ಉಡುಪಿ:ಅಪ್ರೆಂಟಿಸ್ ತರಬೇತಿ- ಅರ್ಜಿ ಆಹ್ವಾನ

ಉಡುಪಿ : ತಾಂತ್ರಿಕ ತರಬೇತಿ ಸಂಸ್ಥೆ (ಟಿ.ಟಿ.ಐ), ಎಚ್.ಎ.ಎಲ್, ಬೆಂಗಳೂರು ಸಂಕೀರ್ಣ ಇವರು ಎಚ್.ಎ.ಎಲ್ ನ ಸಾಮಾಜಿಕ ಹೊಣೆಗಾರಿಕೆ ವ್ಯವಹಾರಗಳ (ಸಿ.ಎಸ್.ಆರ್) ಚಾಲನೆ ಅನ್ವಯ ಅಪ್ರೆಂಟೈಸ್‍ಶಿಪ್ ಕಾಯ್ದೆ ಅಡಿಯಲ್ಲಿ ಸಿಎನ್‍ಸಿ ಪ್ರೋಗಾಮರ್ ಮತ್ತು ಆಪರೇಟರ್ ಟ್ರೇಡ್‍ಗಾಗಿ ಪೂರ್ಣಾವಧಿ ಅಪ್ರೆಂಟೈಸ್‍ಶಿಪ್ ತರಬೇತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿಯು 15 ತಿಂಗಳಾಗಿರುತ್ತದೆ.

ಎಸ್‍ಎಸ್‍ಎಲ್‍ಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು ಸರಾಸರಿ ಕನಿಷ್ಠ 60% ಮತ್ತು ಪ.ಜಾ/ಪ.ಪಂ/ಪಿಡಬ್ಲ್ಯೂಡಿ ಅಭ್ಯರ್ಥಿಗಳು ಸರಾಸರಿ ಕನಿಷ್ಠ 50% ಅಂಕ ಪಡೆದಿರಬೇಕು. ಅಭ್ಯರ್ಥಿಯು 15 ರಿಂದ 18 ವರ್ಷಗಳ ವಯೋಮಿತಿಯಲ್ಲಿಬೇಕು. ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿರಬೇಕು(ಅಭ್ಯರ್ಥಿಗಳ ಹೆಸರು ಬಿಪಿಎಲ್/ ಅಂತ್ಯೋದಯ ಪಡಿತರ ಚೀಟಿಯಲ್ಲಿ ನಮೂದಾಗಿರುವುದು ಕಡ್ಡಾಯ). ಇಂತಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಬಿಪಿಎಲ್/ ಅಂತ್ಯೋದಯ ಪಡಿತರ ಚೀಟಿ, ಪ.ಜಾತಿ/ ಪ.ಪಂಗಡ/ ಓಬಿಸಿ/ ಪಿಡಬ್ಲ್ಯೂಡಿಯ ಪ್ರಮಾಣಪತ್ರಗಳ ನಕಲು ಪ್ರತಿ ಮತ್ತು ಇತ್ತೀಚಿನ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಬೇಕು.

 ಟಿಟಿಐನಲ್ಲಿ ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನ ಜೂನ್ 10.  ಅರ್ಜಿ ನಮೂನೆಯು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ರಜತಾದ್ರಿ, ಮಣಿಪಾಲ ಇಲ್ಲಿ ಲಭ್ಯವಿದೆ. ಅಭ್ಯರ್ಥಿಗಳ ಆಯ್ಕೆಯು ಎಸ್‍ಎಸ್‍ಎಲ್‍ಸಿ/ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿದೆ ಮತ್ತು ಮೀಸಲಾತಿಯು ಅಪ್ರೆಂಟೈssಸ್‍ಶಿಪ್ ಕಾಯ್ದೆಯನ್ವಯ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ವಿವರವನ್ನು ಎಚ್‍ಎಎಲ್ ವೆಬ್‍ಸೈಟ್ ಮತ್ತು ಅಂಚೆ ಮೂಲಕ ತಿಳಿಸಲಾಗುವುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.