ನಾಳೆ ಎಸೆಸ್ಸೆಲ್ಸಿ ಫಲಿತಾಂಶ ಪ್ರಕಟ

ಎಸೆಸ್ಸೆಲ್ಸಿ ಫಲಿತಾಂಶ ನಾಳೆ ಬೆಳಗ್ಗೆ ಪ್ರಕಟವಾಗಲಿದೆ. ಬೆಳಗ್ಗೆ ಸುಮಾರು 11.30 ರ ವೇಳೆಗೆ ಪ್ರೌಢಶಿಕ್ಷಣ ಮಂಡಳಿ‌ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಲಿದೆ. ಜಿಲ್ಲಾವಾರು, ಹಾಗೂ ಅತೀ ಹೆಚ್ಚು ಅಂಕ‌ ಪಡೆದವರ ಮಾಹಿತಿ ಸುದ್ದಿಗೋಷ್ಟಿಯಲ್ಲಿ ಸಿಗಲಿದೆ. http://www.karresults.nic.in/ನಲ್ಲಿ ಫಲಿತಾಂಶ ಪಡೆಯಬಹುದು.

ಪಡ್ಡೆಗಳ ಕಣ್ಣು ಲಾಕ್ ಮಾಡಿದ ಇವಳು, ಈಗ ಹಾರ್ಟ್ ಹ್ಯಾಕ್ ಮಾಡೋಕೆ ಹೊರಟಿದ್ದಾಳೆ: ಮತ್ತೆ ಬಂದಳು ಪ್ರಿಯಾ

ಕಣ್ ಹೊಡೆದು ಎಲ್ಲಾ ಪಡ್ಡೆಗಳ ಕಣ್ಣಂಚಿನ ಚೆಲುವೆಯಾಗಿ ಸಖತ್ ಸದ್ದು ಮಾಡಿದ್ದ   ಪ್ರಿಯಾ ಪ್ರಕಾಶ್ ವಾರಿಯರ್ ಕುರಿತು ನಿಮಗೆ ಹೆಚ್ಚೇನು ಹೇಳಬೇಕಿಲ್ಲ ಬಿಡಿ. ಒರು ಆಡಾರ್ ಲವ್ ಚಿತ್ರದ ಸಣ್ಣ ದೃಶ್ಯದಿಂದ  ಪ್ರಿಯಾ ಪ್ರಕಾಶ್ ವಾರಿಯರ್  ಅವರ ಬದುಕೇ ಬದಲಾಗಿತ್ತು. ಈಗ ಅದೇ ವಾರಿಯರ್ “ಲವ್ ಹ್ಯಾಕರ್ಸ್” ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ  ಸೈಬರ್ ಕ್ರೈಮ್ ಕುರಿತಾದ ಸಿನಿಮಾ. ಸಖತ್ ಥ್ರಿಲ್ಲಾಗಿರುವ ದೃಶ್ಯಗಳು ಚಿತ್ರದಲ್ಲಿದೆಯಂತೆ.   ಚಿತ್ರದಲ್ಲಿ ಪ್ರಿಯಾ  ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸೈಬರ್ ಸುಳಿಯಲ್ಲಿ ಸಿಲುಕಿಕೊಳ್ಳುವ ಯುವತಿ […]

ಮೇ 10 ರಂದು ಮೈಮನ ಪೋಣಿಸಲಿದೆ ಹಿರಿಯಡ್ಕದ ಹುಡುಗ ಯಶವಂತ್‌ ಶೆಟ್ಟಿ ಅಭಿನಯದ “ಸೂಜಿದಾರ”

ಮೂವಿ ಮಸಾಲ:  ಜನಪ್ರಿಯ ರಂಗಕರ್ಮಿ ಮೌನೇಶ್ ಬಡಿಗೇರ್ ಅವರ ನಿರ್ದೇಶನ, ಬಹುಭಾಷಾ ನಟಿ ಹರಿಪ್ರಿಯಾ ಹಾಗೂ  ಉಡುಪಿ ಜಿಲ್ಯಲೆಯ ಹಿರಿಯಡ್ಕದ ಯಶವಂತ್‌ ಶೆಟ್ಟಿ  ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸೂಜಿದಾರ’  ಇದೇ ಮೇ 10ರಂದು  ಸಿನಿ ಪ್ರಿಯರ ಮೈಮನ ಪೋಣಿಸಲಿದೆ. ಸೂಜಿ ಮತ್ತು ದಾರ ಹೊಸತೊಂದು ಕಸೂತಿಯೇ ಸೃಷ್ಟಿಯಾಗುವಂತೆ  ಈ ಸಿನಿಮಾದ ಕತೆ ಕೂಡ ನಮ್ಮೊಳಗಿನ ಭಾವನೆಗಳನ್ನು ಅಚ್ಚುಕಟ್ಟಾಗಿ ಪೋಣಿಸಲಿದೆಯಾ ಅನ್ನುವ ಪ್ರಶ್ನೆ ಪ್ರೇಕ್ಷಕನಲ್ಲಿ ಹುಟ್ಟಿಕೊಂಡಿದೆ. ಸೂಕ್ಷ್ಮಸಂವೇದನೆಯ ಭಾವನೆಗಳೇ ಫೋಕಸ್ ಆದಂತಿರುವ ಚಿತ್ರದ ಟ್ರೈಲರ್ ಕೂಡ ಈಗಾಗಲೇ ಸದ್ದು ಮಾಡಿದ್ದು […]

