ಆಚಾರ್ಯಾಸ್‌ ಏಸ್‌: ಸುಮಂತ್‌ ಕಾರಂತ್‌, ಆದಿತ್ಯ ಎ. ರಾವ್‌ ಅವರಿಗೆ ರ್ಯಾಂಕ್

ಉಡುಪಿ, ಮೇ 7: 9ನೇ ತರಗತಿ, ಎಸೆಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್‌, ಕಾಮರ್ಸ್‌ ಹಾಗೂ ಬ್ಯಾಕಿಂಗ್‌ ಪ್ರವೇಶ ಪರೀಕ್ಷೆಗಳ ಉತ್ಕೃಷ್ಟ ಫಲಿತಾಂಶಕ್ಕಾಗಿ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಸುಮಂತ್‌ ಕಾರಂತ್‌ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್‌, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆದಿತ್ಯ ಎ. ರಾವ್‌ ರಾಜ್ಯಕ್ಕೆ 10ನೇ ರ್ಯಾಂಕ್‌ ಪಡೆದಿದ್ದಾರೆ. 10 ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸುಮಂತ್‌ ಕಾರಂತ್‌ ಮತ್ತು ಆದಿತ್ಯ ಎ. […]

ಬಸವಣ್ಣ ನವರ ಕಾಯಕವೇ ಕೈಲಾಸ ಸಂದೇಶ ಎಲ್ಲರಿಗೂ ಸ್ಪೂರ್ತಿಯಾಬೇಕು: ಡಿಸಿ ಹೆಪ್ಸಿಬಾ  

ಉಡುಪಿ, ಮೇ 7:  ಬಸವಣ್ಣ ನವರ ಕಾಯಕವೇ ಕೈಲಾಸ ಸಂದೇಶ ಎಲ್ಲರಿಗೂ ಸ್ಪೂರ್ತಿಯಾಗಬೇಕು, ಸರಕಾರಿ ಅಧಿಕಾರಿ, ಸಿಬ್ಬಂದಿಗಳೂ ಸಹ ತಮ್ಮ ದಿನನಿತ್ಯದ ಕೆಲಸದಲ್ಲಿ ಬಸವಣ್ಣನವರ ಸಂದೇಶಗಳನ್ನು ಅಳವಡಿಸಿಕೊಂಡು ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ತಿಳಿಸಿದ್ದಾರೆ. ಅವರು ಮಂಗಳವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಬಸವ ಜಯಂತಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಬಸವಣ್ಣನವರ ವಚನಗಳನ್ನು ತಿಳಿಯದವರೇ […]

ಜಿಲ್ಲೆಯ ವಿಕಲಚೇತನರಿಗೆ ದೊರೆಯಲಿದೆ ಕೃತಕ ‘ಆವಯವ’

ಉಡುಪಿ, ಮೇ 7 : ಉಡುಪಿ ಜಿಲ್ಲೆಯಲ್ಲಿನ ವಿಕಲಚೇತನರು ಕೃತಕ ಆವಯವಗಳ ಹುಡುಕಾಟಕ್ಕೆ ಶ್ರಮ ಪಡಬೇಕಿಲ್ಲ, ಖಾಸಗಿಯಲ್ಲಿ ದುಬಾರಿ ದರ ತೆರುವ ಅವಶ್ಯಕತೆಯಿಲ್ಲ, ವಿಕಲಚೇತನರು ಸಾಮಾನ್ಯರಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅನುಕೂಲವಾಗುವಂತ ಕೃತಕ ಆವಯವಗಳು ಇನ್ನು  ಉಡುಪಿ ಯಲ್ಲಿಯೇ ದೊರೆಯಲಿದೆ.  ಪ್ರಸ್ತುತ ಉಡುಪಿ ರೆಡ್ ಕ್ರಾಸ್ ಭವನದಲ್ಲಿ ಈ ಕೃತಕ ಆವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರ ಮೇ 8 ರಿಂದ ಪ್ರಾರಂಭವಾಗಲಿದೆ. ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಆರಂಭವಾಗಿರುವ ಈ ಕೇಂದ್ರದಲ್ಲಿ ಮೊದಲ […]