ರವಿ ಬಸ್ರೂರ್ ನಿರ್ದೇಶನದ “ಗಿರ್ಮಿಟ್” ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್

ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಹೆಚ್ಚು ಸದ್ದು ಮಾಡಿದ್ದು. ಆ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಆದರೆ, ಈಗ ರವಿ ಬಸ್ರೂರ್ ಅವರ ನಿರ್ದೇಶನದ ಸಿನಿಮಾ ಕೂಡ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ.

ಮ್ಯೂಸಿಕ್ ಮಾತ್ರವಲ್ಲ ತಾನು ಒಬ್ಬ ಒಳ್ಳೆಯ ನಿರ್ದೇಶಕ ಎನ್ನುವುದನ್ನು ಈಗಾಗಲೇ ತಮ್ಮ ಕಟಕ ಸಿನಿಮಾದಲ್ಲಿ ಅವರು ಸಾಬೀತು ಮಾಡಿದ್ದಾರೆ. ಆ ಚಿತ್ರದ ನಂತರ ‘ಗಿರ್ಮಿಟ್’ ಎಂಬ ಮತ್ತೊಂದು ಸಿನಿಮಾವನ್ನು ಅವರು ಶುರು ಮಾಡಿದ್ದಾರೆ. ಕೆಜಿಎಫ್-2 ಹಾಡುಗಳ ತಯಾರಿ ಆರಂಭ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೆಲಸದ ನಡುವೆಯೇ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ.

ಅವರ ‘ಗಿರ್ಮಿಟ್’ ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಇದೊಂದು ಮಕ್ಕಳ ಸಿನಿಮಾವಾಗಿದೆ. ಗಿರ್ಮಿಟ್ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಪೋಸ್ಟರ್ ರಿಲೀಸ್ ಆಗಿದೆ.

ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಹತ್ತಾರು ಮಕ್ಕಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಗಿರ್ಮಿಟ್ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.