ಸಾರ್ವಜನಿಕ ಸಮೂಹ ಸಾರಿಗೆ ಬಳಕೆಗೆ ಮುನ್ನುಡಿ ಬರೆದ ಜಿಲ್ಲಾಧಿಕಾರಿ

ಉಡುಪಿ, ಮೇ 30: ಪ್ರತಿನಿತ್ಯ ಹವಾನಿಯಂತ್ರಿತ ವಾಹನದಲ್ಲಿ ಓಡಾಡುತ್ತಿದ್ದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಮ್ಮ ಕಾರು, ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಆಗಮಿಸುತ್ತಿದ್ದ ಇತರೆ ಸಿಬ್ಬಂದಿಗಳು, ಗುರುವಾರ ಸಾರ್ವಜನಿಕ ಸಾರಿಗೆ ಕಲ್ಪನೆಯಲ್ಲಿ, ಸಾರ್ವಜನಿಕ ಸಮೂಹ ಸಾರಿಗೆ ಬಳಕೆಗೆ ಮುನ್ನುಡಿ ಬರೆದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಲ್ಲಿ ಎಲ್ಲರೂ ಒಂದೇ ವಾಹನದಲ್ಲಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬರುವ ಮೂಲಕ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಬಳಕೆಗೆ ಎಲ್ಲರಿಗೂ ಮಾದರಿಯಾದರು. ಗುರುವಾರ […]

ಮೋದಿ ಸಂಪುಟದಲ್ಲಿ ಮೂವರಿಗೆ ಸ್ಥಾನ, ಸದಾನಂದ ಗೌಡ ,ಸುರೇಶ್‌ ಅಂಗಡಿ , ಪ್ರಹ್ಲಾದ್‌ ಜೋಷಿ ಸಂಪುಟಕ್ಕೆ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2 ಸರಕಾರ ಗುರುವಾರ ಮೇ.೩೦ರಂದು ರಚನೆಯಾಗಲಿದ್ದು, ರಾಜ್ಯದ ಮೂವರಿಗೆ ಸಚಿವ ಸ್ಥಾನ ದೊರೆಯಲಿದೆ. ರಾಷ್ಟ್ರಪತಿ ಭವನದಲ್ಲಿ ಸಂಜೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನರೇಂದ್ರ ಮೋದಿಯಾಗಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೆ ಸಚಿವ ಸ್ಥಾನ ದೊರೆಯಲಿದೆ. ಹಾಗೆಯೇ ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಹಾಗೂ‌ ಹುಬ್ಬಳ್ಳಿ -ಧಾರಾವಾಡ ಕ್ಷೇತ್ರದ ಸಂಸದ, […]

ನಿವೃತ್ತಿ ವೇತನ ಪಡೆಯಲು ಆನ್‌ಲೈನ್‌ ಅರ್ಜಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ

ಉಡುಪಿ: ಭವಿಷ್ಯ ನಿಧಿ (ಪಿ.ಎಫ್‌) ಹಣ ಮತ್ತು ನಿವೃತ್ತಿ ವೇತನ ಪಡೆಯಲು ಅರ್ಜಿಗಳನ್ನುಆನ್‌ಲೈನ್‌ ಮೂಲಕವೇ ಸಲ್ಲಿಸಲು ಕಡ್ಡಾಯಗೊಳಿಸಿರುವ ಕ್ರಮವನ್ನು ಖಂಡಿಸಿ ಹಾಗೂ 2015ರ ಮೊದಲಿನಂತೆ ಲಿಖಿತ ರೂಪದಲ್ಲಿ ಅರ್ಜಿ ಸ್ವೀಕರಿಸುವ ಕ್ರಮವನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಪಿಎಫ್‌ ಸಮಸ್ಯೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಗುರುವಾರ ಉಡುಪಿ ಪಿಎಫ್‌ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.ಪಿಎಫ್‌ ದಾಖಲೆ ಆಧಾರ ಕಾರ್ಡಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶ ನೀಡಬೇಕು.ಕಾರ್ಮಿಕರಲ್ಲಿಲ್ಲದ ದಾಖಲೆಗಳನ್ನು ಕೇಳಿ ಕಾರ್ಮಿಕರನ್ನು ಸತಾಯಿಸುವುದು, ಮಾನಸಿಕವಾಗಿಹಿಂಸಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. […]

