ಧರ್ಮಸ್ಥಳದಲ್ಲೂ ನೀರಿನ‌ ಸಮಸ್ಯೆ, ಪ್ರವಾಸ ಮುಂದೂಡುವಂತೆ ಡಾ. ಹೆಗ್ಗಡೆ ಮನವಿ

ಮಂಗಳೂರು: ರಾಜ್ಯದ ಪ್ರಮುಖ ಯಾತ್ರಾಸ್ಥಳ ದ.ಕ. ಜಿಲ್ಲೆಯ ಧರ್ಮಸ್ಥಳದಲ್ಲಿ ನೀರಿನ‌ ಸಮಸ್ಯೆ ಎದುರಾಗಿದ್ದು, ಹೀಗಾಗಿ‌ ಭಕ್ತಾದಿಗಳು ಕೆಲವು ದಿನಗಳ ಮಟ್ಟಿಗೆ ಪ್ರವಾಸ ಮುಂದೂಡುವಂತೆ ಧರ್ಮಾಧಿಕಾರಿ ಡಾ. ಡಿ‌. ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ. ದೇಶದಾದ್ಯಂತ ಬಿಸಿಲಿನ ಝಳ ತೀವ್ರವಾಗಿದ್ದು ನೀರಿನ‌ ಸಮಸ್ಯೆ ತಲೆದೋರಿದೆ. ದ.ಕ. ಜಿಲ್ಲಾಡಳಿತವೂ ರೇಶನಿಂಗ್ ಮೂಲಕ‌ ನೀರು ನೀಡುತ್ತಿದೆ. ಧರ್ಮಸ್ಥಳದಲ್ಲಿ ನೀರಿನ‌ ಸಮಸ್ಯೆ ಎದುರಾಗಿದ್ದು, ನೇತ್ರಾವತಿ ನದಿಯಲ್ಲಿಯೂ ನೀರಿನ‌ ಹರಿವು‌ ಕಡಿಮೆಯಾಗಿದೆ. ಯಾತ್ರಾರ್ಥಿಗಳಿಗೆ ಅಧಿಕ ಪ್ರಮಾಣ ನೀರು ಬೇಕಾಗುತ್ತದೆ. ನೀರಿನ‌ ಸಮಸ್ಯೆಯಿಂದಾಗಿ ಭಕ್ತಾದಿಗಳು ತಮ್ಮ […]

ಕುಸಿದು ಬಿದ್ದು ಕೆ.ಎಸ್. ಭಗವಾನ್ ಆಸ್ಪತ್ರೆಗೆ ದಾಖಲು

ಮೈಸೂರು: ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಅವರು ಕುಸಿದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಸಂಜೆ ವಾಕಿಂಗ್ ಮಾಡುತ್ತಿದ್ದ ಅವರು ಏಕಾಏಕಿ‌ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕಂಡ್ಲೂರು ಮರಳುಗಾರಿಕೆ ಪ್ರಕರಣ:ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಠಾಣೆಗೆ ಕಲ್ಲೆಸೆದ ಕಿಡಿಗೇಡಿಗಳು

ಕುಂದಾಪುರ : ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರನ್ನು ಬಂಧಿಸಿದ ಹಿನ್ನಲೆಯಲ್ಲಿ ಠಾಣೆಗೆ ಕಲ್ಲೆಸೆದು ಧಾಂಧಲೆ ನಡೆಸಿದ ಘಟನೆ ಕುಂದಾಪುರದ ಕಂಡ್ಲೂರಿನಲ್ಲಿ ನಡೆದಿದೆ. ಕುಂದಾಪುರ ಕಂಡ್ಲೂರು ವ್ಯಾಪ್ತಿಯಲ್ಲಿ ಅಕ್ರಮ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಧರ ನಾಯ್ಕ್ ನೇತೃತ್ವದಲ್ಲಿ ಓಮ್ನಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದು ದಂಧೆಕೋರರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿ ಹಾಗೂ […]

ಪ.ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನ-ಅರ್ಜಿ ಆಹ್ವಾನ

ಉಡುಪಿ : ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡುವ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆವತಿಯಿಂದ ಅನುಷ್ಟಾನ ಮಾಡಿದ್ದು, ಈ ಯೋಜನೆಯ ಸರಳೀಕರಣ ಹಾಗೂ ಶಿಷ್ಯವೇತನ ಮಂಜೂರಾತಿಗಾಗಿ 2019-20 ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.  ಅಭ್ಯರ್ಥಿಯು ಪರಿಶಿಷ್ಟ ಜಾತಿಯ ಕಾನೂನು ಪದವೀಧರರಾಗಿರಬೇಕು. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕಾನೂನು ಪದವಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆ/ ಯೂನಿವರ್ಸಿಟಿ ಮೂಲಕ 3 ಅಥವಾ 5 […]

ಉಡುಪಿ:ಅಪ್ರೆಂಟಿಸ್ ತರಬೇತಿ- ಅರ್ಜಿ ಆಹ್ವಾನ

ಉಡುಪಿ : ತಾಂತ್ರಿಕ ತರಬೇತಿ ಸಂಸ್ಥೆ (ಟಿ.ಟಿ.ಐ), ಎಚ್.ಎ.ಎಲ್, ಬೆಂಗಳೂರು ಸಂಕೀರ್ಣ ಇವರು ಎಚ್.ಎ.ಎಲ್ ನ ಸಾಮಾಜಿಕ ಹೊಣೆಗಾರಿಕೆ ವ್ಯವಹಾರಗಳ (ಸಿ.ಎಸ್.ಆರ್) ಚಾಲನೆ ಅನ್ವಯ ಅಪ್ರೆಂಟೈಸ್‍ಶಿಪ್ ಕಾಯ್ದೆ ಅಡಿಯಲ್ಲಿ ಸಿಎನ್‍ಸಿ ಪ್ರೋಗಾಮರ್ ಮತ್ತು ಆಪರೇಟರ್ ಟ್ರೇಡ್‍ಗಾಗಿ ಪೂರ್ಣಾವಧಿ ಅಪ್ರೆಂಟೈಸ್‍ಶಿಪ್ ತರಬೇತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿಯು 15 ತಿಂಗಳಾಗಿರುತ್ತದೆ. ಎಸ್‍ಎಸ್‍ಎಲ್‍ಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು ಸರಾಸರಿ ಕನಿಷ್ಠ 60% ಮತ್ತು ಪ.ಜಾ/ಪ.ಪಂ/ಪಿಡಬ್ಲ್ಯೂಡಿ ಅಭ್ಯರ್ಥಿಗಳು ಸರಾಸರಿ ಕನಿಷ್ಠ 50% ಅಂಕ […]