ಪಪುವಾ ನ್ಯೂ ಗಿನಿಯಾದಲ್ಲಿ ಭಾರೀ ಭೂಕಂಪ

ಪಪುವಾ: ಆಸ್ಟ್ರೇಲಿಯಾ ದೇಶದ ಸಮೀಪದ ಪಪುವಾ ನ್ಯೂ ಗಿನಿಯಾ ದ್ವೀಪದ ಬಳಿ ಮಂಗಳವಾರ 7.7 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದೆ.
ಅಲ್ಲದೇ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಕಾಲಮಾನ 5.58 ನಿಮಿಷಕ್ಕೆ, ಪಪುವಾ ನ್ಯೂ ಗಿನಿಯಾ ರಾಷ್ಟ್ರದ ಕೊಕೊಪೊ ಎಂಬಲ್ಲಿಂದ 28 ಕಿ.ಮೀ. ದೂರದಲ್ಲಿ, 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎಂದು ತಿಳಿದುಬಂದಿದೆ.
ಜಪಾನ್ ನಲ್ಲಿ ಅವಳಿ ಪ್ರಬಲ ಭೂಕಂಪ: 6.3 ತೀವ್ರತೆ ದಾಖಲಾಗಿದ್ದು, ಪೆಸಿಫಿಕ್ ಸಾಗರದಲ್ಲಿ ಸುನಾಮಿ ಅಲೆಗಳು ಏಳುವ ಸಂಭವನೀಯತೆ ಇದೆ ಎಂದು ಹೇಳಲಾಗಿದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಆದೇಶಿಸಲಾಗಿದೆ. ಸುನಾಮಿ ಅಲೆಗಳು ಸೋಲೋಮನ್ ಮತ್ತು ಹವಾಯಿ ದ್ವೀಪಕ್ಕೆ ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಕೇಂದ್ರ ಬಿಂದುವಿನಿಂದ ಹತ್ತಿರದಲ್ಲಿರುವ ಎರಡು ನಗರಗಳು ಸುರೌಲ್ ಮತ್ತು ಹಿಟಂಗ್.ಅರುಣಾಚಲ ಪ್ರದೇಶದಲ್ಲಿ 6.1ರಷ್ಟು ತೀವ್ರತೆಯ ಭೂಕಂಪ ಆಸ್ಟ್ರೇಲಿಯಾಕ್ಕಾಗಲಿ ಮತ್ತು ಅಮೆರಿಕ್ಕಾಗಲಿ ಯಾವುದೇ ತೊಂದರೆ ಇಲ್ಲ ಎಂದು‌ ತಿಳಿದು ಬಂದಿದೆ.