ಉಡುಪಿಯಲ್ಲಿ ಬಲೆಗೆ ಬಿತ್ತು ಭಾರೀ ಗಾತ್ರದ ಮೀನು!

ಉಡುಪಿ:1 ಟನ್‌ಗೂ ಹೆಚ್ಚಿನ ತೂಕವುಳ್ಳ ಮೀನೊಂದು ಮೀನುಗಾರರ ಬಲೆಯ ಶನಿವಾರ ಸಿಕ್ಕಿಬಿದ್ದಿದೆ. ಮಿಥುನ್ ಕುಂದರ್ ಮಾಲೀಕತ್ವದ ದಿವ್ಯಾಂಶಿ ಹೆಸರಿನ ಬೋಟು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ  ಇತ್ತೀಚೆಗೆ ತೆರಳಿತ್ತು. ಈ ವೇಳೆ ಮೀನುಗಾರರು ಬೀಸಿದ ಬಲೆಗೆ  ಈ ದೊಡ್ಡ ಮೀನು ಸಿಕ್ಕಿ ಬಿದ್ದಿದೆ.  ಈ ರೀತಿಯ ಮೀನು ಸಿಗುವುದು ಬಲು ಅಪರೂಪ  ಎಂದು ಮೀನುಗಾರರು ತಿಳಿಸಿದ್ದಾರೆ.

ಅಂದಹಾಗೇ ಈ ಭಾರೀ ಗಾತ್ರದ  ದೈತ್ಯ ಮೀನನ್ನು ಬೋಟಿನಿಂದ ದಡಕ್ಕೆ ಎಳೆಯಲು ಮೀನುಗಾರರು ಹರಸಾಹಸ ಪಡಬೇಕಾಯಿತು.  ಕ್ರೇನ್ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಹಾಕಲಾಯಿತು.  ಈ ಭಾರೀ ಗಾತ್ರದ ಮೀನು ನೋಡಲು ಬಂದರಿನಲ್ಲಿ ಜನಸ್ತೋಮ ನರೆದಿತ್ತು. 
 ಮೀನನ್ನು ಉಡುಪಿ ಮಾರುಕಟ್ಟೆಗೆ ಸಾಗಿಸಲಾಗಿದೆ.