಚಕ್ರವೊಂದು ಚಲಿಸಿ ಜರ್ಜರಿತರಾಗಿದ್ದ ಗಾಯಾಳು ಅನ್ವರ್ ಬಾಷಾ ಅವರ ಚಿಕಿತ್ಸೆಗಾಗಿ ದಾನಿಗಳಿಂದ ಸಗ್ರಹಿಸಿದ ೫೦,೦೦೦ ರೂಪಾಯಿಗಳನ್ನು ಕುಂದಾಪುರ ಪುರಸಭಾ ಸದಸ್ಯ ಅಬ್ಬು ಮಹ್ಮದ್ ಹಾಗೂ ಹೊಸ ಬಸ್ಸು ನಿಲ್ದಾಣದ ಪ್ರಮುಖ ಪಾರ್ಸೆಲ್ ವಿತರಕ ಸಿರಾಜ್ ಅವರು ಗಾಯಾಳು ಬಾಷಾ ಅವರ ಹೆಮ್ಮಾಡಿ ಸಂತೋಷ ನಗರದಲ್ಲಿರುವ ಮನೆಗೆ ಭೇಟಿ ನೀಡಿ ವಿತರಿಸಿದರು. ಕಳೆದ ಸುಮಾರು ಹದಿನೈದು ವರುಷಗಳಿಂದ ಕುಂದಾಪುರ ಬಸ್ಸು ನಿಲ್ದಾಣದಲ್ಲಿ ಪಾರ್ಸೆಲ್ ವಿತರಣೆ ಮಾಡುವ ಉದ್ಯೋಗದಲ್ಲಿ ಗುರ್ತಿಸಿಕೊಂಡಿರುವ […]

ಕಲ್ಯಾಣಪುರ ವೀರಭದ್ರ ದೇವಸ್ಥಾನ: ಉಚಿತ ಪುಸ್ತಕ ವಿತರಣೆ

ಕಲ್ಯಾಣಪುರ: ಸಂತೆಕಟ್ಟೆಯ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಪದ್ಮಶಾಲಿ ಯುವ ವೇದಿಕೆಯ ವತಿಯಿಂದ ಒಂದನೇ ತರಗತಿಯಿಂದ  ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಬುಧವಾರ ವಿತರಿಸಲಾಯಿತು.ಮುಖ್ಯ ಅತಿಥಿಗಳಾಗಿ ಮಂಗಳೂರು ಬೋಂದೇಲ್‌ನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಉಪನ್ಯಾಸಕಿ ಜ್ಞಾನೇಶ್ವರಿ ವಿಜಯಕುಮಾರ್, ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಹಾಗೂ ಎಸ್. ಎನ್. ಎಸ್. ಟ್ರಸ್ಟ್, ಬಜ್ಪೆಇದರ ಆಡಳಿತಾಧಿಕಾರಿ ಬಿ. ವಿಜಯಕುಮಾರ್ ಮತ್ತು ಸಾಯಿರಾಮ್‌ ಟೆಕ್ಸ್‌ಟೋರಿಯಂನ ರಾಜ್‌ನಾರಾಯಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ದೇವಸ್ಥಾನದ ಪ್ರಧಾನ ಮೊಕ್ತೇಸರ ಕೆ.ಜ್ಯೋತಿಪ್ರಸಾದ್ […]

ಕಲ್ಯಾಣಪುರ ವೀರಭದ್ರ ದೇವಸ್ಥಾನ: ಸಾಮೂಹಿಕ ಸತ್ಯನಾರಾಯಣ ಪೂಜೆ

ಕಲ್ಯಾಣಪುರ: ಸಂತೆಕಟ್ಟೆಯ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಪದ್ಮಶಾಲಿ ಯುವ ವೇದಿಕೆಯ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಜರಗಿತು.  ಬ್ರಹ್ಮಶ್ರೀ ಪುತ್ತೂರು ಹಯವದನ ತಂತ್ರಿಗಳು ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ಪ್ರಧಾನ ಮೊಕ್ತೇಸರರಾದ ಜ್ಯೋತಿಪ್ರಸಾದ್ ವಿ.ಶೆಟ್ಟಿಗಾರ್, ಕಿನ್ನಿಮುಲ್ಕಿ, ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾಜೆ ಶೆಟ್ಟಿಗಾರ್, ಯುವವೇದಿಕೆಯ ಅಧ್ಯಕ್ಷ ಹರೀಶ್ ಶೆಟ್ಟಿಗಾರ್ ಮೂಡನಿಡಂಬೂರು, ಕಾರ್ಯದರ್ಶಿ ರಾಜೇಶ್ ಕೆ.ಮನ್ನೋಳಿಗುಜ್ಜಿ  ಉಪಸ್ಥಿತರಿದ್ದರು.