ಮೇ 16 ರಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರ
ಉಡುಪಿ, ಮೇ 15: ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಮೇ 16 ರಿಂದ ಲಘು ವಾಹನಗಳಾದ ಮಿನಿ ಬಸ್ಗಳು, ಜೀಪು, ವ್ಯಾನ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಹಾಗೂ ಕ್ಯೂರಿಂಗ್ ಸಂಪೂರ್ಣವಾಗಿ ಮುಗಿದ ನಂತದ ಜೂನ್ 1 ರಿಂದ ಮಿನಿ ಬಸ್ಗಳು, ಜೀಪು, ವ್ಯಾನ್, ಕಾರುಗಳು ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಎಲ್ಸಿವಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಅಲ್ಲಿಯವರೆಗೆ ಉಡುಪಿ-ಸಿದ್ದಾಪುರ-ಹೊಸಂಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) […]
‘ಇಫ್ಕೊ’ ನಿರ್ದೇಶಕರಾಗಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಆಯ್ಕೆ
ಮಂಗಳೂರು: ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೊಸದಿಲ್ಲಿಯ ಇಂಡಿಯನ್ ಫಾರ್ಮರ್ಸ್ ಫರ್ಟಿ ಲೈಸರ್ ಕೋ-ಆಪರೇಟಿವ್ (ಇಫ್ಕೊ) ಸಂಸ್ಥೆಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೊಸದಿಲ್ಲಿಯಲ್ಲಿ ಮೇ. 10ರಂದು ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆದಿತ್ತು. ಪ್ರಸ್ತುತ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿ.ಯ ಅಧ್ಯಕ್ಷರಾಗಿದ್ದಾರೆ. ಅವರು ದೇಶದ ಅತೀ ದೊಡ್ಡ ಸಹಕಾರಿ ಸಂಸ್ಥೆ ಇಫ್ಕೊದಲ್ಲಿ ರಾಜ್ಯದ ಪ್ರತಿನಿಧಿಯಾಗಿದ್ದಾರೆ ಎಂದು ಎಸ್ಸಿಡಿಸಿಸಿ ಬ್ಯಾಂಕ್ನ ಪ್ರಕಟನೆ […]
ಪಪುವಾ ನ್ಯೂ ಗಿನಿಯಾದಲ್ಲಿ ಭಾರೀ ಭೂಕಂಪ
ಪಪುವಾ: ಆಸ್ಟ್ರೇಲಿಯಾ ದೇಶದ ಸಮೀಪದ ಪಪುವಾ ನ್ಯೂ ಗಿನಿಯಾ ದ್ವೀಪದ ಬಳಿ ಮಂಗಳವಾರ 7.7 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದೆ. ಅಲ್ಲದೇ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಕಾಲಮಾನ 5.58 ನಿಮಿಷಕ್ಕೆ, ಪಪುವಾ ನ್ಯೂ ಗಿನಿಯಾ ರಾಷ್ಟ್ರದ ಕೊಕೊಪೊ ಎಂಬಲ್ಲಿಂದ 28 ಕಿ.ಮೀ. ದೂರದಲ್ಲಿ, 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿದುಬಂದಿದೆ. ಜಪಾನ್ ನಲ್ಲಿ ಅವಳಿ ಪ್ರಬಲ ಭೂಕಂಪ: 6.3 ತೀವ್ರತೆ ದಾಖಲಾಗಿದ್ದು, ಪೆಸಿಫಿಕ್ ಸಾಗರದಲ್ಲಿ ಸುನಾಮಿ ಅಲೆಗಳು ಏಳುವ ಸಂಭವನೀಯತೆ ಇದೆ ಎಂದು […]
ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾದ ರಮೇಶ್ ಸಹೋದರ ಆತ್ಮಹತ್ಯೆ ಗೆ ಯತ್ನ
ಉಡುಪಿ: ಉಡುಪಿಯ ಸುವರ್ಣ ತ್ರಿಭುಜ ಬೋಟು ಅವಘಡದಲ್ಲಿ ನಾಪತ್ತೆಯಾಗಿದ್ದ ಭಟ್ಕಳದ ರಮೇಶ್ ಅವರ ಸಹೋದರ ಚಂದ್ರಶೇಖರ್ (30) ಅವರು ಅಣ್ಣನ ಚಿಂತೆಯಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಂದ್ರಶೇಖರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಈ ಘಟನೆ ಆಘಾತ ಉಂಟು ಮಾಡಿದೆ. ಡಿ.13ರಂದು ಸುವರ್ಣ ತ್ರಿಭುಜ ಬೋಟಿನಲ್ಲಿ ಇತರರೊಂದಿಗೆ ಮೀನು ಗಾರಿಕೆಗೆ ತೆರಳಿದ್ದ ರಮೇಶ್ ನಾಪತ್ತೆಯಾಗಿದ್ದರು. ಈ […]