ರೆಸಾರ್ಟ್​ಗೆ ಸಿಎಂ: ಆಸುಪಾಸಿನಲ್ಲಿ ಮಾಧ್ಯಮಗಳಿಗೆ ನಿರ್ಬಂಧ..!

ಉಡುಪಿ: ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹಾಗೂ ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರು ಮತ್ತೆ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದಾರೆ. ಉಪ ಕದನದ ನಡುವೆಯೂ ಉಡುಪಿ ರೆಸಾರ್ಟ್ಗೆ ಪ್ರಯಾಣಿಸಿರುವ ತಂದೆ ಹಾಗೂ ಮಗ ಸಾಯಿರಾಧಾ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಐದು ದಿನ ಇಬ್ಬರೂ ನಾಯಕರು ರೆಸಾರ್ಟ್ನಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ರೆಸಾರ್ಟ್ ಆಸುಪಾಸಿನಲ್ಲಿ ಮಾಧ್ಯಮಗಳಿಗೆ ಮತ್ತೆ ನಿರ್ಬಂಧ ಹೇರಿದ್ದು ವರದಿಗಾರಿಕೆಗೆ ತೆರಳಿದ ವರದಿಗಾರರು ಹಾಗೂ ಪೊಲೀಸರ ನಡುವೆ ವಾಕ್ಸಮರ ನಡೆದಿದೆ. ಸಿಎಂ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಪದೇ […]

ತಂಪು ತಂಪು ಕೂಲ್ ಕೂಲ್ “ಕೂಡ್ಲು”: ಬೇಸಿಗೆಗೂ ಕರಗದ ಈ ಜಲಪಾತದ ಚಂದ ನೋಡಿ ಬನ್ನಿ

ಬೇಸಿಗೆಯಲ್ಲೂ  ಇಲ್ಲಿ ತಂಪು ತಂಪು ಕೂಲ್ ಕೂಲ್ ಎನ್ನುವ ಹಿತವಿರುತ್ತದೆ. ಬಿಸಿಲಿನ ಬೇಗೆಗೆ ಬಳಲಿ ಬೆಂಡಾಗಿ ಇಲ್ಲಿಗೆ ಬಂದರೆ ಆಹಾ ಜಲಪಾತದ ತಂಪಿಗೆ ಮೈ ಮನವೆಲ್ಲಾ ಬೆರಗಾಗುತ್ತದೆ.  ಬೇಸಿಗೆಯಲ್ಲೂ ಕಾಡುವ ಈ ಜಲಪಾತವೇ ಉಡುಪಿ ಜಿಲ್ಲೆಯ ಕೂಡ್ಲು ಎನ್ನುವ ಸುರಸುಂದರಿ. ಆಗುಂಬೆ- ಹೆಬ್ರಿ ಮಾರ್ಗದಲ್ಲಿ ಸಿಗುವ ಈ ಕೂಡ್ಲು ತೀರ್ಥ ಜಲಪಾತಕ್ಕೆ  ದಾರಿ ಹಿಡಿದರೆ, ದೂರದಲ್ಲೆಲ್ಲೋ ಜಲಪಾತದ ಸಂಗೀತ ಕೇಳಿಸುತ್ತದೆ. ಸುತ್ತಲೂ ಮುಗಿಲ ನೆತ್ತಿಗೆ ತಾಗಿದಂತೆ ನಿಂತಿರುವ ಹಸಿರ ಬೆಟ್ಟದ ತುದಿಯನ್ನು ನೋಡುತ್ತ ಈ ಕಾಡಿನಲ್ಲಿ ಚಾರಣ […]