ನರೇಂದ್ರ ಮೋದಿ‌ 2ನೇ ಬಾರಿಗೆ ಪ್ರಮಾಣ ವಚನ, ಕಡಿಯಾಳಿ ಶ್ರೀನಿವಾಸ ಹೋಟೆಲ್ ನಿಂದ ಸಾರ್ವಜನಿಕರಿಗೆ ಉಚಿತ ಹಾಲು‌ ಪಾಯಸ ಸೇವೆ

ಉಡುಪಿ: ಉಡುಪಿ ಕಡಿಯಾಳಿ ಶ್ರೀನಿವಾಸ ಹೋಟೆಲ್ ವತಿಯಿಂದ ಮೇ. 30ರಂದು ಶ್ರೀ  ನರೇಂದ್ರ ಮೋದಿ 2ನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಹಾಲು ಪಾಯಸ ಸೇವೆ ರೂಪವಾಗಿ ವಿತರಿಸಲಾಯಿತು. ಬಿಜೆಪಿ ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಸಭಾ ಸದಸ್ಯ ಗಿರೀಶ ಅಂಚನ್, ಗೀತಾ ಶೇಠ್ ಅವರು ಉಚಿತ ಹಾಲು ಪಾಯಸ ವಿತರಣೆಗೆ ಚಾಲನೆ ನೀಡಿದರು. ಶ್ರೀನಿವಾಸ ಹೋಟೆಲ್ ಮಾಲೀಕರಾದ ನರಸಿಂಹ ಕಿಣಿ, ರಾಘವೇಂದ್ರ ಕಿಣಿ, ದಾವೂದ್ […]

ವಿಶ್ವಕಪ್-2019: 500 ರನ್ ದಾಟುವ ನಿರೀಕ್ಷೆ..!

ಲಂಡನ್ : ಈ ಬಾರಿ‌ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್’ನಲ್ಲಿ ಬ್ಯಾಟ್ಸ್’ಮನ್’ಗಳು ಅಬ್ಬರಿಸುವ ಸುಳಿವಿದ್ದು, ಅಭ್ಯಾಸ ಪಂದ್ಯದದಲ್ಲೇ ಹೆಚ್ಚಿನ‌ ತಂಡಗಳು 350, 400 ರನ್ ಗಳಿಸಿವೆ. ಇಂಗ್ಲೆಂಡ್’ನ ಬ್ಯಾಟಿಂಗ್ ಸ್ನೇಹಿ ಪಿಚ್’ಗಳಲ್ಲಿ ಏಕದಿನ ಕ್ರಿಕೆಟ್ ಮೊದಲ ಬಾರಿಗೆ 500 ರನ್’ಗೆ ಸಾಕ್ಷಿಯಾಗುವ ನಿರೀಕ್ಷೆ ಇದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅಭಿಮಾನಿಗಳ ಸ್ಕೋರ್’ಕಾರ್ಡ್’ಗಳನ್ನು ಪರಿಷ್ಕರಿಸಿ, 500 ರನ್ ಪಟ್ಟಿಯನ್ನು ಅಳವಡಿಸಿದೆ. ಇಂಗ್ಲೆಂಡ್’ನಲ್ಲಿ ಪಂದ್ಯಗಳ ಸ್ಕೋರ್ ಪಟ್ಟಿಯನ್ನು ಅಭಿಮಾನಿಗಳು ಖರೀದಿಸಿ, ಸ್ಮರಣಿಕೆಯಾಗಿ ಸಂಗ್ರಹಿಸುವ ಪದ್ಧತಿ ಇದೆ. ಸ್ಕೋರ್ ಪಟ್ಟಿಯಲ್ಲಿ […]