ಉಡುಪಿ ಸಹಾಯಕ ಕೃಷಿ ನಿರ್ದೇಶಕರಿಂದ ರೈತರಿಗೆ ಸಲಹೆ

ಉಡುಪಿ, ಮೇ 14: ಉಡುಪಿ ತಾಲೂಕಿನ ರೈತರಿಗೆ ಮುಂಗಾರು ಹಂಗಾಮಿಗೆ ಬೇಕಾಗುವ ಭತ್ತದ ಬೀಜ ಎಂ.ಓ-4 ತಳಿಯನ್ನು ಉಡುಪಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕೋಟಾ, ಬ್ರಹ್ಮಾವರ, ಉಡುಪಿ ಮತ್ತು ಕಾಪುಗಳಲ್ಲಿ ದಾಸ್ತಾನು ಇರಿಸಲಾಗಿದ್ದು, ಭತ್ತದ ಬೀಜ ಕೆ.ಜಿ. ಒಂದಕ್ಕೆ 30.50 ರೂ. ಆಗಿದ್ದು, ಸಹಾಯಧನ ಕೆ.ಜಿ. ಒಂದಕ್ಕೆ 8.00 ರೂ. ಆಗಿರುತ್ತದೆ.

ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಉಡುಪಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.