ರವಿ ಬಸ್ರೂರ್ ನಿರ್ದೇಶನದ “ಗಿರ್ಮಿಟ್” ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್
ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಹೆಚ್ಚು ಸದ್ದು ಮಾಡಿದ್ದು. ಆ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಆದರೆ, ಈಗ ರವಿ ಬಸ್ರೂರ್ ಅವರ ನಿರ್ದೇಶನದ ಸಿನಿಮಾ ಕೂಡ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಮ್ಯೂಸಿಕ್ ಮಾತ್ರವಲ್ಲ ತಾನು ಒಬ್ಬ ಒಳ್ಳೆಯ ನಿರ್ದೇಶಕ ಎನ್ನುವುದನ್ನು ಈಗಾಗಲೇ ತಮ್ಮ ಕಟಕ ಸಿನಿಮಾದಲ್ಲಿ ಅವರು ಸಾಬೀತು ಮಾಡಿದ್ದಾರೆ. ಆ ಚಿತ್ರದ ನಂತರ ‘ಗಿರ್ಮಿಟ್’ ಎಂಬ ಮತ್ತೊಂದು ಸಿನಿಮಾವನ್ನು ಅವರು ಶುರು ಮಾಡಿದ್ದಾರೆ. ಕೆಜಿಎಫ್-2 ಹಾಡುಗಳ ತಯಾರಿ ಆರಂಭ ಕೆಜಿಎಫ್ […]
‘ರಾಧಾರಮಣ’ ರಾಧಾ ಪಾತ್ರಕ್ಕೆ ಕಿರುತೆರೆಯ ಮತ್ತೋರ್ವ ನಟಿ ಕಾವ್ಯ ಗೌಡ ಎಂಟ್ರಿ
ಕಲರ್ಸ್ ಕನ್ನಡ ವಾಹಿನಿ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಧಾರಮಣ. ಹಿಂದಿನ ಕಾಲದ ಮುದುಕ, ಮುದುಕಿಯರಿಂದ ಹಿಡಿದು ಈಗಿನ ಕಾಲದ ಯುವತಿ, ಯುವಕರ ವರೆಗೂ ರಾತ್ರಿ 9 ಗಂಟೆಯಾದ್ರೆ ಟಿವಿ ಮುಂದೆ ಹಾಜರ್ ಆಗಿ ನೋಡುವ ಧಾರಾವಾಹಿ ಇದಾಗಿದ್ದು, ಅದಕ್ಕೆ ರಾಧಾರಮಣ ಧಾರಾವಾಹಿ ಟಿ.ಆರ್.ಪಿಯಲ್ಲೂ ಮುಂದಿದೆ. ರಾಧಾ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ರಾಧಾ ಮಿಸ್ ಖ್ಯಾತಿಯ ಶ್ವೇತಾ ಪ್ರಸಾದ್ ಈಗ ಸೀರಿಯಲ್ ನಿಂದ ಹೊರಬಂದಿದ್ದಾರೆ. ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಶ್ವೇತಾ ಪ್ರಸಾದ್ ಅವರ ಈ ನಿರ್ಧಾರ ಬಹಿರಂಗವಾಗುತ್ತಿದ್ದ […]
ಉಡುಪಿಯಲ್ಲಿ ಬಲೆಗೆ ಬಿತ್ತು ಭಾರೀ ಗಾತ್ರದ ಮೀನು!
ಉಡುಪಿ:1 ಟನ್‌ಗೂ ಹೆಚ್ಚಿನ ತೂಕವುಳ್ಳ ಮೀನೊಂದು ಮೀನುಗಾರರ ಬಲೆಯ ಶನಿವಾರ ಸಿಕ್ಕಿಬಿದ್ದಿದೆ. ಮಿಥುನ್ ಕುಂದರ್ ಮಾಲೀಕತ್ವದ ದಿವ್ಯಾಂಶಿ ಹೆಸರಿನ ಬೋಟು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಇತ್ತೀಚೆಗೆ ತೆರಳಿತ್ತು. ಈ ವೇಳೆ ಮೀನುಗಾರರು ಬೀಸಿದ ಬಲೆಗೆ ಈ ದೊಡ್ಡ ಮೀನು ಸಿಕ್ಕಿ ಬಿದ್ದಿದೆ. ಈ ರೀತಿಯ ಮೀನು ಸಿಗುವುದು ಬಲು ಅಪರೂಪ ಎಂದು ಮೀನುಗಾರರು ತಿಳಿಸಿದ್ದಾರೆ. ಅಂದಹಾಗೇ ಈ ಭಾರೀ ಗಾತ್ರದ ದೈತ್ಯ ಮೀನನ್ನು ಬೋಟಿನಿಂದ ದಡಕ್ಕೆ ಎಳೆಯಲು ಮೀನುಗಾರರು ಹರಸಾಹಸ ಪಡಬೇಕಾಯಿತು. ಕ್ರೇನ್ ಸಹಾಯದಿಂದ ಎತ್ತಿ […]
ಮೇ12: ಸುಧಾಕರ್ ಪೂಜಾರಿ ಅಭಿಮಾನಿ ಸಂಘದ ವಾರ್ಷಿಕೋತ್ಸವ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಂಸ್ಮರಣಾ ಕಾರ್ಯಕ್ರಮ
ಹಿರಿಯಡಕ: ಸುಧಾಕರ್ ಪೂಜಾರಿ ಅಭಿಮಾನಿ ಸಂಘ (ರಿ.) ಬೊಮ್ಮರಬೆಟ್ಟು ಇದರ 15ನೇ ವರ್ಷದ ವಾರ್ಷಿಕೋತ್ಸವ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಂಸ್ಮರಣಾ ಕಾರ್ಯಕ್ರಮವು ಮೇ12 ರಂದು ಬಸ್ತಿ ಕಲ್ಕುಡ ದೇವಸ್ಥಾನ ವಠಾರದಲ್ಲಿ ನಡೆಯಲಿದೆ. ಸಂಜೆ ಗಂಟೆ 4:30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಸಂಜೆ 7ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ತದಾನಂತರ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮವು 8:30 ಕೆ ನಡೆಯಲಿದ್ದು, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ […]