ಯಕ್ಷ ಲೋಕದ ಮಯೂರಿ, ಈ ಉಜಿರೆಯ ಕುವರಿ: ಯಕ್ಷಗಾನದ “ನವ್ಯ”ಕಾವ್ಯ

ಈಗೀಗ ಯುವತಿಯರು ಯಕ್ಷಗಾನ ಕ್ಷೇತ್ರದಲ್ಲಿ ಗಮನಸೆಳೆಯುವಂತಹ ಸಾಧನೆ ಮಾಡುತ್ತಿದ್ದಾರೆ. ಅದರಲ್ಲೂ ಕರಾವಳಿಯ ಹುಡುಗಿಯರು ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅಂತಹ ಕರಾವಳಿಯ ಸಾಧಕಿಯ ಪೈಕಿ ಉಜಿರೆ ನವ್ಯ ಕೂಡ ಯಕ್ಷಗಾನ ಕ್ಷೇತ್ರದಲ್ಲಿ ನವ್ಯ ಕಾವ್ಯ ಬರೆಯುತ್ತಿದ್ದಾರೆ. ಯಕ್ಷಗಾನ ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಕುಣಿದು ಎಲ್ಲರ ಹುಬ್ಬೇರಿಸುತ್ತಿದ್ದಾರೆ.   ಯಕ್ಷಗಾನ ಕ್ಷೇತ್ರದಲ್ಲಿ ನವ್ಯ ಮಾರ್ಗ:  ಬಹುಮುಖ ಪ್ರತಿಭೆ ನವ್ಯಹೊಳ್ಳ. ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುತ್ತಿರುವ ಯುವ ಕಲಾವಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ […]

ಕುಂದಾಪುರ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗ್ತಿದೆ”ಮಲ್ಲದಾನ” ಸಿನಿಮಾ ಚಿತ್ರೀಕರಣ:

ಕುಂದಾಪುರ: ಅಂಗಾಂಗದಾನದ ಮಹತ್ವ ಸಾರುವ, ಕಣ್ಣೀರಗಡಲಲ್ಲಿ ಸಾಗಿ ಬರುವ, ಭಾವನಾತ್ಮಕ ಹಾಗೂ ಸೂಕ್ಷ್ಮ ಸಂವೇದನೆಯುಳ್ಳು ಎರಡು ಗಂಟೆ ಸಮಯದ “ಮಲ್ಲದಾನ” ತುಳು ಸಿನೆಮಾದ ಚಿತ್ರೀಕರಣ ಕೋಡಿ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗುತ್ತಿದೆ. ಕರಾವಳಿಯ ಉಡುಪಿ, ಮಲ್ಪೆ, ಮರವಂತೆ, ಕೋಡಿ, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಹಾಗೂ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಕೋಡಿ ಬ್ಯಾರೀಸ್ ಕಾಲೇಜಿನ ಆಸುಪಾಸಿನಲ್ಲಿ ನಡೆಯುತ್ತಿದೆ. ಸುಮಾರು ೨೦ಲಕ್ಷ ಬಜೆಟ್‌ನ […]