ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ದೇವೇಗೌಡ ದಂಪತಿ 

ಉಡುಪಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಂಗಳವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಪತ್ನಿ ಚೆನ್ನಮ್ಮ ಅವರೊಂದಿಗೆ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದ ದೇವೇಗೌಡರು, ಮಠದ ಸುವರ್ಣ ಗೋಪುರ ಯೋಜನೆ ಬಗ್ಗೆ ತಿಳಿದುಕೊಂಡರು. ಬಳಿಕ ಪರ್ಯಾಯ ಪಲಿಮಾರು ಶ್ರೀವಿದ್ಯಾ ಧೀಶ ತೀರ್ಥ ಸ್ವಾಮೀಜಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಶ್ರೀಕೃಷ್ಣ ಪ್ರಸಾದ ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಶಾಲಿನಿ […]

ದೇವೇಗೌಡರಿಂದ ಪೇಜಾವರ ಶ್ರೀ ಗಳ ಭೇಟಿ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಜನ್ಮನಕ್ಷತ್ರ ಅಂಗವಾಗಿ ಮಾಜಿ‌ ಪ್ರಧಾನಿ ಎಚ್.ಡಿ. ದೇವೆಗೌಡ ದಂಪತಿಗಳು ಮಂಗಳವಾರ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಶ್ರೀ ಗಳನ್ನು ಭೇಟಿಯಾಗಿ ಶುಭಹಾರೈಸಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಉಡುಪಿ ಸಹಾಯಕ ಕೃಷಿ ನಿರ್ದೇಶಕರಿಂದ ರೈತರಿಗೆ ಸಲಹೆ

ಉಡುಪಿ, ಮೇ 14: ಉಡುಪಿ ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿಗೆ ಬೇಕಾಗುವ ಭತ್ತದ ಬೀಜ ಎಂ.ಓ-4 ತಳಿಯನ್ನು ಉಡುಪಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕೋಟಾ, ಬ್ರಹ್ಮಾವರ, ಉಡುಪಿ ಮತ್ತು ಕಾಪುಗಳಲ್ಲಿ ದಾಸ್ತಾನು ಇರಿಸಲಾಗಿದ್ದು, ಭತ್ತದ ಬೀಜ ಕೆ.ಜಿ. ಒಂದಕ್ಕೆ 30.50 ರೂ. ಆಗಿದ್ದು, ಸಹಾಯಧನ ಕೆ.ಜಿ. ಒಂದಕ್ಕೆ 8.00 ರೂ. ಆಗಿರುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ

ಉಡುಪಿ, ಮೇ 14: ಮಲ್ಪೆ ಬೀಚ್‍ನಿಂದ ಹಾಗೂ ಮಲ್ಪೆ ಬಂದರಿನಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್‍ಗಳಿಗೆ ಮತ್ತು ಮಲ್ಪೆ ಬೀಚ್‍ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲಾ ಪ್ರವಾಸಿ ಬೋಟ್‍ಗಳಿಗೆ ಪ್ರತಿ ವರ್ಷದಂತೆ ಮೇ 16 ರಿಂದ ಸೆಪ್ಟೆಂಬರ್ 15 ರ ವರೆಗೆ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ ಎಂದು ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆ ಪೌರಾಯುಕ್ತ ಆನಂದ ಚಿ. ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ: ಮೇ.16 ಜಿಲ್ಲಾ ಕ್ರೀಡಾಂಗಣದಲ್ಲಿ ಸಹಿಷ್ಣುತೆ, ದೇಹದಾಢ್ಯತೆ ಪರೀಕ್ಷೆ

ಉಡುಪಿ, ಮೇ 14: ಉಡುಪಿ ಜಿಲ್ಲೆಯ ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಮೇ 16 ರಂದು ಬೆಳಗ್ಗೆ 6.30 ಕ್ಕೆ ಉಡುಪಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆಯನ್ನು ನಡೆಸಲಾಗುವುದು. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ನಿಗದಿತ ಗುರುತಿನ ಚೀಟಿಯೊಂದಿಗೆ ಹಾಜರಾಗುವುದು. ಲಿಖಿತ ಪರೀಕ್ಷೆಯ ಪ್ರವೇಶ ಪತ್ರಕ್ಕಾಗಿ ಇಲಾಖೆಯ ಅಧಿಕೃತ ವೆಬ್‍ಸೈಟ್ www.ksp.gov.in ನ್ನು ಪರಿಶೀಲಿಸಬಹುದಾಗಿದೆ. ಮೇ 16 […]