ಎಂ.ಎನ್. ರಾಜೇಂದ್ರ ಕುಮಾರ್‌ಗೆ ‘ಗ್ಲೋಬಲ್ ಲೀಡರ್‌ಶಿಪ್’ ಪ್ರಶಸ್ತಿ ಮಲೇಷಿಯಾದ ಕೌಲಾಲಂಪುರದಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರು: ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಹಕಾರಿ ರಂಗದಲ್ಲಿ ಮಾಡಿರುವ ಅಪ್ರತಿಮ ಸಾಧನೆಯನ್ನು ಗುರುತಿಸಿ ಅವರಿಗೆ ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಸ್ಟಡೀಸ್ ಸಂಸ್ಥೆ ಔಟ್ಸ್ಟಾಂಡಿಂಗ್ ‘ಗ್ಲೋಬಲ್ ಲೀಡರ್ಶಿಪ್ ಅವಾರ್ಡ್’ ನೀಡಿ ಗೌರವಿಸಿದೆ.
ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಇಂಡೋ-ಮಲೇಷಿಯಾ ಎಕನಾಮಿಕ್ಸ್ ಕೋ-ಆಪರೇಷನ್ ಸೆಮಿನಾರ್‍ನಲ್ಲಿ ಮಲೇಷಿಯಾ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಮುಹಮ್ಮದ್ ಭಕ್ತಾರ್ ಬಿನ್ ವಾನ್ ಚಿಕ್‍ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಮಲೇಷಿಯಾ ವಾಣಿಜ್ಯೋದ್ಯಮ ಅಭಿವೃದ್ಧಿ ಸಚಿವರಾದ ದಾತೋ ಸೆರಿ ಮೊಹಮ್ಮದ್ ರೆಜುವಾನ್ ಮದ್ ಯೂಸಫ್, ಹೈ ಕಮೀಷನ್ ಆಫ್ ಇಂಡಿಯಾ ಮಲೇಷಿಯಾದ ಹೈ ಕಮೀಷನರ್ ಮಿೃದುಲ್ ಕುಮಾರ್, ಇನ್‌ಸ್ಟಿಟ್ಯೂಟ್  ಆಫ್ ಎಕನಾಮಿಕ್ಸ್ ಸ್ಟಡೀಸ್ ನ ಮಾಜಿ ಅಧ್ಯಕ್ಷ ಯೋಗೇಂದ್ರ ಪ್ರಸಾದ್, ಗುಜರಾತ್ ಸ್ಟೇಟ್ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ನ ಮಾಜಿ ಅಧ್ಯಕ್ಷರಾದ ಡಾ.ಎಸ್.ಕೆ.ನಂದಾ, ಸುದರ್ಶನ್ ವರ್ಲ್ಡ್‌ ಅಧ್ಯಕ್ಷ ಡಾ. ಬಿ.ಕೆ. ಸುದರ್ಶನ್, ಸಂಸ್ಥೆಯ ಪ್ರ. ಕಾರ್ಯದರ್ಶಿ ರಾಜೇಂದ್ರ ಕುಮಾರ್ ಹಾಗೂ ಕುಮಾರಿ ಸಂಗೀತಾ ಸಿಂಗ್ ಉಪಸ್ಥಿತರಿದ್ದರು.