ಕುಂದಾಪುರದಲ್ಲಿ ಪ್ರಕಾಶ್ ಎಲೆಕ್ಟ್ರಿಕಲ್ಸ್ ಬೃಹತ್ ಶೋರೂಂ ಉದ್ಘಾಟನೆ

ಕುಂದಾಪುರ :ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್‌ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್‌ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ  ಶೋ ರೂಂ ಶುಕ್ರವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಕಾಂಚನ್‌ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಂಡಿದೆ.

ಸಂಸ್ಥೆಯ ಪಾಲುದಾರ, ಸರ್‌.ಎಂ. ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಕಾಶ್‌ ಕೆ.ಆನಗಳ್ಳಿ ಅವರ ತಾಯಿ ಲಕ್ಷ್ಮೀ ಅವರು ರಿಬ್ಬನ್‌ ಕತ್ತರಿಸಿದರು. ಪ್ರಕಾಶ್‌ ಅವರ ಪುತ್ರಿ ಕಿರಣ್ಯ  ಕಾರ್ಯಕ್ರಮದ ಉದ್ಘಾಟಿಸಿದರು.

ಮಣಿಪಾಲದ ಮಾತೃಶ್ರೀ ವುಡ್‌ವರ್ಕ್ಸ್ನ ಡಾ| ಗೋಪಾಲ ಆಚಾರ್ಯ, ಸಿಂಡಿಕೇಟ್ ಬ್ಯಾಂಕ್‌ನ ಮೆನೇಜರ್‌ ಜಗದೀಶ್‌ ಪೂಜಾರಿ, ಕಟ್ಟಡದ ಮಾಲಕ ಜನಾರ್ದನ ರಾವ್‌, ಪ್ರಕಾಶ್‌ ಅವರ ಪತ್ನಿ ಹಿತಾಕ್ಷಿ, ಪುತ್ರ ಸನಿØತ್‌ ಉಪಸ್ಥಿತರಿದ್ದರು.

ವೆರೈಟಿ ವಸ್ತುಗಳುಅಚ್ಚುಕಟ್ಟು ಸೇವೆ:
ಪ್ರಕಾಶ್ ಎಲೆಕ್ಟ್ರಿಕಲ್ಸ್ ನಲ್ಲಿ ವೆರೈಟ್ ವಸ್ತುಗಳು ಹಾಗೂ ಅಚ್ಚುಕಟ್ಟು ಸೇವೆಯೇ ಗಮನಸೆಳೆಯುವಂತಿದೆ. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಹೋಲ್ ಸೇಲ್ ಮಳಿಗೆ ಎಂಬ ಹೆಗ್ಗಳಿಕೆ ಸಂಸ್ಥೆಗಿದೆ. ಗುಣಮಟ್ಟದ ಎಲೆಕ್ಟ್ರಿಕಲ್ಸ್ ಸರ್ವೀಸ್ಗೆ ಸಂಸ್ಥೆ ಮೊದಲ ಆದ್ಯತೆ ನೀಡುತ್ತಿದೆ.

ಏನೇನೆಲ್ಲಾ ಲಭ್ಯ?
ಎಲೆಕ್ಟ್ರಿಕಲ್ ಗೂಡ್ಸ್ವಯರ್‌, ಎಚ್ಟಿ ಆ್ಯಂಡ್ಎಲ್ಟಿ ಕೇಬಲ್ಸ್, ಜನರೇಟರ್, ಟ್ರಾನ್ಸ್ಫಾರ್ಮರ್, ಲಿಫ್ಟ್ಆ್ಯಂಡ್ಎಲಿವೇಶನ್‌, ಯುಪಿಎಸ್‌, ಇನ್ವರ್ಟರ್ಆ್ಯಂಡ್ಬ್ಯಾಟರೀಸ್‌, ಮೋಟಾರ್ಪಂಪ್‌, ಏರ್ಕಂಡೀಶನ್‌, ಎಲ್ಇಡಿ ಲೈಟ್ಸ್ಆ್ಯಂಡ್ಟ್ಯೂಬ್ಸ್, ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್ಸ್, ವಿಡಿಯೋ ಡೋರ್ಪೋನ್ಎಂಡ್ಫಯರ್ಅಲ್ರಾಂ, ಸೆಕ್ಯುರಿಟಿ ಸಿಸ್ಟಂ ಆ್ಯಂಡ್ಸಿಸಿ ಟಿವಿ, ಸೋಲಾರ್ವಾಟರ್ಹೀಟರ್ಆ್ಯಂಡ್ಲೈಟಿಂಗ್‌, ಕೆಮಿಕಲ್ ಆ್ಯಂಡ್ಕಾಪರ್ಅರ್ಥಿಂಗ್‌, ಲೈಟ್ನಿಂಗ್ಎರೆಸ್ಟರ್‌, ಆಟೊಗೇಟ್ ಕೋಸರ್ಸಿಸ್ಟಂ, ಎಲೆಕ್ಟ್ರಿಕಲ್ ಕನ್ಸಲ್ಟಿಂಗ್ಎಂಜಿನಿಯರ್‌, ಎಚ್ಟಿ ಇಂಡಸ್ಟ್ರಿಯಲ್ ಆ್ಯಂಡ್ಎಂಎಸ್ಬಿ ವರ್ಕ್‌, ಪ್ಲಬಿಂಗ್ವರ್ಕ್‌, ಆಟೋ ವಾಟರ್ಟ್ಯಾಂಕ್ಕಂಟ್ರೋಲ್, ಮೊಬೈಲ್ ಆಟೋಮೇಶನ್ಸಿಸ್ಟಂ ಮೊದಲಾದ ವಸ್ತುಗಳು ಮತ್ತು ಸೇವೆ ಲಭ್ಯವಿದೆ.

ಆಕರ್ಷಕ ರಿಯಾಯಿತಿ:
ಗ್ರಾಹಕರಿಗೆ ಅತ್ಯುತ್ತಮ ಸೇವೆ ಕೊಡುವ ಮೂಲಕವೇ ಸಂಸ್ಥೆಯು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆಆಕರ್ಷಕ ರಿಯಾಯಿತಿ ದರದಲ್ಲಿಯೂ ಕೂಡ ಗ್ರಾಹಕರಿಗೆ ಸೌಲಭ್ಯ ಒದಗಿಸುವುದೇ ನಮ್ಮ ಮೊದಲ ಆದ್ಯತೆ ಎನ್ನುತ್ತಾರೆ ಸಂಸ್ಥೆಯ ಪಾಲುದಾರ, ಸರ್‌.ಎಂ. ವಿಶ್ವೇಶ್ವರಯ್ಯ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಕಾಶ್ಕೆ. ಆನಗಳ್ಳಿ ತಿಳಿಸಿದರು.